More

    ವ್ಯರ್ಥವಾಗಿ ಹರಿಯುವ ನೀರು ತಡೆಯಿರಿ

    ಕೆಂಭಾವಿ: ವಿನಾಃ ಕಾರಣ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ತಡೆದು ಕಾಲುವೆಗೆ ಹರಿಸಬೇಕು ಎಂದು ಪಟ್ಟಣದ ರೈತರು ಒತ್ತಾಯಿಸಿದ್ದಾರೆ.

    ಪಟ್ಟಣದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ೨ನೇ ಬ್ರಿಜ್(ಎಪಿಎಂಸಿ ಹತ್ತಿರ) ಮೇಲೆ ಕೃಷ್ಣೆ ನೀರು ವ್ಯರ್ಥವಾಗಿ ಹರಿಯುತ್ತಿದೆ. ಈ ಕುರಿತು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮನವಿ ಮಾಡಿರುವ ರೈತರು, ಮುಖ್ಯ ಕಾಲುವೆಯ ಬ್ರಿಜ್ ಮೇಲೆ ನಿತ್ಯ ಸಾಕಷ್ಟು ನೀರು ಹರಿದು ಹೋಗುತ್ತಿದೆ. ಈ ನೀರು ರೈತರ ಜಮೀನಿಗೆ ಮತ್ತು ಹಳ್ಳಕ್ಕೆ ಹೋಗದೆ ಚರಂಡಿಗೆ ಸೇರಿತ್ತಿದೆ ಎಂದು ದೂರಿದರು.

    ಸಧ್ಯ ಹನಿ ನೀರಿಗೂ ರೈತರ ಬೇಡಿಕೆ ಹೆಚ್ಚಾಗಿದೆ. ಆದರೆ ಇಲಾಖೆ ಅಧಿಕಾರಿಗಳೇ ಈ ರೀತಿ ನೀರು ವ್ಯರ್ಥ ಪೋಲು ಮಾಡಿದರೆ ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.

    ಯಾಳಗಿ ಮಾರ್ಗದ ಉಪ ಕಾಲುವೆಯಿಂದ ಮಲ್ಲಾ ರಸ್ತೆಯ ಮೂಲಕ ಈ ಮುಖ್ಯ ಕಾಲುವೆ ಬ್ರಿಜ್ ಮೇಲೆ ಬರುತ್ತಿದ್ದು, ಕೂಡಲೇ ಸಂಬAಧಿಸಿದ ಅಧಿಕಾರಿಗಳು ವಿನಾಃ ಕಾರಣ ವ್ಯರ್ಥವಾಗುತ್ತಿರುವ ನೀರು ತಡೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಪ್ರತಿನಿತ್ಯ ನೀರು ವ್ಯರ್ಥವಾಗಿ ಹಾಳಾಗುತ್ತಿದ್ದು, ಈ ಕುರಿತು ಹಲವು ಬಾರಿ ನೀರಾವರಿ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸರಿಪಡಿಸಿ ರೈತರಿಗೆ ನೀರು ಒದಗಿಸಬೇಕು.
    | ಸುಭಾಷ ಮ್ಯಾಗೇರಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts