More

    ಸೈಬರ್ ವಂಚಕರ ಬಗ್ಗೆ ಎಚ್ಚರ ವಹಿಸಿ

    ಕೊಡೇಕಲ್ : ಗ್ರಾಮದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆಗೆ ಸರಿಯಾದ ಮಾಹಿತಿ ನೀಡಿದರೆ ಕಡಿವಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಹೇಳಿದರು.

    ನಾರಾಯಣಪುರ ಠಾಣೆಯಲ್ಲಿ ಶುಕ್ರವಾರ ಜನಸಂಪರ್ಕ ಸಭೆ ನಡೆಸಿದ ಅವರು, ಲಾಟರಿ ಮತ್ತು ಗಿಫ್ಟ್ನಲ್ಲಿ ಹಣ ಬಂದಿದೆ ಎಂದು ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ದೋಚುವ ಸೈಬರ್ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
    ಪಾಲಕರು ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ನೋಡಿಕೊಳ್ಳಬೇಕು. ಮುಗ್ಧ ಜನರನ್ನು ಗುರಿಯಾಗಿಸಿ ಆನ್‌ಲೈನ್ ವಂಚನೆ ಮಾಡಲಾಗುತ್ತಿದೆ. ಇದರಿಂದ ಅನೇಕರು ಹಣ ಕಳೆದುಕೊಂಡಿದ್ದಾರೆ. ಅಂತಹ ಅನಾಮಧೇಯ ಕರೆಗಳ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ ಎಂದರು.

    ಗ್ರಾಪA ಅಧ್ಯಕ್ಷ ಮುತ್ತು ಕಬಡರ, ಪ್ರಮುಖರಾದ ಎ.ಜಿ. ಕುಂಬಾರ, ಯಲ್ಲಪ್ಪಗೌಡ, ಆಂಜನೇಯ ದೊರೆ, ಶಾಂತಪ್ಪ, ಸುರೇಶ ನಾಯಕ, ಅಮರೇಶ ಕೋಳೂರ, ತಿಮ್ಮಣ್ಣ ಮಿಂಚೇರಿ, ಸಿದ್ದಪ್ಪ ಕ್ಯಾದಗಿ, ಮುತ್ತಪ್ಪ ಗಡ್ಡಿ, ಪಿಎಸ್‌ಐ ಇಂದುಮತಿ, ಎಎಸ್‌ಐ ಬಾಬು ರಾಠೋಡ್, ಪೊಲೀಸ್ ಸಿಬ್ಬಂದಿ ದೇವು, ಗುರುಮೂರ್ತಿ ಇತರರಿದ್ದರು. ಎಚ್.ಸಿ. ಸೋಮನಗೌಡ ನಿರೂಪಣೆ ಮಾಡಿದರು. ಎಚ್.ಸಿ.ಪ್ರಕಾಶ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts