More

    ಸುಸ್ಥಿರ ಭಾರತ ನಿರ್ಮಾಣದ ಸಂಕಲ್ಪ

    ಕಲಬುರಗಿ: ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ಸುಸ್ಥಿರ ಭಾರತ ನಿರ್ಮಾಣದ ಸಂಕಲ್ಪ ದೊಂದಿಗೆ ಕೇಂದ್ರ ಸಕರ್ಾರ ಈ ನೀತಿ ಜಾರಿಗೆ ತಂದಿದೆ ಎಂದು ಹೊಸ ಶಿಕ್ಷಣ ನೀತಿಯ ಚೀಫ್ ಕನ್ಸಲ್ಟಂಟ್ ಡಾ.ಗೌರೀಶ ಹೇಳಿದರು.
    ಗುಲ್ಬರ್ಗ ವಿಶ್ವ ವಿದ್ಯಾಲಯ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹೊಸ ಶಿಕ್ಷಣ ನೀತಿ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು, ಭಾರತದ ಇತಿಹಾಸ, ಪರಂಪರೆಯನ್ನೊಳಗೊಂಡಿರುವ ಹೊಸ ಶಿಕ್ಷಣ ಪದ್ಧತಿ ದೇಶದ ಪ್ರಗತಿಗೆ ಪೂರಕವಾಗಬಲ್ಲದು. ಹೊಸ ಹೊಸ ಚಿಂತನೆಗಳು ಇದರಲ್ಲಿ ಅಡಕವಾಗಿವೆ. ಭಾರತೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
    34 ವರ್ಷದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪದ್ಧತಿ ರೂಪುಗೊಂಡಿದ್ದು, ಸಮಗ್ರ ಬದಲಾವಣೆಗೆ ಚಿಂತನೆ ಒಳಗೊಂಡಿದೆ. ಪ್ರಾಥಮಿಕ ಶಿಕ್ಷಣದಿಂದ ಪಿಜಿ ಕೋಸರ್್ವರೆಗೆ ಅಮೂಲಾಗ್ರ ಬದಲಾವಣೆಯಾಗಲಿದೆ. ದೇಶದಲ್ಲಿ 800 ವಿಶ್ವವಿದ್ಯಾಲಯ ಹಾಗೂ 40 ಸಾವಿರಕ್ಕೂ ಹೆಚ್ಚು ಕಾಲೇಜುಗಳಿದ್ದು, ಅದರಲ್ಲಿ ಶೇ.40 ಒಂದೇ ಕೋಸರ್್ ನಡೆಸುವ ಕಾಲೇಜುಗಳಿವೆ. ಎಲ್ಲ 40 ಸಾವಿರ ಕಾಲೇಜುಗಳೂ ಸ್ವಾಯತ್ತ ಕಾಲೇಜುಗಳನ್ನಾಗಿ ಪರಿವತರ್ಿಸಲು ಚಿಂತನೆ ಈ ಶಿಕ್ಷಣ ನೀತಿಯಲ್ಲಿದೆ ಎಂದು ಹೇಳಿದರು.
    ಪದವಿ ಕೋರ್ಸ ನಾಲ್ಕು ವರ್ಷ ನಿಗದಿಪಡಿಸಲಾಗಿದ್ದು, ಮೊದಲ ವರ್ಷ ಓದಿ ಬಿಟ್ಟರೆ ಪ್ರಮಾಣಪತ್ರ ನೀಡಲಾಗುವುದು, ಎರಡನೇ ವರ್ಷ ಓದಿದರೆ ಡಿಪ್ಲೋಮಾ ಪ್ರಮಾಣಪತ್ರ, ಮೂರು ವರ್ಷ ಓದಿದರೆ ಪದವಿ ಪ್ರಮಾಣಪತ್ರ ಕೊಡಲಾಗುವುದು. ಬಿಇಡಿ ಕೋರ್ಸ ನಾಲ್ಕು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದರು.
    ವಿಚಾರ ಸಂಕೀರಣ ಉದ್ಘಾಟಿಸಿದ ಗುಲ್ಬರ್ಗ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ, ಹೊಸ ಶಿಕ್ಷಣ ನೀತಿ ಅನುಷ್ಠಾಗೊಳಿಸುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. 29ನೇ ಜುಲೈ 2021ರಿಂದ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬರಲಿದ್ದು, ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ ಎಂದು ಹೇಳಿದರು.
    ಕುಲಸಚಿವ(ಮೌಲ್ಯಮಾಪನ) ಸೋನಾರ್ ನಂದಪ್ಪ, ವಿತ್ತಾಧಿಕಾರಿ ಬಿ.ವಿಜಯ ಪ್ರೊ. ಹೂವಿನಭಾವಿ, ಪ್ರೊ. ಎಚ್.ಟಿ.ಪೋತೆ, ಪ್ರೊ. ಪಿ.ವಿ.ಹುನಗುಂದ, ಡಾ. ದೇವಿದಾಸ, ಬಸವರಾಜ ಸುಳ್ಳಿಕೇರಿ ಮಠ, ಪ್ರೊ. ಎನ್.ಬಿ.ನಡುವಿನಮನಿ, ಬಿ.ಎಂ.ರುದ್ರವಾಡಿ, ಪ್ರೊ. ಕೆ.ಲಿಂಗಪ್ಪ, ಪ್ರೊ. ಚಂದ್ರಕಾಂತ ಯಾತನೂರ, ಚಿತ್ಕಳ ದಿಕ್ಸಂಗಿ, ಜಯಪ್ರಕಾಶ ಕರಜಗಿ, ಪ್ರಕಾಶ ಹದನೂರಕರ್, ಬಸಣ್ಣ ಉದನೂರ, ಡಾ. ಈರಣ್ಣ ಹುಮನಾಬಾದ್, ಪ್ರೊ. ಕೆ.ಸಿದ್ದಪ್ಪ, ಪ್ರೊ. ರಮೇಶ ಲಂಡನಕರ್, ಗುರುರಾಜ ಕುಲಕಣರ್ಿ, ದೇವೀಂದ್ರಪ್ಪ ತೇಲಕರ, ಸುವಣರ್ಾ, ಶೈಲಜಾ, ಸಿಂಡಿಕೇಟ್ ಸದಸ್ಯರಾದ ಶರಣಬಸವ ಪಾಟೀಲ್, ಪ್ರಮೋದ ನಾಗೂರ ಉಪಸ್ಥಿತರಿದ್ದರು. ಕುಲಸಚಿವ ಶರಣಬಸಪ್ಪ ಕೊಟ್ಟೆಪ್ಪಗೋಳ ಸ್ವಾಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts