More

    ಸೈಲೋ ಘಟಕ ಎರಡು ತಿಂಗಳಲ್ಲಿ ಪೂರ್ಣ

    ಹಾವೇರಿ: ಎಲ್ಲ ಸದಸ್ಯರ ಸಹಕಾರದಿಂದ ಎಪಿಎಂಸಿ ಅಧ್ಯಕ್ಷನಾಗಿ ಆಯ್ಕೆಯಾದ ಮೂರೂವರೆ ತಿಂಗಳಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ರೈತರ ಬಹುನಿರೀಕ್ಷಿತ ಸೈಲೋ ಘಟಕ ಕಾಮಗಾರಿಯನ್ನು 2 ತಿಂಗಳಲ್ಲಿ ಪೂರ್ಣಗೊಳಿ ಸಲಾಗುವುದು ಎಂದು ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿಗೆ ಹಿಂದೆ 1.50 ರೂ. ಸೆಸ್ ಇತ್ತು. ಅದೀಗ 35 ಪೈಸೆಗೆ ಇಳಿದಿದ್ದರಿಂದ ಹೆಚ್ಚು ಅಭಿವೃದ್ಧಿ ಕಾಮಗಾರಿಗೆ ಕಷ್ಟವಾ ಗಿದೆ. ಅದರಲ್ಲಿ ರಾಜ್ಯ, ಕೇಂದ್ರ ಸರ್ಕಾರದ ಅನುದಾನದಲ್ಲಿ ಕೆಲ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ರೈತರ ಉತ್ಪನ್ನಗಳನ್ನು ಕೆಡದಂತೆ ಸಂಗ್ರಹಿ ಸಿಡಲು ಹಗೇವುಗಳ ಮಾದರಿಯ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯ ಸೈಲೋ ಘಟಕ ಕಾಮಗಾರಿ ಹಿಂದಿನ ಅವಧಿ ಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ 1.83 ಕೋಟಿ ರೂ. ವೆಚ್ಚದಲ್ಲಿ ಆರಂಭ ಗೊಂಡಿತ್ತು. ಅದೀಗ ಮುಕ್ತಾಯ ಹಂತದಲ್ಲಿದೆ ಎಂದರು.

    ಹಾವೇರಿ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಶೆಡ್ ನಿರ್ವಣಕ್ಕೆ 8.82 ಕೋಟಿ ರೂ., ಗುತ್ತಲ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಹಾಗೂ ಸಿಸಿ ಗಟಾರ್ ನಿರ್ವಣಕ್ಕೆ 1.53 ಕೋಟಿ ರೂ. ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಕಲ್ಲಾಪುರದಲ್ಲಿ 3 ಲಕ್ಷ ರೂ., ಕಬ್ಬೂರಲ್ಲಿ 7 ಲಕ್ಷ ರೂ., ಕರ್ಜಗಿಯಲ್ಲಿ 5 ಲಕ್ಷ ರೂ., ಗೌರಾಪುರದಲ್ಲಿ 5 ಲಕ್ಷ ರೂ.ಗಳಲ್ಲಿ ಗ್ರಾಮೀಣ ರೈತ ಕಣ ನಿರ್ವಿುಸಲಾಗುತ್ತಿದೆ. ಕಬ್ಬೂರ, ಗೌರಾಪುರದಲ್ಲಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು.

    ರೈತರ ಜಮೀನು ರಸ್ತೆ ಅಭಿವೃದ್ಧಿಗೂ ಯತ್ನ: ಎಪಿಎಂಸಿಯಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚು ಆರ್ಥಿಕ ವ್ಯವಸ್ಥೆಯಿಲ್ಲ. ಆದರೂ ಲಭ್ಯತೆ ಆಧಾರದಲ್ಲಿ ನೆಗಳೂರ ರೈತರ ಜಮೀನು ರಸ್ತೆ 1 ಕಿಮೀ ಅಭಿವೃದ್ಧಿಗೆ 5 ಲಕ್ಷ ರೂ., ಚಿಕ್ಕಲಿಂಗದಹಳ್ಳಿ ಸಮೀಪದ ಶಿವಪುರ ಹತ್ತಿರ 600 ಮೀ. ರಸ್ತೆ ಅಭಿವೃದ್ಧಿಗೆ 3 ಲಕ್ಷ ರೂ., ಗುತ್ತಲ ವ್ಯಾಪ್ತಿಯಲ್ಲಿ 1,200 ಮೀ. ರಸ್ತೆಗೆ 5 ಲಕ್ಷ ರೂ., ಹಾವಂಶಿಯಲ್ಲಿ 600 ಮೀ ರಸ್ತೆಗೆ 3 ಲಕ್ಷ ರೂ., ಬಸಾಪುರದಲ್ಲಿ 500 ಮೀ. ರಸ್ತೆಗೆ 3 ಲಕ್ಷ ರೂ., ಕೂರಗುಂದದಲ್ಲಿ 700 ಮೀ ರಸ್ತೆಗೆ 2 ಲಕ್ಷ ರೂ., ನೀರಲಗಿಯಲ್ಲಿ 1,700 ಮೀ. ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಹಾವೇರಿ ಜಾನು ವಾರು ಮಾರುಕಟ್ಟೆಯಲ್ಲಿ ಬಾಕಿ ಉಳಿದ ಆವರಣ ಗೋಡೆ ನಿರ್ವಣಕ್ಕೆ 25 ಲಕ್ಷ ರೂ., ಕಚೇರಿ ದುರಸ್ತಿಗೆ 25 ಲಕ್ಷ ರೂ., ಹಾವೇರಿ ಜಾನುವಾರು ಹಾಗೂ ಆಹಾರ ಮಾರುಕಟ್ಟೆ ಪ್ರವೇಶ ಮುಖ್ಯದ್ವಾರಗಳಿಗೆ ಗೇಟ್ ಅಳವಡಿಸಲು 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

    ತರಕಾರಿ ಮಾರುಕಟ್ಟೆಗೆ ಕಾಯಕಲ್ಪ: ಹಾನಗಲ್ಲ ರಸ್ತೆಯ ಕಾಳುಕಡಿ ಮಾರುಕಟ್ಟೆಯಲ್ಲಿ ಆರಂಭಿಸಿರುವ ತರಕಾರಿ ಹರಾಜು ಮಾರುಕಟ್ಟೆಯನ್ನು ವಿನೂತನವಾಗಿ ನಿರ್ವಿುಸಲು ಆರಂಭಿಕವಾಗಿ 56 ಲಕ್ಷ ರೂ. ಅನುದಾನ ಲಭ್ಯವಿದೆ. ಜಾನುವಾರು ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆ ನಿರ್ವಣಕ್ಕೆ ಚಿಂತನೆ ನಡೆದಿದೆ. ದೇವಿಹೊಸೂರ, ಗುತ್ತಲದಲ್ಲಿ ತಲಾ 1 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. 1 ಕೋಟಿ ರೂ. ವೆಚ್ಚದ ಗ್ರೇಡಿಂಗ್ ಯೂನಿಟ್ ಅನ್ನು ರೈತರ ಬಳಕೆಗೆ ನೀಡಲಾಗಿದೆ ಎಂದರು.

    ಶೇಂಗಾ, ಮೆಕ್ಕೆಜೋಳ, ಬಿಟಿ ಹತ್ತಿ, ಸೋಯಾಬೀನ್ ಮತ್ತಿತರ ಬೆಳೆಗಳಿಗೆ ಸರ್ಕಾರ ಕೂಡಲೆ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ ಎಂದರು. ರಾಮು ಮಾಳಗಿ, ರಮೇಶ ಚಾವಡಿ, ಶೇಖರಗೌಡ ಗಾಜಿಗೌಡ್ರ, ವಿರೂಪಾಕ್ಷಪ್ಪ ಬಣಕಾರ, ಸುರೇಶ ಬಾಳಿ, ಪ್ರಭುರಾಜ ವರ್ದಿ, ಶಬ್ಬೀರ ಕುಸನೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts