More

    ಸೋಲೂರು ವೃತ್ತದಲ್ಲಿ ಪ್ರತಿನಿತ್ಯ ಬಸ್ ವ್ಯವಸ್ಥೆ ಇಲ್ಲದೆ ಪರದಾಟ

    ಕುದೂರು: ಕುಣಿಗಲ್ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ75ರ ಸೋಲೂರು ವೃತ್ತದಲ್ಲಿ ಪ್ರತಿನಿತ್ಯ ರಸ್ತೆಗೆ ಬ್ಯಾರಿಕೇಡ್ ಅಡ್ಡಹಾಕಿ ಪ್ರಯಾಣಿಕರು ಬಸ್ ಹತ್ತುವ ಪ್ರಮೇಯ ಬಂದೊದಗಿದೆ .

    ಕುದೂರು ಹೋಬಳಿ ಹಾಗೂ ಸೋಲೂರು ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಪ್ರತಿನಿತ್ಯ ಬೆಂಗಳೂರು ನಗರಕ್ಕೆ ಉದ್ಯೋಗಕ್ಕಾಗಿ ಮತ್ತು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

    ಕುಣಿಗಲ್‌ನಿಂದ ಬೆಂಗಳೂರು ತೆರಳುವ ಮಾರ್ಗದಲ್ಲಿ ತಿಪ್ಪಸಂದ್ರ , ಮರೂರು ಹ್ಯಾಂಡ್‌ಪೋಸ್ಟ್ , ಸೋಲೂರು ಗ್ರಾಮಗಳಲ್ಲಿ ಬಸ್ ನಿಲ್ದಾಣಗಳಿದ್ದು ತುರುವೇಕೆರೆ , ಶ್ರೀನಗರ ಹಾಗೂ ಕುಣಿಗಲ್ ಡಿಪೋಗಳ ಸರ್ಕಾರಿ ಬಸ್‌ಗಳು ನಿಲುಗಡೆ ನೀಡುತ್ತಿವೆ. ಆದರೆ ಈ ಮೂರು ಡಿಪೋಗಳ ಬಸ್ ಸಂಖ್ಯೆ ಬೆಳಗಿನ ವೇಳೆ ಕಡಿಮೆಯಿದ್ದು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

    ಹಾಸನ ಡಿಪೋ ಸರ್ಕಾರಿ ಬಸ್‌ಗಳು ಇದೇ ಸೋಲೂರು ಮಾರ್ಗವಾಗಿ ಪ್ರತಿನಿತ್ಯ ತೆರಳಿದರೂ ಸಹ ನಿಲುಗಡೆ ನೀಡುವುದಿಲ್ಲ .

    ಬಸ್ ಬರುವುದನ್ನು ಕಂಡ ಸಾರ್ವಜನಿಕರು ಬಸ್ ನಿಲ್ಲಿಸಲು ಬ್ಯಾರಿಕೇಡ್ ಹಾಕಿ ಬಸ್ ಹತ್ತುವಂತಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಿಪ್ಪಸಂದ್ರ . ಮರೂರು ಹ್ಯಂಡ್‌ಪೋಸ್ಟ್ , ಸೋಲೂರು ಭಾಗದಲ್ಲಿ ಪ್ರತಿ ಬಸ್ ನಿಲುಗಡೆಯ ಅವಕಾಶ ಮಾಡಿಕೊಡಬೇಕೆಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts