More

    ಸಾವಯವ ಕೃಷಿ ಆರೋಗ್ಯಕ್ಕೆ ಪೂರಕ

    ನಿಪ್ಪಾಣಿ / ಚಿಕ್ಕೋಡಿ: ರೈತರು ಮಣ್ಣು ಕಲುಷಿತಗೊಳಿಸುವ ರಾಸಾಯನಿಕ ಗೊಬ್ಬರ, ಪ್ಲಾಸ್ಟಿಕ್ ಮತ್ತಿತರ ವಸ್ತು ಬಳಕೆ ನಿಲ್ಲಿಸಿ ಸಾವಯವ ಕೃಷಿಗೆ ಮೊರೆ ಹೋಗಬೇಕು. ಮಿಶ್ರ ಪದ್ಧತಿ ಅನುಸರಿಸುವ ಮೂಲಕ ಉತ್ತಮ ಸಾತ್ವಿಕ ಬೆಳೆ ಬೆಳೆಯಬಹುದು. ಇದರಿಂದ ಪ್ರತಿಯೊಬ್ಬ ರೈತ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿಯ ಸಿದ್ಧಗಿರಿ ಮಠದ ಪರಮಪೂಜ್ಯ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿ ವೇದಿಕೆಯಲ್ಲಿ ಏರ್ಪಡಿಸಿರುವ ಪಂಚಮಹಾಭೂತ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಕನಿಷ್ಠ ಐದು ಗಿಡಗಳನ್ನು ಬೆಳೆಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಮನೆಗೊಂದು ಮರ, ಶಾಲೆಗೊಂದು ಉದ್ಯಾನ ಆಗುವಂತೆ ಪ್ರಯತ್ನಿಸಬೇಕು. ಕುಡಿಯುವ ನೀರು, ಇಂಧನ ಮಿತವಾಗಿ ಬಳಸಬೇಕು. ಅಗತ್ಯಕ್ಕಿಂತ ಹೆಚ್ಚು ಬಳಸಿದಲ್ಲಿ ಮುಂದಿನ ಪೀಳಿಗೆಗೆ ಅವುಗಳ ಕೊರತೆ ಕಟ್ಟಿಟ್ಟ ಬುತ್ತಿ. ಲೋಕೋತ್ಸವದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನಿಡಿದರು.

    ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸರ್ಕಾರ ಮಾಡುವ ಕೆಲಸಗಳು ಸಿದ್ಧಗಿರಿಮಠದಿಂದ ಮಾಡಲಾಗುತ್ತಿದೆ. ದೇಶಕ್ಕೆ ಅನ್ನ ಹಾಕುವ ರೈತನ ಪರಿಸ್ಥಿತಿ ಗಂಭೀರವಾಗಿದೆ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ನೇತತ್ವದಲ್ಲಿ ರೈತ, ಕಷಿ ಬಗ್ಗೆ ಪ್ರೇರಣೆ ಹುಟ್ಟುವಂತಹ ಕಾರ್ಯಕ್ರಮ ನಡೆದಿರುವುದು ಸಂತಸದ ಸಂಗತಿ ಎಂದರು.

    ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಾರಾಯಣ ರಾಣೆ, ಆರ್‌ಎಸ್‌ಎಸ್ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಗೋವಾ ವಿಧಾನ ಪರಿಷತ್ ಸಭಾಪತಿ ರಮೇಶ ತಾವಡಕರ, ಶಾಸಕ ಮಹೇಶ ಶಿಂಧೆ, ನೀಲಮ ರಾಣೆ, ಕೊಲ್ಲಾಪುರ ಜಿಲ್ಲಾಧಿಕಾರಿ ರಾಹುಲ ರೇಖಾವರ, ಕೊಲ್ಲಾಪುರ ಜಿಲ್ಲಾ ಪಂಚಾಯಿತಿ ಸಿಇಒ ಸಂಜಯಸಿಂಹ ಚವ್ಹಾಣ ಉಪಸ್ಥಿತರಿದ್ದರು. ರಮೇಶ ಪಾಟೀಲ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts