More

    ಸುಗ್ಗನಹಳ್ಳಿಯಲ್ಲಿ ತ್ಯಾಜ್ಯ ಘಟಕಕ್ಕೆ ಭೂಮಿಪೂಜೆ: ರಾಮನಗರ ಜಿಲ್ಲೆಯ ಮೊದಲ ಘಟಕವೆಂಬ ಹೆಗ್ಗಳಿಕೆ

    ಕುದೂರು: ರಾಜ್ಯದ ವಿವಿಧೆಡೆ ಸಂಚರಿಸಿ ಅಧ್ಯಯನ ಮಾಡಿ, ರಾಮನಗರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಸುಗ್ಗನಹಳ್ಳಿಯಲ್ಲಿ ಬಹು ಕೋಟಿ ವೆಚ್ಚದ ಕಸ ವಿಲೇವಾರಿ ಘಟಕದ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ಶಾಸಕ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

    ಕುದೂರು ಹೋಬಳಿಯ ಸುಗ್ಗನಹಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಅವರು, 3 ಕೋಟಿ 9 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಕಣ್ಣೂರು, ಹುಲಿಕಲ್, ಚಿಕ್ಕಳ್ಳಿ ಮತ್ತು ಶ್ರೀಗಿರಿಪುರ ಈ ನಾಲ್ಕು ಗ್ರಾಮ ಪಂಚಾಯತಿಗಳಲ್ಲಿ ಪ್ರತಿದಿನ ಸಂಗ್ರಹವಾಗುವ ಕಸವನ್ನು ಸುಗ್ಗನಹಳ್ಳಿ ಗ್ರಾಮದ ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಘಟಕದಲ್ಲಿ ಸಂಸ್ಕರಿಸಿ ಮರು ವಿಂಗಡಣೆ ಮಾಡಲಾಗುವುದು. ಗುಣಮಟ್ಟದ ರಸಗೊಬ್ಬರ ಉತ್ಪಾದಿಸಿ ಈ ಭಾಗದ ರೈತರಿಗೆ ಕಡಿಮೆ ದರದಲ್ಲಿ ನೀಡಲಾಗುವುದು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿ ಘಟಕ ಸ್ಥಾಪಿಸುತ್ತಿರುವುದಕ್ಕೆ ಹೆಮ್ಮೆಯಾಗಿದೆ ಎಂದರು.

    ಎಲ್ಲೆಲ್ಲಿ, ಯಾವ್ಯಾವ ಅಭಿವೃದ್ಧಿ ಕಾರ್ಯಕ್ರಮ?: ನಾರಸಂದ್ರ ಗ್ರಾಪಂನ ಏಸಪ್ಪನ ಪಾಳ್ಯಕ್ಕೆ ಡಾಂಬರೀಕರಣ, ಕುದೂರು ಕೆಪಿಎಸ್ ಪ್ರಾಥಮಿಕ ಶಾಲೆಗೆ ನೂತನ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ, ಕಾಗಿಮಡು ಕಾಲನಿಯಲ್ಲಿ ಚರಂಡಿ ಕಾಮಗಾರಿ, ಶ್ರೀಗಿರಿಪುರ ಗ್ರಾಪಂನ ವೀರಸಾಗರ ಕೆರೆಗೆ ಬಾಗಿನ ಅರ್ಪಣೆ, ಹೊಸಹಳ್ಳಿ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ, ಸುಗ್ಗನಹಳ್ಳಿ ಮತ್ತು ಹುಲಿಕಲ್ ಗ್ರಾಮದಲ್ಲಿ ಸಂಜೀವಿನಿ ಶೆಡ್ ನಿರ್ಮಾಣ ಮತ್ತಿತರ ಅಭಿವೃದ್ದಿ ಕಾಮಗಾರಿಗಳಿಗೆ ಎ.ಮಂಜುನಾಥ್ ಬುಧವಾರ ಚಾಲನೆ ನೀಡಿದರು.

    ವೀರಸಾಗರ ಕೆರೆಗೆ ಬಾಗಿನ: ವೀರಸಾಗರ ಕೆರೆಗೆ ಬಾಗಿನ ಅರ್ಪಿಸಿದ ಮಂಜುನಾಥ್, ಕಳೆದ ವರ್ಷದ ಮಳೆಗೆ ವೀರಸಾಗರ ಕೆರೆ ತುಂಬಿ ಏರಿ ಒಡೆದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿತ್ತು. ನರೇಗಾ ಯೋಜನೆಯಲ್ಲಿ ಕೆರೆ ಏರಿ ದುರಸ್ತಿ ಮಾಡಿ ಕೆರೆಗೆ ಮರುಜೀವ ತುಂಬಲಾಗಿತ್ತು. ಈ ವರ್ಷವೂ ಕೆರೆ ಭರ್ತಿಯಾಗಿದ್ದು, ಮೊದಲಿನಂತೆ ನೋಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts