More

    ಸೌಹಾರ್ದತೆಗೆ ಧಕ್ಕೆಯಾದರೆ ಕಠಿಣ ಕ್ರಮ

    ಅಳ್ನಾವರ: ಲಾಕ್​ಡೌನ್ ಉಲ್ಲಂಘನೆ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಚಟುವಟಿಕೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡ ಸಿಪಿಐ ಎಸ್.ಸಿ. ಪಾಟೀಲ ಹೇಳಿದರು.

    ಪಟ್ಟಣದಲ್ಲಿ ಏರ್ಪಡಿಸಿದ್ದ ಕರೊನಾ ನಿಯಂತ್ರಣ ಕ್ರಮ ಹಾಗೂ ಧಾರ್ವಿುಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಜನಸಾಂದ್ರತೆ ಇಕ್ಕಟ್ಟಿನಿಂದ ಮಹಾಮಾರಿ ಕರೊನಾ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

    ಹೆಚ್ಚುವರಿ ಸಿಪಿಐ ಎಸ್.ಎಸ್. ಕಮತಗಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಕೋಮು ಸೌಹಾರ್ದತೆ ಕುರಿತ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಹೇಳಿದರು.

    ಸ್ಥಳೀಯ ಪಿಎಸ್​ಐ ಎಸ್.ಆರ್. ಕಣವಿ ಮಾತನಾಡಿದರು. ಪಟ್ಟಣದ ಹಿಂದು, ಮುಸ್ಲಿಂ ಸಮಾಜದ ಹಿರಿಯರು ಇದ್ದರು.

    ಸೋಂಕು ನಿಯಂತ್ರಣಕ್ಕೆ ಎಲ್ಲರೂ ಮನೆಯಲ್ಲೇ ಇರಿ: ಕರೊನಾ ಸೋಂಕಿನಿಂದಾಗಿ ಏ. 14ರವರೆಗೆ ಲಾಕ್​ಔಟ್ ಇರುವುದರಿಂದ ಏ. 9ರಂದು ಶಭೇ ಬರಾತ ಜಾಗರಣೆಯನ್ನು ಮುಸ್ಲಿಮರು ಮನೆಯಲ್ಲೇ ಆಚರಿಸಬೇಕು ಎಂದು ಸಿಪಿಐ ಬಸವರಾಜ ಕಲ್ಲಮ್ಮನವರ ಹೇಳಿದರು. ಕುಂದಗೋಳ ಪಟ್ಟಣದಲ್ಲಿ ಸೋಮವಾರ ಪೊಲೀಸ್ ಠಾಣೆ ಆವರಣದಲ್ಲಿ ಜಾಗೃತಿ, ಭಾವೈಕ್ಯತೆ ಸಭೆಯಲ್ಲಿ ಅವರು ಮಾತನಾಡಿ, ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡದೇ ಕರೊನಾ ಹತೋಟಿಗೆ ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಅನವಶ್ಯಕವಾಗಿ ಹೊರಗಡೆ ಸಂಚರಿಸುವುದರಿಂದ ಈ ಸೋಂಕá- ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು. ಅಂಜುಮನ್ ಕಮಿಟಿ ಅಧ್ಯಕ್ಷ ರಾಜೇಸಾಬ್ ಕಳ್ಳಿಮನಿ, ಪ.ಪಂ. ಸದಸ್ಯ ಮಲ್ಲಿಕಾರ್ಜುನ ಕಿರೇಸೂರ, ವಾಗೇಶ ಗಂಗಾಯಿ, ಸಲೀಂ ಕ್ಯಾಲಕೊಂಡ, ಗಣೇಶ ಕೊಕಾಟೆ, ಪ್ರವೀಣ ಬಡ್ನಿ, ಹನುಮಂತಪ್ಪ ರಣತೂರ, ಹನುಮಂತಪ್ಪ ಮೇಲಿನಮನಿ, ಕಹೀಮ್ ನಾಲಬಂದ, ಜಾಕೀರ ಯರಗುಪ್ಪಿ ಇದ್ದರು.

    ಮನೆಯಲ್ಲೇ ಹಬ್ಬ ಆಚರಿಸಲು ಸಲಹೆ: ಪ್ರಪಂಚದಾದ್ಯಂತ ಕರೊನಾ ಸೋಂಕಿನಿಂದಾಗಿ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಅದರ ನಿಯಂತ್ರಣಕ್ಕಾಗಿ ಲಾಕ್​ಔಟ್ ಜಾರಿಗೆ ಮಾಡಿದೆ. ಈ ಸಂದರ್ಭದಲ್ಲಿ ಹಬ್ಬ-ಹರಿದಿನವನ್ನು ಮನೆಯಲ್ಲಿಯೇ ಆಚರಣೆ ಮಾಡುವ ಮೂಲಕ ಕರೊನಾ ಸೋಂಕನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕು ಎಂದು ಪಿಎಸ್​ಐ ನವೀನ ಜಕ್ಕಲಿ ಹೇಳಿದರು. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಾಗೃತಿ, ಭಾವೈಕ್ಯತೆ ಸಭೆಯಲ್ಲಿ ಅವರು ಮಾತನಾಡಿ, ಶಭೇ ಬರಾತ ಅನ್ನು ಮುಸ್ಲಿಮರು ಮನೆಯಲ್ಲಿಯೇ ಆಚರಿಸಬೇಕು ಎಂದರು. ಪ್ರೊಬೇಷನರಿ ಪಿಎಸ್​ಐ ಪ್ರವೀಣ ನೇಸರಗಿ, ಅಂಜುಮನ್ ಕಮಿಟಿ ಪದಾಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts