More

    ಸಿದ್ದು ಸರ್ಕಾರ ವಜಾಕ್ಕೆ ಆಗ್ರಹಿ ವಿಎಚ್‌ಪಿ ಪ್ರತಿಭಟನೆ

    ಚಿತ್ರದುರ್ಗ: ಮುಸ್ಲಿಮರಿಗೆ 10 ಸಾವಿರ ಕೋಟಿ ರೂ.ಕೊಡುತ್ತೇನೆ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ ರ್ಕಾರದ ವಜಾಕ್ಕೆ ಹಾಗೂ ಶಂಕಿತ ಭಯೋತ್ಪಾದಕ ಸಂಘಟನೆ ನಂಟಿರುವವರೊಂದಿಗೆ ವೇದಿಕೆ ಹಂಚಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದ ಂತೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಕಾರ‌್ಯಕರ್ತರು ಶುಕ್ರವಾರ ಡಿಸಿ ಕಚೇರಿ ಬಳಿ ಪ್ರತಿಭಟಿಸಿದರು.
    ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 4 ಸಾವಿರ ಕೋಟಿ ರೂ.ಅನುದಾನ ನೀಡಿದ್ದು, ಮುಂದಿನ ವರ್ಷ ಮುಸ್ಲಿಮರಿಗೆ 10 ಸಾವಿರ ಕೋಟಿ ರೂ.ಅನುದಾನ ಖಂಡಿತ ಕೊಡುತ್ತೇನೆಂದು ಹೇಳಿ ದ್ದಾರೆ.
    ಅವರ ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಮುಸ್ಲಿಮರಿಗೆ ಪ್ರತ್ಯೇಕ ಅನುದಾನ ಕೊಡಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ. ಅಲ್ಪ ಸಂಖ್ಯಾತ ಪಟ್ಟಿಯಲ್ಲಿರುವ ಆರು ಧರ್ಮದವರನ್ನೂ ಸಮಾನವಾಗಿ ನೋಡಬೇಕಾಗಿದೆ ಹೊರತು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಅಗಾಧ ಪ್ರ ಮಾಣದಲ್ಲಿ ಅನುದಾನ ನೀಡಿರುವುದು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಲು ಉದ್ದೇಶಿಸಿರುವುದು ಸಂವಿಧಾನ ಬಾಹಿ ರವಾಗಿದೆ. ಸಿಎಂ ಹೇಳಿಕೆ ರಾಜ್ಯದ ಸಾಮರಸ್ಯಕ್ಕೆ ಧಕ್ಕೆ ತರುವಂತದ್ದಾಗಿದ್ದು, ತಕ್ಷಣ ಸಿದ್ದರಾಮಯ್ಯ ಸರಕಾರವನ್ನು ವಜಾಗೊಳಿಸ ಬೇಕೆಂದು ಆಗ್ರ ಹಿಸಿದರು.
    ಶಂಕಿತ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿರುವವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆಂಬ ಸಿಎಂ ವಿರುದ್ಧದ ಆರೋಪದ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ವಿಎಚ್‌ಪಿ ಜಿ ಲ್ಲಾ ಕಾರ‌್ಯದರ್ಶಿ ಪಿ.ರುದ್ರೇಶ್, ಬಾಲಕೃಷ್ಣ, ರಂಗಸ್ವಾಮಿ, ರಂಗನಾಥ್, ಕಿಶೋರ್,ರೇಣು,ಪ್ರಮೋದ್, ಸಂಪತ್,ದೀಪಕ್‌ರಾಜ್ ಮತ್ತಿತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts