More

    ಸೋರುತ್ತಿದೆ ಸೋರಹಳ್ಳಿ ಬಸ್ ನಿಲ್ದಾಣ

    ಮಲ್ಲಪ್ಪ ಗೌಡ ಔರಾದ್
    ಸೋರಹಳ್ಳಿ ಕ್ರಾಸ್ ಹತ್ತಿರವಿರುವ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾಥರ್ಿಗಳು ಸೇರಿದಂತೆ ಪ್ರಯಾಣಿಕರು ಈ ತಂಗುದಾಣದಲ್ಲಿ ನಿಲ್ಲಲು ಭಯಪಡುವಂತಾಗಿದೆ. ಮಳೆ, ಗಾಳಿ, ಬಿಸಿಲಿದ್ದರೂ ರಸ್ತೆ ಬದಿಯಲ್ಲಿಯೇ ವಾಹನಗಳಿಗಾಗಿ ಕಾಯುವ ಪ್ರಸಂಗ ಎದುರಾಗಿದೆ.

    ವಡಗಾಂವ(ದೇ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೋರಹಳ್ಳಿ ಕ್ರಾಸ್ ಬಸ್ ನಿಲ್ದಾಣ 2001ರಲ್ಲಿ ಅಂದಿನ ಶಾಸಕ ಗುಂಡಪ್ಪ ಬಿರಾದಾರ್ ಅವರಿಂದ ಉದ್ಘಾಟನೆಗೊಂಡಿತ್ತು. ಪ್ರಸ್ತುತ ಈ ಕಟ್ಟಡ ದುಸ್ಥಿತಿಗೆ ತಲುಪಿದ್ದು, ಬಿರುಕು ಬಿಟ್ಟಿದೆ. ಮಳೆ ಸುರಿದರೆ ಸೋರುತ್ತದೆ. ಗೊಡೆಗಳೆಲ್ಲ ಹಸಿಯಾಗಿವೆ. ಇದರಿಂದ ಯಾವಾಗ ಬೇಕಾದರೂ ಬೀಳುವ ಭಯ ಪ್ರಯಾಣಿಕರನ್ನು ಕಾಡುತ್ತಿದೆ.

    ವಡಗಾಂವ(ದೇ) ಗ್ರಾಮದಿಂದ ಜಿಲ್ಲಾ ಕೇಂದ್ರ ಬೀದರ್ಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿನ ಸೋರಹಳ್ಳಿ ಕ್ರಾಸ್ನ ಬಸ್ ತಂಗುದಾಣ ಪ್ರತಿದಿನ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಿದೆ. ಪ್ರಮುಖವಾಗಿ ಶಾಲಾ-ಕಾಲೇಜು ವಿದ್ಯಾಥರ್ಿಗಳಿಗೆ ಬಸ್ಗಾಗಿ ಕಾಯಲು ಇದೇ ಆಧಾರ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ನಿಲ್ದಾಣದ ಚಾವಣಿ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿದು ಬೀಳುವ ಆತಂಕ ಎದುರಾಗಿದೆ. ನೆಲಹಾಸಿಗೆ ಹಾಕಿದ್ದ ಕಾಂಕ್ರಿಟ್ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ತಂಗುದಾಣದಲ್ಲಿ ನಿಲ್ಲಲು ಭವಾಗುತ್ತದೆ. ಅಕ್ಕ-ಪಕ್ಕದಲ್ಲಿ ಮರಗಳಿಲ್ಲದ ಕಾರಣ ಬಿಸಿಲಿನಲ್ಲಿಯೇ ನಿಲ್ಲುವ ಅನಿವಾರ್ಯ ಸೃಷ್ಟಿಯಾಗಿದೆ.

    ಬಸ್ ಸಂಚಾರ ವ್ಯವಸ್ಥೆ ಸರಿಯಿದ್ದರೂ ಕೂಡ ಸುಸಜ್ಜಿತ ನಿಲ್ದಾಣ ಇಲ್ಲದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ದುರುಸ್ತಿಗೆ ಮುಂದಾಗಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ.

    ಸೋರಹಳ್ಳಿ ಬಸ್ ನಿಲ್ದಾಣ ಕುರಿತು ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಅವರ ಸೂಚನೆಯಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿ, ನಿಲ್ದಾಣವನ್ನು ನೆಲಸಮಗೊಳಿಸಿ ಹೊಸದಾಗಿ ನಿಮರ್ಿಸಲು ಮಂಜೂರಾತಿ ಪಡೆಯಲಾಗುವುದು.
    | ವಿನೋದಕುಮಾರ ಕುಲಕಣರ್ಿ, ಪಿಡಿಒ ವಡಗಾಂವ(ದೇ)

    ಎರಡು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿದಿರುವುದರಿಂದ ಬಸ್ ನಿಲ್ದಾಣ ಸಂಪೂರ್ಣವಾಗಿ ಸೋರುತ್ತಿದ್ದು, ಗೋಡೆಗಳೆಲ್ಲ ನೆನೆದು ಬಿದ್ದು ಹೋಗುವ ಆತಂಕ ಎದುರಾಗಿದೆ. ಅವಘಡ ಸಂಭವಿಸುವ ಮೊದಲು ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ದುರುಸ್ತಿಗೆ ಮುಂದಾಗಬೇಕು.
    | ಸೂರ್ಯಕಾಂತ ಡೆಂಪೆ, ಸೋರಹಳ್ಳಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts