More

    ಸುಭದ್ರ, ಸುಸಂಸ್ಕೃತ ನಾಡು ಕಟ್ಟಲು ಶ್ರಮಿಸೋಣ

    ಯಾದಗಿರಿ: ದೇಶದಲ್ಲೇ ಶ್ರೀಮಂತ ಪ್ರಕೃತಿ, ಖನಿಜ, ಅರಣ್ಯಗಳನ್ನೊಳಗೊಂಡ ಸಿರಿ ಸಂಪತ್ತಿನ ನಾಡು ಕನರ್ಾಟಕ. ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ದಿನ ಇದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಅಭಿಪ್ರಾಯಪಟ್ಟರು.

    ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದ ಅವರು, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಗೌರವಿಸಬೇಕು ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ್ದರು ಎಂಬುದನ್ನು ನಾವು ಮನಗಾಣಬೇಕಿದೆ. ದೇಶದ ಸಾಹಿತ್ಯದಲ್ಲಿ ಮತ್ತು ಭಾಷಾ ಲೋಕದಲ್ಲಿ ಕನ್ನಡ ಹಾಗೂ ನಮ್ಮ ನಾಡು ಅತ್ಯುನ್ನತವಾಗಿ ಬಣ್ಣಿಸಲ್ಪಟ್ಟಿದೆ ಎಂದರು.

    ನಾವೆಲ್ಲರೂ ಕೂಡ ಸುಭದ್ರ, ಸುಸಂಸ್ಕೃತ ಅಭಿವೃದ್ಧಿ ಹೊಂದಿದ ನಾಡು ರೂಪಿಸಲು ಶ್ರಮಿಸೋಣ, ರಾಜ್ಯದ ನೂತನ ಸರಕಾರ ನಾಡಿನ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತಿದೆ. ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದೆ. ಪಂಚ ಗ್ಯಾರಂಟಿಗಳ ಮೂಲಕ ಜನರ ಜೀವನಕ್ಕೆ ಸರ್ವ ರೀತಿಯಲ್ಲಿಯೂ ನೆರವಾಗುತ್ತಿದೆ. ಕನ್ನಡ ನಾಡು, ನುಡಿ ಸೇವೆಗಾಗಿ ಶ್ರಮಿಸುತ್ತಿರುವ ಎಲ್ಲ ಕನ್ನಡಿಗರ ಬದ್ದತೆ ಹಾಗೂ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮಲ್ಲೆರ ಆದ್ಯ ಕರ್ತವ್ಯ ಎಂದು ಹೇಳಿದರು.

    ಕನ್ನಡ ಕನರ್ಾಟಕದ ಸಾರ್ವಭೌಮ ಭಾಷೆಯಾಗಿದ್ದು ಇದಕ್ಕೆ 2 ಸಾವಿರ ವರ್ಷಗಳ ಭವ್ಯ ಪರಂಪರೆ ಇದೆ. ಸುಧೀರ್ಘ ಸಾಂಸ್ಕೃತಿಕ, ಇತಿಹಾಸದೊಂದಿಗೆ ಜನಭಾಷೆಯಾಗಿ, ಜನಮಾನಸದಲ್ಲೆ ಬೆಳೆದಿದೆ. ಬುದ್ದ-ಬಸವಾದಿ ಶರಣರು, ಮಹಾತ್ಮ ಗಾಂಧೀಜಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಸೇರಿ ಹಲವು ನಾಯಕರು ತೋರಿದ ದಾರಿಯಲ್ಲಿ ಸಾಗಿ ಬಂದ ಕನ್ನಡ ನಾಡು ದೇಶದ ರಾಷ್ಟ್ರೀಯತೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದೆ ಎಂದು ವಿವರಿಸಿದರು.

    ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಕನರ್ಾಟಕ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಏಕೀಕರಣಕ್ಕಾಗಿ ಹೋರಾಟ ಹಾಗೂ ತ್ಯಾಗ ಮಾಡಿದ ಮಾಜಿ ಸಿಎಂ ದಿ.ಎಸ್.ನಿಜಲಿಂಗಪ್ಪ, ಆಲೂರು ವೆಂಕಟರಾಯರು, ಮುದವಿಡು ಕೃಷ್ಣರಾಯರು, ಡಾ.ಫ.ಗು.ಹಳಕಟ್ಟಿ, ಮೊಹರೆ ಹನುಮಂತರಾಯರು, ಚನ್ನಬಸಪ್ಪ ಅಂಬಲಿ ಹೀಗೆ ಮುಂತಾದವರನ್ನು ಪ್ರಾಥಃಸ್ಮರಣೀಯರಾಗಿದ್ದಾರೆ. ಭಾರತದ ಸ್ವಾತಂತ್ರೃ ಮತ್ತು ಏಕೀಕರಣ ಚಳುವಳಿಗಳು ಒಟ್ಟೊಟ್ಟಾಗಿಯೇ ನಡೆದಿವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts