More

    ಸೂರಿಲ್ಲದವರಿಗೆ ನಿವೇಶನ ಕೊಡಿಸಲು ಶ್ರಮ

    ಬೈಲಕುಪ್ಪೆ: ಈ ಭಾಗದ ನಿವೇಶನರಹಿತರಿಗೆ ನಿವೇಶನ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಕೆ. ಮಹದೇವ್ ಸೋಮವಾರ ತಿಳಿಸಿದರು.

    ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮದ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ನೂತನವಾಗಿ ರಚನೆಯಾಗಿರುವ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

    ನಿವೇಶನ ಮತ್ತು ವಸತಿಗೆ ದಾಖಲೆಗಳಿಲ್ಲದೆ ಗ್ರಾಮೀಣ ಭಾಗದ ಜನತೆ ಅನೇಕ ಕಷ್ಟವನ್ನು ಅನುಭವಿಸುತ್ತಿದ್ದರು. ಇದನ್ನು ಮನಗಂಡ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ನಿರ್ಗತಿಕರಿಗೆ ಕಂದಾಯ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಜಂಟಿ ಸಮೀಕ್ಷೆಯ ಮೂಲಕ ಸರ್ವೇ ಮಾಡಿಸಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ವಸತಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

    ತಹಸೀಲ್ದಾರ್ ಕುಂಹಿ ಮಹಮ್ಮದ್ ಮಾತನಾಡಿ, ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಜತೆಯಾಗಿ ಅನಧಿಕೃತ ನಿವೇಶನದ ಮನೆ ನಿರ್ಮಾಣ ಮಾಡಿರುವುದನ್ನು ಜಂಟಿ ಸಮೀಕ್ಷೆ ಕಾರ್ಯ ಮಾಡಲಾಗಿದ್ದು, ಪ್ರಸ್ತುತ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಸರ್ಕಾರಿ ಜಾಗದಲ್ಲಿ 508 ಅರ್ಜಿ ಮತ್ತು ಖಾಸಗಿ ಜಮೀನಿನಲ್ಲಿ 600 ಅರ್ಜಿಗಳು ಬಂದಿವೆ. ಈ ಅರ್ಜಿದಾರರಿಗೆ ಸಂಪೂರ್ಣವಾಗಿ ಕಾನೂನಾತ್ಮಕವಾಗಿ ಹಕ್ಕುಪತ್ರ ನೀಡಲಾಗುವುದು ಎಂದರು.

    ತಾಪಂ ಇಒ ಕೃಷ್ಣಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಗ್ರಾಪಂ ಅಧ್ಯಕ್ಷೆ ಶಿವಮ್ಮ, ಕೊಪ್ಪ ಗ್ರಾಪಂ ಅಧ್ಯಕ್ಷ ಸಿ.ಎಸ್. ರೇಣುಕಸ್ವಾಮಿ, ತಾಪಂ ಮಾಜಿ ಸದಸ್ಯ ಇನಿಯ ಪಾಷ, ಶಿರಸ್ತೇದಾರ್ ನಂದಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ, ಎಇಇ ವೆಂಕಟೇಶ್, ಹಿತೇಂದ್ರ, ಪಶುಪಾಲನ ಇಲಾಖೆಯ ಸೋಮಯ್ಯ, ಕೃಷಿ ಅಧಿಕಾರಿ ಪ್ರಸಾದ್, ಭೂ ಮಾಪನ ಇಲಾಖೆ ಮುನಿಯಪ್ಪ, ಎಂ.ಕೆ. ಪ್ರಕಾಶ್, ಉಪ ತಹಸೀಲ್ದಾರ್ ಮಹೇಶ್, ರಾಜಸ್ವ ನಿರೀಕ್ಷಕ ಪ್ರದೀಪ್, ಶ್ರೀಧರ್, ಪಿಡಿಒ ಬೋರೇಗೌಡ ಮತ್ತು ಅಭಿ ಮಹಮ್ಮದ್, ಸುನೀಲ್ ಯಾದವ್, ಗ್ರಾಮ ಲೆಕ್ಕಾಧಿಕಾರಿ ಸ್ವಾತಿ, ಸುಶ್ಮಿತಾ, ದೀಪಕ್, ಸುನೀಲ್, ರಾಜೇಶ್, ನಾಗರಾಜ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts