More

    ಸ್ಥಳೀಯ ಸಂಸ್ಥೆಗಳ‌ ವಿಧಾನ ಪರಿಷತ್ ಚುನಾವಣೆ, ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಹೇಳಿಕೆ, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜೀವ ಭಯ !

    ವಿಜಯಪುರ: ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಸೂತ್ರದಡಿ ಅವಿರೋಧ ಆಯ್ಕೆಗೆ ನಡೆಸಿದ್ದ ಹುನ್ನಾರ ತಡೆಯಲು ಅನೇಕ ಗ್ರಾಪಂ ಸದಸ್ಯರ ಒತ್ತಾಯದ ಮೇರೆಗೆ ಚುನಾವಣೆ ಕಣಕ್ಕೆ ಇಳಿದಿದ್ದೇನೆ. ಕಣದಿಂದ ಹಿಂದೆ ಸರಿಸಲು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜೀವ ಭಯ ಬಂದಿದೆ. ಅದನ್ನು ಲೆಕ್ಕಿಸದೆ ಕಣಕ್ಕೆ ಇಳಿದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಹೇಳಿದರು.
    ಅವಳಿ ಜಿಲ್ಲೆಯ ಸಾವಿರಾರು ಮತದಾರರು ಚುನಾವಣೆ ಕಣದಿಂದ ಹಿಂದೆ ಸರಿಯದಂತೆ ಒತ್ತಾಯಿಸಿದರು. ಪ್ರಜಾಸತ್ತಾತ್ಮಕ ವಾಗಿ ಸಿಕ್ಕ ಮತದಾನದ ವ್ಯವಸ್ಥೆ ಉಳಿಸಿ ಎಂದು ಮನವಿ ಮಾಡಿದ ಹಿನ್ನೆಲೆ ಕಣದಲ್ಲಿ ಉಳಿದಿರುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಕಣದಿಂದ ಹಿಂದೆ ಸರಿಯಲು ಹೇಳಿದರು. ಬಿಜೆಪಿ ಧುರೀಣರಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಸಹ ಕಣದಿಂದ ಹಿಂದೆ ಸರಿಯಲು ಒತ್ತಾಯಿಸಿದರು. ಆದರೆ ಮತದಾರರ ಒತ್ತಾಸೆ ಮೇರೆಗೆ ಕಣದಲ್ಲಿ ಉಳಿದಿರುವುದಾಗಿ ಲೋಣಿ ತಿಳಿಸಿದರು.
    ಬಸನಗೌಡ ಪಾಟೀಲ ಯತ್ನಾಳ ಸ್ವಾಭಿಮಾನದಿಂದ ಗೆದ್ದು ಬಂದಂತೆ ನಾನೂ ಗೆದ್ದು ಬರುವ ವಿಶ್ವಾಸ ಇದೆ. ಯಾವುದೇ ಆದೆ ಆಮಿಷಕ್ಕೆ ಒಳಗಾಗದೇ ಯಾವುದೇ ಅಭ್ಯರ್ಥಿಗೆ ಬೆಂಬಲ ಸೂಚಿಸದೆ ಕಣದಲ್ಲಿದ್ದು ಹೋರಾಡುವೆ ಎಂದರು.
    ಅಖಂಡ ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳ ಅರಿವಿದೆ. ಅವರ ಗೌರವ ಧನ ಹೆಚ್ಚಿಸಲು ಒತ್ತಾಯಿಸಿದ್ದೇನೆ ಎಂದರು.
    ಗ್ರಾಪಂ ಸದಸ್ಯರ ಅಧಿಕಾರ ಇಂದು ಮೊಟಕುಗೊಳಿಸಿದ್ದಾರೆ. ಅವರ ಗೌರವ ಧನ ಇನ್ನೂ ಹೆಚ್ಚಿಸಬೇಕಿದೆ. ಮೂಲ ಸೌಕರ್ಯಗಳು ಅವರಿಗೆ ಸಿಗುತ್ತಿಲ್ಲ. ಬಸ್ ಪಾಸ್ ಉಚಿತ ಮಾಡಬೇಕು, ಸದಸ್ಯರ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಸಿಗಬೇಕು. ಆ ನಿಟ್ಟಿನಲ್ಲಿ ಶ್ರಮಿಸುವೆ ಎಂದರು. ಎರಡೂ ರಾಷ್ಟ್ರೀಯ ಪಕ್ಷಗಳು ಭಯ ಕೊಡುತ್ತಿವೆ. ಹೆಸರು ಕೆಡಿಸುವುದಾಗಿ ನನಗೆ ಹಾಗೂ ನನ್ನ ಕುಟುಂಬದವರಿಗೆ ಹೇಳುತ್ತಿದ್ದಾರೆ. ಬರುವ ದಿನಗಳಲ್ಲಿ ಅದನ್ನೆಲ್ಲ ಬಹಿರಂಗ ಪಡಿಸುವೆ. ಇಂದು ಎಸ್ ಪಿ ಅವರಿಗೆ ಮನವಿ ಕೊಟ್ಟು ಭದ್ರತೆ ಪಡೆಯುವ ವಿಚಾರದಲ್ಲಿದ್ದೇನೆ ಎಂದರು.
    ಕಳೆದ ಬಾರಿ ಕಾಂಗ್ರೆಸ್ ಟಿಕೆಡ್ ನೀಡುವ ಭರವಸೆ ನೀಡಿತ್ತು. ಸಿಂದಗಿ ಬೈ ಎಲೆಕ್ಷನ್ ವೇಳೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಎಂ‌.ಬಿ. ಪಾಟೀಲರ ಕುಟುಂಬದ ಬದಲು ಹೊಸಬರಿಗೆ ಅವಕಾಶ‌ ಕೊಡಿ ಎಂದಾಗ ಎಸ್.ಆರ್. ಪಾಟೀಲರಿಗೆ ಒಂದೇ ಟಿಕೆಟ್ ಕೊಡುವುದಾಗಿ ಹೇಳಿದ್ದರು‌. ನೀನು ಪ್ರಯತ್ನ ಮಾಡಬೇಡ ಎಂದಿದ್ದರು. ಆದರೆ ಎಸ್.ಆರ್. ಪಾಟೀಲರಿಗೆ ಕೊಟ್ಟಿಲ್ಲ ಎಂಬ ನೋವಿದೆ. ಸುನೀಲಗೌಡರಿಗೆ ಕೊಟ್ಟಿದ್ದರಿಂದ ನಾನು ಕಣಕ್ಕೆ ಇಳಿದಿದ್ದೆನೆ. ಎಂ. ಬಿ. ಪಾಟೀಲರು ದೊಡ್ಡವರು ಬೆಳೆದಿದ್ದಾರೆ. ಅವರ ಮನೆಗೆ ಕೊಡೋದರಿಂದ ಮತ್ತೊಬ್ಬರಿಗೆ ಅವಕಾಶ ತಪ್ಪಿದೆ.
    ಹೀಗಾಗಿ ಬಹಳಷ್ಟು ಜನರಿಗೆ ಅಸಮಾಧಾನ ಆಗಿದೆ. ಯಾರಿಗೆಲ್ಲ ಅಸಮಾಧಾನ ಇದೆ ಅವರೆಲ್ಲ ನನ್ನ ಜೊತೆಗಿಲ್ಲ. ನಾನು ಪಕ್ಷೇತರ ಅಭ್ಯರ್ಥಿ. ಯಾರನ್ನೂ ನಾನು ಸಂಪರ್ಕ ಸಾಧಿಸಿಲ್ಲ. ಬರುವ ದಿನಗಳಲ್ಲಿ ಎಲ್ಲರನ್ನೂ ಭೇಟಿ ಮಾಡುವೆ ಎಂದರು.
    ನನಗೆ ಯಾವುದೇ ರಾಷ್ಟ್ರೀಯ ಪಕ್ಷದ ಮುಖಂಡರು ಬೆಂಬಲ ಸೂಚಿಸಿಲ್ಲ. ಗ್ರಾಮ ಪಂಚಾಯಿತಿ‌ ಸದಸ್ಯ ಮತದಾರರು ಅಗಾಧ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
    ಎರಡೂ ರಾಷ್ಟ್ರೀಯ ಪಕ್ಷಗಳ ಬಳಿ ಹಣ ಬಲ, ಕಾರ್ಯಕರ್ತರ ಬಲ ಇದೆ. ಆದರೆ ನನಗೆ ಮತದಾರರ ಬಲ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಪ್ರಬಲ ಪೈಪೋಟಿದಾರರೇ ಆಗಿದ್ದಾರೆಂದರು.
    ಹಾಲುಮತ ಸಮಾಜದ ಮುಖಂಡ ಬೀರಪ್ಪ ಪೂಜಾರಿ, ಎಂ.ಎಸ್. ಪಠಾಣ, ರಾಜುಗೌಡ ಪಾಟೀಲ, ಜಾಕೀರ ಮುಲ್ಲಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts