More

    ಸಿಂಧುತ್ವಕ್ಕಾಗಿ ಹೊಸ ಆದೇಶ ಕೈಬಿಡಿ

    ಕಲಬುರಗಿ: ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕುವ ನೆಪವೊಡ್ಡಿ ಸಿಂಧುತ್ವ ಪಡೆದುಕೊಳ್ಳುವುದಕ್ಕಿಂತಲೂ ಮೊದಲು ನಾಗರಿಕ ಹಕ್ಕು ಜಾರಿ ನಿದರ್ೇಶನಾಲಯದಿಂದ ನಿರಾಕ್ಷೇಪಣೆ ಪತ್ರವಿರುವ ವರದಿ ಪಡೆಯಬೇಕು ಎಂಬ ಸರ್ಕಾರಿ ಆದೇಶ ಕೈಬಿಡಬೇಕು ಎಂದು ಆಗ್ರಹಿಸಿ ಗೊಂಡ ಮತ್ತು ಟೋಕರೆ ಕೋಲಿ ಸಮಾಜದವರು ಜತೆಗೂಡಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
    ನಗರ ಮತ್ತು ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿ ಜಿಲ್ಲಾ ಗೊಂಡ ಸಂಘ ಮತ್ತು ರಾಜ್ಯ ಟೋಕರೆ ಕೋಲಿ ಹಾಗೂ ಕೋಲಿ ಸಂಘಗಳ ನೇತೃತ್ವದಲ್ಲಿ ಡೊಳ್ಳುಗಳನ್ನು ಭಾರಿಸಿಕೊಂಡು ಮೆರವಣಿಗೆ ಮೂಲಕ ಅಲ್ಲಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಆದೇಶ ಹಿಂಪಡೆಯದೆ ಹೋದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
    ಉಭಯ ಸಮಾಜದ ಮುಖಂಡರಾದ ಮಹಾಂತೇಶ ಕೌಲಗಿ ಮತ್ತು ಲಚ್ಚಪ್ಪ ಜಮಾದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸಕರ್ಾರದ ಅದೇಶ ದುರುದ್ದೇಶದಿಂದ ಕೂಡಿದೆ. ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಉದ್ದೇಶದಿಂದ ಇಂತಹ ಕ್ರಮ ಕೈಗೊಂಡಿದೆ, ಹೀಗಾಗಿ ಅದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
    ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿದ್ದು, ಅವುಗಳಲ್ಲಿ ಕೆಲ ಜಾತಿಗಳನ್ನು ಅಷ್ಟೇ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಗೊಂಡ, ನಾಯ್ಕಗೊಂಡ, ರಾಜಗೊಂಡ ಮುಂತಾದ ಜಾತಿಗಳನ್ನು ಸೇರಿಸಲಾಗಿದೆ. ಬೇಡ, ಬೇಡರ, ನಾಯಕ, ನಾಯ್ಕ್ ಮತ್ತು ವಾಲ್ಮೀಕಿ ಜನಾಂಗದವರನ್ನು ಸೇರಿಸಿಲ್ಲ, ಹೀಗಾದರೆ ಈ ಸಮಾಜದವರು ಎಲ್ಲಿಂದ ಸಿಂಧುತ್ವ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದು ಪ್ರಶ್ನಿಸಿದರು. ಎಲ್ಲ ಸಮುದಾಯದ ಜಾತಿಗಳನ್ನು ಅದರಡಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದರು.
    ಮುಖಂಡರಾದ ಭೀಮಶಾ ಖನ್ನಾ, ನಿಂಗಪ್ಪ ಹೇರೂರ, ಶಿವು ಧಣಿ, ಅಂಬಣ್ಣ ನರಗೋಧಿ ಸೇರಿ ಅಪಾರ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts