More

    ಸಿದ್ಧಗಂಗಾ ಶ್ರೀ ದಾಸೋಹ ತತ್ವ ಎಲ್ಲರೂ ಪಾಲಿಸಿ

    ಬೀದರ್: ಮಹಾತ್ಮ ಬಸವೇಶ್ವರ ನಂತರದ ಯುಗಪುರುಷ ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಆಗಿದ್ದರು ಎಂದು ಲಿಂಗಾಯತ ಮಹಾಮಠದ ಪೂಜ್ಯ ಅಕ್ಕ ಅನ್ನಪೂರ್ಣ ಬಣ್ಣಿಸಿದರು.

    ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಮತ್ತು ಹಿತೈಷಿಗಳ ಸಂಘದ ಜಿಲ್ಲಾ ಘಟಕ ಶಿವನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳ ಕಾಲ ಎರಡನೇ ಬಸವ ಯುಗವಾಗಿತ್ತು. 900 ವರ್ಷ ನಂತರ ಕಾಯಕ, ದಾಸೋಹ ಸೇರಿ ಬಸವಾದಿ ಶರಣರ ತತ್ವಗಳನ್ನು ಚಾಚೂತಪ್ಪದೆ ಆಚರಣೆಗೆ ತಂದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು.

    ಲಿಂಗಪೂಜೆ, ಜಂಗಮ ದಾಸೋಹವೇ ಅವರಿಗೆ ಸಂಭ್ರಮವಾಗಿತ್ತು. ಭಕ್ತರು ಕೊಟ್ಟ ಧನ-ಧಾನ್ಯದಿಂದ ನಿರಂತರ ಆಶ್ರಯ, ಅನ್ನ, ಅಕ್ಷರ ದಾಸೋಹ ಮಾಡಿ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಬದುಕು ಹಸನಾಗಿಸಿದ್ದರು. ಅವರ ದಾಸೋಹ ತತ್ವವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ನಿಜವಾದ ಗೌರವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಬಾಬುರಡ್ಡಿ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ ಮಾತನಾಡಿದರು. ಸಾಹಿತಿ ಮೇನಕಾ ಪಾಟೀಲ್ ಉಪನ್ಯಾಸ ನೀಡಿದರು.

    ಲಿಂಗಾಯತ ಮಹಾಮಠದ ಶ್ರೀ ಪ್ರಭುದೇವರು ಸಮ್ಮುಖ, ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಮತ್ತು ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ್ ತೇಗಂಪುರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಮೇಶ ಪಾಟೀಲ್ ಪಾಶಾಪುರ, ಸಿದ್ಧಾರೆಡ್ಡಿ ನಾಗೂರಾ, ನಾಗಭೂಷಣ ಹುಗ್ಗೆ, ಡಾ.ಸಿ. ಆನಂದರಾವ, ನಾಗಶೆಟ್ಟಿ ಧರಂಪುರ, ಶಿವಪುತ್ರ ಪಟಪಳ್ಳಿ, ಬಾಲಾಜಿ ಬಿರಾದಾರ, ಸಂಜುಕುಮಾರ ಜಮಾದಾರ, ವಿನೋದ ಪಾಟೀಲ್ ಚಾಂಬೋಳ, ಸಂಜುಕುಮಾರ ಹುಣಜಿ, ಸಾಯಿಕುಮಾರ ಅಷ್ಟೂರ ಇದ್ದರು. ದೇವೇಂದ್ರ ಕರಂಜೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts