More

    ಸೊಳ್ಳೆ ಮುಕ್ತ ಕಾರವಾರಕ್ಕೆ ಯತ್ನ

    ಕಾರವಾರ: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸೊಳ್ಳೆಗಳ ನಿಯಂತ್ರಣ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಾರವಾರದಲ್ಲಿ ಸೊಳ್ಳೆ ಮುಕ್ತ ಕಾರವಾರ ಎಂಬ ಯೋಜನೆ ಹಾಕಿಕೊಳ್ಳಲಾಗುವುದು ಎಂದು ಜಿ.ಪಂ. ಸಿಇಒ ಎಂ.ರೋಶನ್ ತಿಳಿಸಿದರು.

    ಜಿಪಂ ಸಭಾಭವನದಲ್ಲಿ ಬುಧವಾರ ಆಯೋಜಿಸಿದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

    ನಗರದಲ್ಲಿ ಹೆಚ್ಚಿನ ಸಂಖ್ಯೆಯ ಮನೆಗಳ ಶೌಚಗೃಹದ ನೀರು ಮತ್ತು ತ್ಯಾಜ್ಯವು ಕಾಳಿ ನದಿ ಮತ್ತು ಕೋಣೆನಾಲಾ ಸೇರುವುದರಿಂದ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಬಾರದಂತಾಗಿದೆ. ಅನಧಿಕೃತವಾಗಿ ತ್ಯಾಜ್ಯವನ್ನು ನೀರಿಗೆ ಬಿಡುವಂತಹ ಮನೆಗಳಿಗೆ ನೋಟಿಸ್ ಜಾರಿ ಹಾಗೂ ಸೆಫ್ಟಿಕ್ ಟ್ಯಾಂಕ್​ಗಳ ಪೈಪ್​ಗಳಿಗೆ ಗಾಳಿಯಾಡುವ ಕವಚಗಳನ್ನು ಅಳವಡಿಸಿ, ಸ್ವಚ್ಛತೆಗೆ ಆದ್ಯತೆ ಕೊಟ್ಟು ಸೊಳ್ಳೆಗಳ ನಿಯಂತ್ರಣ ಮಾಡಲಾಗುವುದು. ಇದು ಯಶಸ್ವಿಯಾದರೆ ಯೋಜನೆಯನ್ನು ಜಿಲ್ಲಾದ್ಯಂತ ವಿಸ್ತರಿಸಿ ಸೊಳ್ಳೆ ಮುಕ್ತ ಉತ್ತರ ಕನ್ನಡ ಮಾಡುವ ಕಾರ್ಯ ಆಗಬೇಕಿದೆ ಎಂದರು.

    ಈ ಮುಂಬರುವ ಬಜೆಟ್ ವರ್ಷದಲ್ಲಿ ಜಿಲ್ಲೆಯ ಕ್ರೀಡೆಗಳಿಗೆ ಒತ್ತು ನೀಡುವ ಯೋಜನೆಗಳನ್ನು ರೂಪಿಸುತ್ತಿದ್ದು, ಇದಕ್ಕಾಗಿ 55 ಕ್ರೀಡಾಪಟುಗಳೊಂದಿಗೆ ಸಭೆ ನಡೆಸಿ, ಸಲಹೆ-ಸೂಚನೆ ಪಡೆದು ಜಿಲ್ಲೆಯಲ್ಲಿ ಕನಿಷ್ಠ 120 ರ ವರೆಗೆ ಯುವ ಕ್ರೀಡಾಪಟುಗಳನ್ನು ಗುರುತಿಸುವ ಕಾರ್ಯವನ್ನು ಜಿಲ್ಲಾ ಯುವಜನ ಮತ್ತು ಕ್ರಿಡಾ ಇಲಾಖೆ ಮಾಡಬೇಕು ಎಂದು ಸೂಚಿಸಿದರು.

    ಹಳಿಯಾಳದಲ್ಲಿ ಸಾಂಪ್ರದಾಯಿಕ ಕುಸ್ತಿ ಪಟುಗಳ ಗರಡಿಮನೆಗಳಿದ್ದು, ಅವುಗಳಿಗೆ ಪೋ›ತ್ಸಾಹ ನೀಡುವ ಕಾರ್ಯವನ್ನು ಮಾಡಬೇಕು ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದರು. ಗೋಕರ್ಣದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು 2 ಹೆಕ್ಟೇರ್ ಭೂಮಿ ಬೇಕಿದೆ. ಇದಕ್ಕೆ ಅರಣ್ಯ ಇಲಾಖೆಯು ಸಹಕಾರ ನೀಡಿದಾಗ, ಗೋಕರ್ಣದ ಪ್ರವಾಸೋದ್ಯಮವನ್ನು ಇನ್ನೂ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಬಹುದಾಗಿದೆ ಎಂದರು. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚೈತ್ರಾ ಕೊಠಾರಕರ್, ಬಸವರಾಜ್ ದೊಡ್ಮನಿ ಉಷಾ ನಾಯ್ಕ, ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts