More

    ಸೌಲಭ್ಯಗಳಿಗಾಗಿ ಹೋರಾಟ ಅಗತ್ಯ -ಸಚಿವ ಶಿವರಾಜ ತಂಗಡಗಿ

    ದಾವಣಗೆರೆ: ಭೋವಿ ಸಮಾಜದ ಸಂಘಟನೆಗೆ ಸಿದ್ಧ್ದರಾಮೇಶ್ವರರ ರಥೋತ್ಸವವೇ ಸಾಕ್ಷಿಯಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ದಕ್ಕಬೇಕಿರುವ ಸೌಲಭ್ಯ ಪಡೆದುಕೊಳ್ಳಲು ಸಮಾಜ ಹೋರಾಟ ಮಾಡಬೇಕು. ಅಂಬೇಡ್ಕರ್ ಆಶಯದಂತೆ ಶಿಕ್ಷಣಕ್ಕೂ ಸಮಾಜ ಆದ್ಯತೆ ನೀಡಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

    ದಾವಣಗೆರೆಯಲ್ಲಿ ಸೋಮವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ದೇವರ 61ನೆಯ ರಥೋತ್ಸವಕ್ಕೆಚಾಲನೆ ನೀಡಿ ಮಾತನಾಡಿದರು.
    ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವಯಸ್ಸಿನಲ್ಲಿ ಚಿಕ್ಕವರಿದ್ದರೂ ಸಮಾಜ ಸಂಘಟನೆಯಲ್ಲಿ ಅವರ ಕೆಲಸ ದೊಡ್ಡದು. ಸಮುದಾಯದ ಒಗ್ಗಟ್ಟಿನ ದೃಷ್ಟಿಯಿಂದ ದಾವಣಗೆರೆ, ಚಿತ್ರದುರ್ಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಏಕೈಕ ಮಠಾಧೀಶರಾಗಿ ಸಮಾಜ ಮನ್ನಡೆಸುತ್ತಿದ್ದಾರೆ. ಸ್ವಾಮೀಜಿ ಕರೆ ನೀಡಿದರೆ ಲಕ್ಷಾಂತರ ಜನ ಸೇರುತ್ತಾರೆ. ಶೀಗಳು ಒಂದು ಜಾತಿಗೆ ಸೀಮಿತರಾಗಿ ಉಳಿದಿಲ್ಲ. ಎಲ್ಲ ಸಮಾಜದ ಮಠಾಧೀಶರನ್ನು ಆಹ್ವಾನಿಸಿ ಆ ಎಲ್ಲ ಸಮಾಜಗಳ ಸಂಘಟನೆಗೂ ಶಕ್ತಿಯಾಗಿದ್ದಾರೆ ಎಂದರು.

    ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಸಿದ್ಧರಾಮೇಶ್ವರರು ಧಾರ್ಮಿಕ ವಿಚಾರಗಳು ಮಾತ್ರವಲ್ಲದೆ ಸಮಾಜೋಧಾರ್ಮಿಕ, ಮಾನವನ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ವಿಷಯಗಳನ್ನು ವಚನಗಳಲ್ಲಿ ನೀಡಿದ್ಧಾರೆ. ಅವರೊಬ್ಬ ಕರ್ಮಯೋಗಿ, ಶಿವಯೋಗಿ, ಹಠಯೋಗಿ ಎಂದು ಬಣ್ಣಿಸಿದರು.
    ಜ್ಞಾನ ಮತ್ತು ಸತ್ಯವು ಸೂರ್ಯನಂತೆ ಪ್ರಕಾಶಿಸಲ್ಪಡುವವರೇ ಶ್ರೇಷ್ಠ ಗುರುಗಳು. ಲಿಂ. ಸಿದ್ಧರಾಮೇಶ್ವರ ಸ್ವಾಮೀಜಿ ಅಂತಹ ವ್ಯಕ್ತಿತ್ವ ಹೊಂದಿದವರು. ಅವರು ಕಾಯಕಯೋಗಿ, ಬಾಲ ತಪಸ್ವಿಯೂ ಆಗಿದ್ದರು. ಪ್ರಾಮಾಣಿಕ ಪಾರದರ್ಶಕ ಜೀವನ ನಡೆಸಿ ಆದರ್ಶಪುರುಷರಾಗಿದ್ದಾರೆ ಎಂದು ಹೇಳಿದರು.

    ಕುಂಚಿಟಿಗರ ಸಮಾಜದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಭೋವಿ ಸಮಾಜದ ಲಿಂ.ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಹಳ್ಳಿ-ಹಳ್ಳಿಗೆ ತೆರಳಿ ಸಮಾಜದ ಜಾಗೃತಿ ಮೂಡಿಸಿದ್ದರು. ಈಗಿನ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
    ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭೋವಿ ಸಮಾಜ ಕಟ್ಟುವ ದಿಸೆಯಲ್ಲಿ ಇಮ್ಮಡಿ ಸಿದ್ಧ್ದರಾಮೇಶ್ವರ ಶ್ರೀಗಳಿಗೆ ಸಮುದಾಯದವರೂ ಕೈಜೋಡಿಸಬೇಕು ಎಂದು ಆಶಿಸಿದರು.
    ಸಮಾಜದ ಮುಖಂಡರಾದ ಡಿ.ಬಸವರಾಜ್, ಎಚ್.ಜಯಣ್ಣ, ಎಚ್. ವೆಂಕಟೇಶ್, ಆರ್. ಶ್ರೀನಿವಾಸ್, ಬ್ಯಾಂಕ್ ರಾಮಣ್ಣ, ಓದೋ ಗಂಗಪ್ಪ, ಪಿ.ಮಂಜುನಾಥ್, ನಾಗರಾಜ್, ಹರಪನಹಳ್ಳಿ ಆಂಜಿನಪ್ಪ, ಶೇಖರಪ್ಪ, ದೇವರಾಜ, ವಿನಾಯಕ,ಎಚ್.ಡಿ.ವಿಜಯಕುಮಾರ್, ವಿ.ಗೋಪಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts