More

    ಸೇಡಂ ತಾಲೂಕಿನಲ್ಲಿ 680 ಜನ ಕ್ವಾರಂಟೈನ್

    ಸೇಡಂ: ಹೊರ ರಾಜ್ಯಗಳಿಂದ ತವರಿಗೆ ವಾಪಸ್ ಬರುತ್ತಿರುವ ಕಾಮರ್ಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದ್ದು, ಇಲ್ಲಿವರೆಗೂ 680 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಿಳಿಸಿದರು
    ಕೋಲಕುಂದಾದ ವಸತಿ ನಿಲಯದಲ್ಲಿ ತೆರೆಯಲಾದ ಕ್ವಾರಂಟೈನ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಅವರು, ತೆಲಂಗಾಣದ ಗಡಿಯ ರೆಬ್ಬನಪಲ್ಲಿ ಶಾಲಾ ಆವರಣದಲ್ಲಿ ಚೆಕ್ಪೋಸ್ಟ್ ತೆರಯಲಾಗಿದೆ. ಸುಮಾರು 30 ಸಿಬ್ಬಂದಿ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಹಾಗೂ ಗಡಿಯಿಂದ ಬರುವ ಕಾಮರ್ಿಕರಿಗೆ ಊಟದ ವ್ಯವಸ್ಥೆಯೂ ಮಾಡಲಾಗಿದೆ. ಗಡಿಯಿಂದ ಒಳ ಬರುವವರನ್ನು ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದು, ನಂತರ ಕ್ವಾರಂಟೈನ್ ಮಾಡಲಾಗುತ್ತಿದೆ. ಬೇರೆ ತಾಲೂಕಿನವರಾಗಿದ್ದರೆ ಅಲ್ಲಿನ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿ ಕಳಿಸಲಾಗುತ್ತಿದೆ ಎಂದು ಹೇಳಿದರು.
    ತಾಲೂಕಿನಲ್ಲಿನ ಶಾಲೆ, ಕಾಲೇಜು, ವಸತಿ ನಿಲಯ ಸೇರಿ ಒಟ್ಟು 83 ಸ್ಥಳಗಳನ್ನು ಕ್ವಾರಂಟೈನ್ಗಾಗಿಯೇ ಮೀಸಲಿಡಲಾಗಿದೆ. ಇದೀಗ 28 ಬಳಕೆಯಾಗಿವೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಸೇರಿ ಬೇರೆ ರಾಜ್ಯದಿಂದ ನೂರಾರು ಸಂಖ್ಯೆಯಲ್ಲಿ ಕಾಮರ್ಿಕರು ಬರುವುದರಿಂದ ಇನ್ನಿತರ ಸ್ಥಳಗಳನ್ನು ಕಾಯ್ದಿರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಗ್ರಾಪಂ ಪಿಡಿಒ ನಿಂಗಪ್ಪ ಕೆಂಭಾವಿ, ಗ್ರಾಮ ಲೇಖಪಾಲಕ ಶಿವಪುತ್ರಯ್ಯ ಸ್ವಾಮಿ ಇತರರಿದ್ದರು.

    ಮಹಾರಾಷ್ಟ್ರದ ನಾಲ್ವರು ಕ್ವಾರಂಟೈನ್
    ಅರಳಗುಂಡಗಿ: ಕೂಲಿಗಾಗಿ ಮಹಾರಾಷ್ಟ್ರ, ಪುಣೆ, ಆಂಧ್ರಪ್ರದೇಶ ರಾಜ್ಯಗಳಿಗೆ ಗುಳೆ ಹೋಗಿದ್ದ ಕಾಮರ್ಿಕರು ಗ್ರಾಮಕ್ಕೆ ವಾಪಸ್ ಬರುತ್ತಿದ್ದು, ಅವರನ್ನು ಕ್ವಾರಂಟೈನ್ ಮಾಡುವ ಕೆಲಸ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿದಾನಂದ ಆಶಾಳ ತಿಳಿಸಿದ್ದಾರೆ. ಬುಧವಾರ ಹಾಗೂ ಗುರುವಾರ ತಲಾ ಇಬ್ಬರು ಸೇರಿ ಒಟ್ಟು 4 ಕಾಮರ್ಿಕರು ಮಹಾರಾಷ್ಟ್ರದಿಂದ ಗ್ರಾಮಕ್ಕೆ ಬಂದಿದ್ದು, ಅವರನ್ನು ವಸತಿನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ 14 ದಿನಗಳವರೆಗೆ ಕೇಂದ್ರದಿಂದ ಹೊರಬರದಂತೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts