More

    ಸೊಳ್ಳೆ ತಡೆಗೆ ಸಂಸ್ಕರಿಸಿದ ಪರದೆ ಬಳಸಿ

    ಕಂಪ್ಲಿ: ಮೆಟ್ರಿ ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಮನೆ ಮನೆಗೆ ತೆರಳಿ ಸೊಳ್ಳೆ ಪರದೆಗಳನ್ನು ಔಷಧೀಯ ದ್ರಾವಣದಿಂದ ಸಂಸ್ಕರಿಸುವ ಕಾರ್ಯ ಶನಿವಾರ ಆರಂಭಗೊಂಡಿತು.

    ಮೆಟ್ರಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಎಚ್‌ಐಒ ಕೆ.ಯರ‌್ರಿಸ್ವಾಮಿ ಮಾತನಾಡಿ, ಸೊಳ್ಳೆಗಳ ನಿಯಂತ್ರಣದಿಂದ ಡೆಂೆ, ಮಲೇರಿಯಾ, ಚಿಕೂನ್‌ಗುನ್ಯಾ ಸೇರಿ ಇತರ ರೋಗಗಳನ್ನು ತಡೆಗಟ್ಟಬಹುದಾಗಿದೆ. ಇದಕ್ಕಾಗಿ ಸೊಳ್ಳೆ ಪರದೆಗಳನ್ನು ಡೆಲ್ಟಾ ಮೆಥ್ರಿನ್ 2.5ದ್ರಾವಣದಲ್ಲಿ ಅದ್ದಿ ತೆಗೆದು ನೆರಳಲ್ಲಿ ಒಣಗಿಸಿ, ಮಲಗುವಾಗ ಕಟ್ಟಿಕೊಳ್ಳುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು ಎಂದರು.

    ಗ್ರಾಪಂ ಅಧ್ಯಕ್ಷೆ ಎಚ್.ಹೊನ್ನೂರಮ್ಮ ಗಂಗಾಧರ, ಜಿಲ್ಲಾ ಮಲೇರಿಯಾ ಘಟಕದ ಎಚ್‌ಐಒಗಳಾದ ರವೀಂದ್ರ ಜಿನಗ, ಮರಿಬಸವನ ಗೌಡ್ರು, ಸಿಎಚ್‌ಒ ಎ.ಈರಣ್ಣ, ಆಶಾ ಕಾರ್ಯಕರ್ತೆಯರಾದ ಸುಧಾ, ಸೌಭಾಗ್ಯವತಿ, ವಾಸಂತಿ, ಶಶಿಕಲಾ, ಸುಜಾತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts