More

    ಸಾವಿರ ದಾಟೇಬಿಟ್ಟಿತು ಚೀನಿ ವೈರಸ್!

    ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 129 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1088ಕ್ಕೆ ಏರಿದೆ.

    ಇದುವರೆಗೆ 398 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 657 ಪ್ರಕರಣಗಳು ಸಕ್ರಿಯವಾಗಿವೆ. 33 ಜನ ಮೃತಪಟ್ಟಿದ್ದಾರೆ.

    ಭಾನುವಾರವೂ ಹುಬ್ಬಳ್ಳಿ ತಾಲೂಕಲ್ಲಿ ಅತಿಹೆಚ್ಚು, ಅಂದರೆ 116 ಪ್ರಕರಣ ಕಂಡುಬಂದಿದ್ದು, ಸಾರ್ವಜನಿಕರು ಅನಗತ್ಯವಾಗಿ ಮನೆ ಬಿಟ್ಟು ಬರುವುದು ಅತ್ಯಂತ ಅಪಾಯ ಎಂಬುದನ್ನು ಸಾರಿ ಹೇಳುತ್ತಿದೆ.

    ಭಾನುವಾರದ ಪ್ರಕರಣಗಳ ಸ್ಥೂಲ ಮಾಹಿತಿ ಈ ಮುಂದಿನಂತಿದೆ. ಧಾರವಾಡ ಹೊಸಯಲ್ಲಾಪುರದ 26 ವರ್ಷದ ಮಹಿಳೆ, ಶೆಟ್ಟ್ಟ್ ಕಾಲನಿ ಅಂಬೇಡ್ಕರ್ ನಗರದ 58 ವರ್ಷದ ಪುರುಷ, ಧಾರವಾಡ ಪತ್ರೇಶ್ವರ ನಗರದ 23 ವರ್ಷದ ಯುವಕ, ಧಾರವಾಡ ಡಾಲರ್ಸ್ ಕಾಲನಿ 2 ನೇ ಮುಖ್ಯ ರಸ್ತೆ, 4 ನೇ ಅಡ್ಡರಸ್ತೆಯ 42 ವರ್ಷದ ಮಹಿಳೆ, ಹಳೆ ಆದಾಯ ತೆರಿಗೆ ಕಚೇರಿ ಹತ್ತಿರದ ಸುಯೋಗ ಅಪಾರ್ಟ್​ವೆುಂಟ್​ನ 33 ವರ್ಷದ ಯುವಕ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದರು.

    ಧಾರವಾಡ ಕಮಲಾಪುರದ ಕುಂಬಾರ ಓಣಿಯ 27ರ ಯುವತಿ, ವೀರಭದ್ರ ಗುಡಿ ಓಣಿಯ 41 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಧಾರವಾಡ ಎಸ್​ಬಿಐ ಆವರಣದ 45 ವರ್ಷದ ಪುರುಷ, ಸತ್ತೂರ ಎಸ್​ಡಿಎಂ ದಂತ ವೈದ್ಯಕೀಯ ಕಾಲೇಜು ಆವರಣದ 46 ವರ್ಷದ ಮಹಿಳೆ, 24ರ ಯುವಕ, ನವೋದಯ ನಗರ ನೀರಿನ ಟ್ಯಾಂಕ್ ಹತ್ತಿರದ 49ರ ಪುರುಷ, ಧಾರವಾಡ ಸೆಕ್ಯೂರ್ ಆಸ್ಪತ್ರೆಯ 27ರ ಯುವತಿ, ಮೃತ್ಯುಂಜಯ ನಗರದ 31 ವರ್ಷದ ಮಹಿಳೆಯ ಸಂಪರ್ಕ ಪತ್ತೆಯಾಗಬೇಕಿದೆ.

    ಹುಬ್ಬಳ್ಳಿ ವಿದ್ಯಾನಗರ ಜೈನ ಶಾಲೆ ಹತ್ತಿರದ 35 ವರ್ಷದ ಮಹಿಳೆ, ಹುಬ್ಬಳ್ಳಿ ರೈಲ್ವೆ ಕ್ವಾರ್ಟರ್ಸ್ ನಿವಾಸಿ 34ರ ಯುವಕ, ಕುಸುಗಲ್ ರಸ್ತೆ ಆದರ್ಶ ಲೇಔಟ್ ನಿವಾಸಿ 56ರ ಮಹಿಳೆ, ನೆಹರು ನಗರದ 34 ವರ್ಷದ ಮಹಿಳೆ, ನವನಗರದ 40 ವರ್ಷದ ಮಹಿಳೆ, ಹುಬ್ಬಳ್ಳಿ ಬೆಂಗೇರಿ ಗಾಯತ್ರಿ ಕಾಲನಿಯ 69 ವರ್ಷದ ವೃದ್ಧ, ಹುಬ್ಬಳ್ಳಿ ಘಂಟಿಕೇರಿ ಪೊಲೀಸ್ ಠಾಣೆ ಹತ್ತಿರದ ಮತ್ತಿಕೊಪ್ಪ ಬಿಲ್ಡಿಂಗ್​ನ 28 ವರ್ಷದ ಯುವಕ, ಆರ್.ಎನ್. ಶೆಟ್ಟಿ ರಸ್ತೆ ಬ್ಯಾಂಕರ್ಸ್ ಕಾಲನಿಯ 40 ವರ್ಷದ ಪುರುಷ, ಮಾಣಿಕ್ ಚಾಳದ 35ರ ಮಹಿಳೆ, 32ರ ಪುರುಷ, ಹೊಸೂರಿನಲ್ಲಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿಯ 23ರ ಯುವತಿ, ನೂಲ್ವಿ ಗಂಗಾಧರ ನಗರದ 58ರ ಪುರುಷ, ರ್ಕ ಬಸವೇಶ್ವರ ನಗರದ 40ರ ಮಹಿಳೆ, 40 ವರ್ಷದ ಮಹಿಳೆ, 55 ವರ್ಷದ ಪುರುಷ, ವಿನಾಯಕ ನಗರದ 25ರ ಯುವಕ, ರ್ಕಬಸವೇಶ್ವರ ನಗರ 9ನೇ ಕ್ರಾಸ್​ನ 24ರ ಯುವತಿ, ಸಿಬಿಟಿ ಭಂಡಿವಾಡ ಅಗಸಿಯ ಮಿಸ್ಕಿನ್ ಕೋಟಿ ಅಪಾರ್ಟ್​ವೆುಂಟ್​ನ 43 ವರ್ಷದ ಪುರುಷ, ಕಿಮ್ಸ್ ಸಿಬ್ಬಂದಿ 25 ವರ್ಷದ ಯುವಕ, ಕೇಶ್ವಾಪುರದ ಜನತಾ ಕ್ವಾರ್ಟರ್ಸ್ ಎದುರಿನ ಮಲ್ಲಿಕಾರ್ಜುನ ಲೇಔಟ್​ನ 24ರ ಯುವತಿ, ತಾ.ಪಂ. ವಸತಿಗೃಹ ನಿವಾಸಿ 36 ವರ್ಷದ ಮಹಿಳೆ ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

    ಹುಬ್ಬಳ್ಳಿ ಕೇಶ್ವಾಪುರ ಎಸ್​ಬಿಐ ಕ್ವಾರ್ಟರ್ಸ್​ನ 43 ವರ್ಷದ ಪುರುಷ, ಹುಬ್ಬಳ್ಳಿ ರೇಲ್ವೆ ವರ್ಕ ಶಾಪ್ ಇಎಂಡಿ ಶೆಡ್​ನ 49 ವರ್ಷದ ಪುರುಷ ನೆಗಡಿ, ಕುಸುಗಲ್ ರಸ್ತೆ ಪೆಸಿಫಿಕ್ ಪಾರ್ಕ್​ನ 54 ವರ್ಷ ಪುರುಷ, ಗದಗ ರಸ್ತೆ ವಿನೂತನ ಕಾಲನಿಯ 25 ವರ್ಷದ ಯುವತಿ, ಹುಬ್ಬಳ್ಳಿ ದೊಡ್ಡಮನಿ ಕಾಲನಿಯ 27ರ ಯುವಕ, 42 ವರ್ಷದ ಮಹಿಳೆ, ರ್ಕ ಬಸವೇಶ್ವರ ನಗರದ 43ರ ಪುರುಷ, ಹುಬ್ಬಳ್ಳಿಯ 45ರ ಪುರುಷ, ಉಣಕಲ್ ನಿವಾಸಿ 55 ವರ್ಷದ ಪುರುಷ, ಪ್ರಶಾಂತ ನಗರದ 54 ವರ್ಷದ ಪುರುಷ, ಗೋಕುಲ ರಸ್ತೆಯ 32ವರ್ಷದ ಯುವಕ, ರಾಯಾಪುರದ 69ರ ವೃದ್ಧ, ನ್ಯೂ ವಿನೋಬ ನಗರ ರೇಲ್ವೆ ಕ್ವಾರ್ಟರ್ಸ್​ನ 36ರ ಯುವಕ, ಗೂಡ್ಸ್​ಶೆಡ್ ಕಲಕೇರಿ ಹಕ್ಕಲದ 79ರ ವೃದ್ಧೆ, ಅಶೋಕ ನಗರ ಹೌಸಿಂಗ್ ಸೊಸೈಟಿಯ 49ರ ಪುರುಷ, ಬೆಂಗೇರಿ ಶಿವಗಿರಿ ಕಾಲನಿಯ 22ರ ಯುವಕ, ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

    ಬಿಡನಾಳದ 49 ರ ಪುರುಷ, ರಾಜೀವ ನಗರ ಪೊಲೀಸ್ ಕ್ವಾರ್ಟರ್ಸ್​ನ 43ರ ಪುರುಷ, ಪೆಂಡಾರಗಲ್ಲಿ 35ರ ಪುರುಷ, ಬೆಂಗೇರಿ ಗಾಯತ್ರಿ ಕಾಲನಿಯ 10 ವರ್ಷದ ಬಾಲಕಿ, ದೇಸಾಯಿ ಓಣಿಯ 61ರ ಮಹಿಳೆ, ಮಂಟೂರ ರಸ್ತೆ 34ರ ಯುವಕನ ಸಂಪರ್ಕ ಪತ್ತೆಯಾಗಬೇಕಿದೆ.

    ತಾಜ್ ನಗರ ಬ್ರಹ್ಮಗಿರಿ ಕಾಲನಿಯ 36ರ ಮಹಿಳೆ, ಯಲ್ಲಾಪುರ ಓಣಿ ಮೆಹಬೂಬ್ ನಗರದ 67ರ ವೃದ್ಧ, ಸುಭಾಸ ನಗರ 4 ನೇ ಕ್ರಾಸ್ 55 ವರ್ಷದ ಪುರುಷ, ರ್ಕಬಸವೇಶ್ವರ ನಗರ ಮುಖ್ಯ ರಸ್ತೆಯ 45 ವರ್ಷದ ಮಹಿಳೆ ವಿನೂತನ ಕಾಲನಿ ಎಬಿಎಂ ಚರ್ಚ್ ಹತ್ತಿರದ 55ರ ಮಹಿಳೆ, ಬೃಂದಾವನ ಕಾಲನಿ ಶರೋನ್ ಚರ್ಚ್ ಬಳಿಯ 31 ವರ್ಷದ ಯುವಕ, ಕೇಶ್ವಾಪುರದ 39 ವರ್ಷದ ಮಹಿಳೆ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

    ಅಂಚಟಗೇರಿ ಓಣಿಯ 33 ವರ್ಷದ ಮಹಿಳೆ, ಹಳೇಬಸ್ ನಿಲ್ದಾಣ ಹತ್ತಿರದ ವ್ಯಕ್ತಿ 44ರ ಪುರುಷ, ದೊಡ್ಡಮನಿ ಕಾಲನಿಯ 15ರ ಬಾಲಕಿ, 21ರ ಯುವಕ, 25ರ ಯುವಕ, 23ರ ಯುವಕ, ನವನಗರದ 30 ವರ್ಷದ ಮಹಿಳೆ, ಹುಬ್ಬಳ್ಳಿ ಮಂಟೂರ ರಸ್ತೆ ಕೃಪಾ ನಗರದ 47ರ ಪುರುಷ, ಬಂಕಾಪುರ ಚೌಕದ 24ರ ಯುವಕ, ಗಣೇಶ ನಗರದ 55ರ ಮಹಿಳೆ, ಬೆಂಗೇರಿ ಗಾಯತ್ರಿ ಕಾಲನಿಯ 39ರ ಪುರುಷ, ಪ್ರಶಾತ ಕಾಲನಿಯ 34ರ ಮಹಿಳೆ, ಬಾಕಳೆ ಗಲ್ಲಿಯ 30ರ ಯುವಕ, 22ರ ಯುವಕ, ನವನಗರದ 29ರ ಯುವಕ ವಿದ್ಯಾನಗರ ಹಳೇ ಆದಾಯ ತೆರಿಗೆ ಕಚೇರಿ ಹತ್ತಿರದ 38ರ ಮಹಿಳೆ, ಈಶ್ವರ ನಗರದ 22ರ ಯುವಕ, ಮಯೂರಿ ಗಾರ್ಡನ್​ನ 762ರ ವೃದ್ಧೆ, ತಬೀಬ ಲ್ಯಾಂಡ್​ನ 20ರ ಯುವಕ, ಸುಳ್ಳ ರಸ್ತೆ ನಿವಾಸಿ 50ರ ಪುರುಷ, ಗೋಕುಲದ 55ರ ಪುರುಷ, ನವನಗರದ 25ರ ಯುವಕ, 50 ವರ್ಷದ ಮಹಿಳೆ, ವಿದ್ಯಾನಗರದ 28ರ ಯುವಕ, ಮಹದೇವ ನಗರದ 48ರ ಪುರುಷ, ಮಂಟೂರ ರಸ್ತೆಯ 52ರ ಪುರುಷ, ಮಂಟೂರ ರಸ್ತೆಯ 60 ವರ್ಷದ ವೃದ್ಧೆ ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

    ನೇಕಾರ ನಗರದ 58ರ ಪುರುಷ, ಕೇಶ್ವಾಪುರದ 56 ವರ್ಷದ ಮಹಿಳೆ, ಶಾಂತಿನಗರದ 61ರ ವೃದ್ಧೆ, ಸಂತೋಷ ನಗರದ 16ರ ಬಾಲಕ, 13ರ ಬಾಲಕ, 49 ವರ್ಷದ ಪುರುಷ, ಮಧುರಾ ಪಾರ್ಕ್​ನ 40ರ ಮಹಿಳೆ ಇವರು ಪಿ- 35268 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಹಳೇಹುಬ್ಬಳ್ಳಿಯ 53 ಮತ್ತು 30 ವರ್ಷದ ಮಹಿಳೆಯರು, ಮಧುರಾ ಪಾರ್ಕ್​ನ 42ರ ಪುರುಷನಿಗೆ ಸೋಂಕು ತಗುಲಿದೆ.

    ಕುಸುಗಲ್ ರಸ್ತೆಯ 86ರ ವೃದ್ಧೆ, ಉಪನಗರ ಪೊಲೀಸ್ ಠಾಣೆಯ 28ರ ಯುವಕ, 26ರ ಯುವಕ, ಕೇಶ್ವಾಪುರದ 24ರ ಯುವಕ, ಹುಬ್ಬಳ್ಳಿಯ 22ರ ಯುವತಿ, ಓಂ ನಗರದ 59ರ ಪುರುಷ, ಬಸವೇಶ್ವರ ನಗರದ 29ರ ಯುವತಿ, ಕಂಠಿ ಓಣಿಯ 55ರ ಪುರುಷ, ಉಣಕಲ್ ದುರುಗಮ್ಮ ದೇವಾಲಯ ಹತ್ತಿರದ 34ರ ಯುವಕ, ತಬೀಬ ಲ್ಯಾಂಡ್​ನ 59ರ ಪುರುಷ, ದೇಶಪಾಂಡೆ ನಗರದ 53 ವರ್ಷದ ಮಹಿಳೆ, ಕಾರವಾರ ರಸ್ತೆ ಚಾಟ್ನಿ ಕಾಂಪ್ಲೆಕ್ಸ್​ನ 29ರ ಯುವಕ, ಶೆಟ್ಟರ್ ಲೇಔಟ್​ನ 50 ವರ್ಷದ ಪುರುಷ, ಬಂಕಾಪುರ ಚೌಕ್​ನ 51ರ ಪುರುಷ, ಕಿಮ್್ಸ ಆವರಣದ 23ರ ಮಹಿಳೆ, ಸುರಭಿ ನಗರದ 38ರ ಪುರುಷ, ಕಸಬಾಪೇಟ ಠಾಣೆ ಹತ್ತಿರದ 19ರ ಯುವಕ, ಆಜಾದ ಕಾಲನಿಯ 68ರ ವೃದ್ಧೆಗೆ ಕರೊನಾ ತಗುಲಿದೆ.

    ನವಲಗುಂದ ತಾಲೂಕು ಜಾವೂರಿನ 70ರ ವೃದ್ಧ, ಬಿ.ಎಂ.ಅರೆಗೊಪ್ಪದ 25ರ ಯುವತಿ, ಕುಂದಗೋಳ ತಾ. ಹಿರೇಗುಂಜಳ ಗ್ರಾಮದ 68ರ ವೃದ್ಧ, ಕೂಬಿಹಾಳ ಗುರುಲಿಂಗೇಶ್ವರ ಓಣಿಯ 4 ವರ್ಷದ ಹೆಣ್ಣು ಮಗು, ಯಲಿವಾಳದ 74ರ ವೃದ್ಧ, ಬೆಳಗಾವಿ ಜಿಲ್ಲೆಯ ಅಥಣಿಯ 24 ವರ್ಷದ ಯುವತಿಗೆ ಕರೊನಾ ಸೋಂಕು ದೃಢಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts