More

    ಸಿದ್ಧೇಶ್ವರ ಶ್ರೀಗಳು ದಿವ್ಯತೆಯ ಸಂಕೇತ

    ಬೆಳಗಾವಿ: ಆಧ್ಯಾತ್ಮಿಕ ಕ್ಷೇತ್ರಕ್ಕೆ ಭಾರತದ ಕೊಡುಗೆ ಅತ್ಯಂತ ಶ್ರೇಷ್ಠವಾಗಿದೆ. ಮಹಾತ್ಮರು ನಡೆದಾಡಿದ ನೆಲದಲ್ಲಿ ಸಾಮಾನ್ಯ ಜನಜೀವನದ ಸಾರ್ಥಕತೆ ಕೇಂದ್ರವಾಗಿಟ್ಟುಕೊಂಡು ವಿಶ್ವದೆಲ್ಲೆಡೆ ಭಾರತದ ತತ್ತ್ವವನ್ನು ಪಸರಿಸಿದ ಕೀರ್ತಿ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ನ್ಯಾಯವಾದಿ ಎಂ.ಬಿ. ಜಿರಲಿ ಅಭಿಪ್ರಾಯಪಟ್ಟರು.

    ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ನಗರದ ಗುರುದೇವ ರಾನಡೆ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಅಧ್ಯಾತ್ಮ ಚಿಂತನ ಮತ್ತು ವಿಜಯಪುರದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಗಾನ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುದೇವ ರಾನಡೆ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದ ಸಿದ್ಧೇಶ್ವರ ಸ್ವಾಮೀಜಿ ಎಂಭತ್ತರ ದಶಕದಿಂದಲೇ ಬೆಳಗಾವಿಯ ರಾನಡೆ ಮಂದಿರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲದೆ ರಾನಡೆ ಅವರ ಗ್ರಂಥಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸುವಲ್ಲಿ ಶ್ರೀಗಳು ಹೆಚ್ಚಿನ ಪ್ರೇರಣೆ ನೀಡಿದ್ದರು. ಅವರ ಒಡನಾಟವೇ ಒಂದು ದಿವ್ಯತೆಯ ಸಂಕೇತವಾಗಿದೆ ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ಬೆಳಗಾವಿಯ ವಿದ್ಯಾಶ್ರಮದ ಚಿತ್-ಪ್ರಕಾಶಾನಂದ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶೈಲಜಾ ಮಾಸ್ತೆ, ಶಾಂತಶ್ರೀ ಪಾಟೀಲ, ಪಾರ್ವತಿ ಡಂಗ, ಶೋಭಾ ಹತ್ತರಕಿ, ಶುಭಾಂಗಿ ಬಿರಜೆ, ಲೀಲಾ ಶೇರಿ, ಸಂಗೀತ ಶಾಲೆ ಮಕ್ಕಳು ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು. ಉಮಾ ಸಂಗೀತ ಪ್ರತಿಷ್ಠ್ಠಾನದ ವಿದ್ಯಾರ್ಥಿಗಳ ವಚನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷೆ ಮಂಗಲ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಾ ಬರಬರಿ, ನಿರೂಪಿಸಿದರು. ಮಹಿಳಾ ಮಂಡಳದ ಕಾರ್ಯದರ್ಶಿ ರತ್ನಶ್ರೀ ಗುಡೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts