More

    ಸಾಹಿತ್ಯಕ್ಕೆ ಜನಪದ ತಾಯಿ ಬೇರುವಿಶ್ವ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಪ್ರೊ.ಜಯಣ್ಣಗೌಡ ಅಭಿಮತ

    ಹಾಸನ : ಎಲ್ಲ ಸಾಹಿತ್ಯಕ್ಕೂ ಜನಪದ ಸಾಹಿತ್ಯ ತಾಯಿ ಬೇರಿದಂತೆ. ಕನ್ನಡ ಸಾಹಿತ್ಯದಲ್ಲೂ ಜನಪದ ಅಡಕವಾಗಿದ್ದು, ಇದನ್ನು ಸಂರಕ್ಷಿಸಲು ಯುವ ಸಮುದಾಯ ಮುಂದಾಗಬೇಕು ಎಂದು ವಿಶ್ವ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಪ್ರೊ.ಜಯಣ್ಣಗೌಡ ಹೇಳಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತಾಲೂಕು ಜನಪದ ಸಾಹಿತ್ಯ ಪರಿಷತ್ತು ವತಿಯಿಂದ ಬೇಲೂರು ಪಟ್ಟಣದ ವಿಶ್ವ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತಿ ಇಂದಿರಮ್ಮ ಅವರ ನಮ್ಮೂರ ಚಲುವ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಅಭಿಮಾನ ಮೂಡಬೇಕು. ಆಗ ಮಾತ್ರ ಉತ್ತಮ ಸಾಹಿತಿಯಾಗಲು ಸಾಧ್ಯ. ಆದರೆ ಇತ್ತೀಚಿಗೆ ತಿರುಳಿಲ್ಲದ ಮತ್ತು ಯಾವುದೇ ಸಂದೇಶವಿಲ್ಲದ ಕೃತಿಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಇಂದಿರಮ್ಮ ಅವರ ನಮ್ಮೂರ ಚಲುವ ಕೃತಿ, ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಲಿದೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಸಾಹಿತ್ಯದ ಓದು ವ್ಯಕ್ತಿಯ ವ್ಯಕ್ತಿತ್ವದ ವಿಕಸನ ಜತೆ ಸಂಸ್ಕಾರ, ಸಂಯಮ, ಸಹಬಾಳ್ವೆ, ಸಾಮರಸ್ಯವನ್ನು ಮೂಡಿಸುತ್ತದೆ. ಸಾಹಿತ್ಯ ಇಂದಿನ ಯುವ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಜನಪದ ಸಾಹಿತ್ಯ ಪರಿಷತ್ತು ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯಗಳ ಪರಿಚಯ ಮಾಡುತ್ತಿದೆ ಎಂದು ತಿಳಿಸಿದರು.
    ಜನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಪುಸ್ತಕದ ಜ್ಞಾನದಿಂದ ವ್ಯಕ್ತಿ ತನ್ನ ಅಪರಿಮಿತ ಜ್ಞಾನ ಗಳಿಸಬಹುದು ಎಂಬುದನ್ನು ಈಗಾಗಲೇ ದೊಡ್ಡ ದೊಡ್ಡ ಮಹಾನ್ ಪುರುಷರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತಿ ಇಂದಿರಮ್ಮ ತಮ್ಮ ಮನದಾಳದ ಮಾತುಗಳಿಗೆ ಅಕ್ಷರ ರೂಪ ಕೊಟ್ಟು ಕನ್ನಡ ಸಾಹಿತ್ಯ ಲೋಕ್ಕೆಕ್ಕೆ ಉತ್ತಮ ಕವನ ಸಂಕಲ ನೀಡಿದ್ದಾರೆ ಎಂದರು.
    ಸಾಹಿತಿ ಇಂದಿರಮ್ಮ, ಅರೇಹಳ್ಳಿ ರೋಟರಿ ಸಂಸ್ಥೆ ಅಧ್ಯಕ್ಷ ನದೀಮ್ ಇಕ್ಬಾಲ್, ವಿಶ್ವ ಪ್ರೌಢಶಾಲೆ ಮುಖ್ಯ ಶಿಕ್ಷಕ ವೆಂಕಟೇಶ್, ಕಸಾಪ ಮಾಜಿ ಗೌ.ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts