More

    ಎಪಿಎಂಸಿ ಕಾಯ್ದೆ ಹಿಂಪಡೆಯಲು ಆಗ್ರಹ

    ಸುರಪುರ: ಕಾರ್ಪೋರೇಟ್ ಸಂಸ್ಥೆಗಳ ಬೆನ್ನಿಗೆ ನಿಂತಿರುವ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ದೇಶದಲ್ಲಿನ ರೈತರನ್ನು ಸರ್ವನಾಶ ಮಾಡಲು ನಿಂತಿದೆ. ಕೂಡಲೇ ಈ ಕಾಯ್ದೆ ಹಿಂದಕ್ಕೆ ಪಡೆಯಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಆಗ್ರಹಿಸಿದರು.
    ಇಲ್ಲಿನ ಡಾ. ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಂದಾಗಿನಿಂದಲೂ ರೈತರಿಗೆ ಪ್ರೋತ್ಸಾಹಿಸುವ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಆರೋಪಿದರು.

    ಕರ್ನಾಟಕ ಪ್ರಾಂತ ಕೃಷಿ ಕೋಲಿಕಾರ ಸಂಘದ ಜಿಲ್ಲಾಧ್ಯಕ್ಷ ದವಲಸಾಬ ನದಾಫ ಮಾತನಾಡಿ, ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿರುವುದು ಮತ್ತು ಕೈಗಾರಿಕಾ ವಲಯದಲ್ಲಿರುವ ಕಾಮರ್ಿರ ಮಿತಿಯನ್ನು ಹೆಚ್ಚಿಸಿ ಲೇ ಆಫ್, ರಿಟ್ರೆಚಮೆಂಟ್ ಮತ್ತು ಕ್ಲೋಸರ್ಗಳಿಗೆ ಸರ್ಕಾರ ಪೂರ್ವ ಅನುಮತಿ ನೀಡಿ ಕಾರ್ಮಿಕರನ್ನು ಹತ್ತುಕ್ಕುವ ಪ್ರಯತ್ನ ನಡೆಸುತ್ತಿವೆ. ಸರ್ಕಾರ ಈ ನಡೆಯು ರೈತ ವಿರೋಧಿ, ಕಾಮರ್ಿಕ ವಿರೋಧ ನಡೆಗಳಿಂದ ಎಷ್ಟೋ ಕುಟುಂಬಗಳು ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುತ್ತವೆ ಆದ್ದರಿಂದ ಸರ್ಕಾರಗಳು ತೆಗೆದುಕೊಂಡಿರುವ ನಿರ್ಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

    ಸಂಘದ ತಾಲೂಕು ಘಟಕದ ಅಧ್ಯಕ್ಷ ಧರ್ಮಣ್ಣ ದೊರೆ, ಪ್ರಕಾಶ ಆಲ್ಹಾಳ, ರಾಜು ದೊಡ್ಡಮನಿ, ಬಸವರಾಜ ಐಕೂರು ಖಾಜಾ ಸಾಬ ದಳಪತಿ, ರಫೀಕ ಸುರಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts