More

    ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ

    ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಮಂಗಳವಾರ 985 ಕೊವಿಡ್ ಪ್ರಕರಣಗಳು ದಾಖಲಾಗಿವೆ. 4 ಮಂದಿ ಮೃತಪಟ್ಟಿದ್ದಾರೆ.

    ಈ ಮೂಲಕ ಕೊವಿಡ್ ಸಾವಿನ ಪ್ರಕರಣ 764ಕ್ಕೆ ಹಾಗೂ ಒಟ್ಟು ಕೊವಿಡ್ ಸಂಖ್ಯೆ 48281ಕ್ಕೆ ತಲಪಿವೆ. ಜಿಲ್ಲೆಯಲ್ಲಿ ಕರೊನಾದಿಂದ ಗುಣವಾದ 450 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಒಟ್ಟು ಡಿಸ್‌ಚಾರ್ಜ್ ಆದವರ ಸಂಖ್ಯೆ 39,638 ತಲಪಿದೆ. ಸದ್ಯ 7,814 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈವರೆಗೆ 51271 ಮಾಸ್ಕ್ ಉಲ್ಲಂಘನೆ ಪ್ರಕರಣದಲ್ಲಿ 53,60,130 ರೂ. ದಂಡ ವಿಧಿಸಲಾಗಿದೆ. ಪದವಿನಂಗಡಿ ಬಳಿ ಒಂದು ಮನೆಯ 6 ಮಂದಿಗೆ, ನಾವೂರು ಪರ್ಲ ಬಳಿ ಮನೆಯಲ್ಲಿ 5 ಮಂದಿಗೆ, ಬೆಳ್ತಂಗಡಿಯ ಕುಕ್ಕುದಡ್ಕ ಬಳಿ ಒಂದು ಮನೆಯ 5 ಮಂದಿಗೆ ಪಾಸಿಟಿವ್ ವರದಿ ಬಂದ ಪರಿಣಾಮ, ಈ ಮೂರು ಪ್ರದೇಶಗಳನ್ನೂ ಕಂಟೈನ್‌ಮೆಂಟ್ ವಲಯವೆಂದು ಘೋಷಣೆ ಮಾಡಲಾಗಿದೆ.

    ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 556 ಮಂದಿಗೆ ಕರೊನಾ ದೃಢಪಟ್ಟಿದ್ದು, ಉಡುಪಿಯ 78 ವರ್ಷ ಪುರುಷ ಹಾಗೂ ಕಾರ್ಕಳದ 46 ವರ್ಷದ ಪುರುಷ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 203ಕ್ಕೆ ಏರಿದೆ. ಸೋಂಕಿತರಲ್ಲಿ 319 ಮಂದಿ ಉಡುಪಿ, 171 ಮಂದಿ ಕುಂದಾಪುರ, 64 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. ಇಬ್ಬರು ಹೊರ ಜಿಲ್ಲೆಯವರು. ಇವರಲ್ಲಿ 191 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 18 ಮಂದಿ ಕೋವಿಡ್ ಅಸ್ಪತ್ರೆಯಲ್ಲಿ ಹಾಗೂ 538 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 337 ಮಂದಿ ಗುಣವಾಗಿದ್ದಾರೆ. ಸಕ್ರಿಯ ಪ್ರಕರಣ ಸಂಖ್ಯೆ 2705ಕ್ಕೆ ಏರಿದೆ.

    ಕಾಸರಗೋಡಲ್ಲಿ 673: ಕಾಸರಗೋಡು ಜಿಲ್ಲೆಯ 637 ಮಂದಿಯಲ್ಲಿ ಮಂಗಳವಾರ ಕರೊನಾ ಸೋಂಕು ದೃಢಪಟ್ಟಿದೆ. 116 ಮಂದಿ ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts