More

    ಸಾಲ ಮರು ಪಾವತಿಸಿ ಸಂಘದ ಬೆಳವಣಿಗೆಗೆ ಸಹಕರಿಸಿ


    ಶ್ರೀಕಂಠೇಶ್ವರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ಶಾಂತಮೂರ್ತಿ ಮನವಿ


    ನಂಜನಗೂಡು: ಸಹಕಾರ ಸಂಘದಲ್ಲಿ ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ನೆರವಾಗಬೇಕು ಎಂದು ಶ್ರೀಕಂಠೇಶ್ವರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ಶಾಂತಮೂರ್ತಿ ಮನವಿ ಮಾಡಿದರು.


    ನಗರದ ಶೃಂಗೇರಿ ಶಂಕರಮಠದಲ್ಲಿ ಏರ್ಪಡಿಸಿದ್ದ ಶ್ರೀಕಂಠೇಶ್ವರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 2021-22ನೇ ಸಾಲಿನ ವಾರ್ಷಿಕ ವಹಾಸಭೆಯಲ್ಲಿ ಅವರು ಮಾತನಾಡಿದರು.


    ಸಾಲ ಪಡೆದವರು ಸಾಲವನ್ನು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡಿದರೆ ಮಾತ್ರ ಬ್ಯಾಂಕ್‌ಗಳ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
    ಆಡಳಿತಾರೂಢ ಸರ್ಕಾರಗಳು ಅನುಸರಿಸುವ ದ್ವಂದ್ವ ನಿಲುವುಗಳಿಂದ ಸಹಕಾರ ಸಂಘಗಳು ನಷ್ಟ ಅನುಭವಿಸುವಂತಾಗಿದೆ. ನಷ್ಟದಲ್ಲಿರುವ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಪ್ರೊ.ವೈದ್ಯನಾಥನ್ ವರದಿ ಶಿಫಾರಸು ನಮ್ಮ ಬ್ಯಾಂಕಿಗೆ ಅನ್ವಯವಾಗಿದ್ದರೆ ಖಂಡಿತ ಅಬಿವೃದ್ಧಿಗೆ ನೆರವಾಗುತ್ತಿತ್ತು, ದುರಾದೃಷ್ಟವಶಾತ್ ನಮ್ಮ ಬ್ಯಾಂಕ್ ಪಟ್ಟಿಯಿಂದ ಹೊರಗಿರುವುದು ಸಮಸ್ಯೆಯಾಗಿದೆ ಎಂದು ತಿಳಿಸಿದರು.


    ಶ್ರೀಕಂಠೇಶ್ವರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವ್ಯವಸ್ಥಾಪಕಿ ಪಿ.ಮಮತಾ ಅವರು 2021-22ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದನೆ ಪಡೆದರು.

    ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣ, ನಿರ್ದೇಶಕರಾದ ಎಚ್.ಕೆ.ಚೆನ್ನಪ್ಪ, ಕೆ.ಚೆಲುವಪ್ಪ, ನಂಜನಗೂಡು ಮಧು, ಮಹದೇವನಾಯಕ, ಬಿ.ಎನ್.ಶಿವಳ್ಳಿ, ಪಿ.ಎಸ್.ಮಹದೇವಸ್ವಾಮಿ, ಸಿ.ಗುರುಪ್ರಸಾದ್, ಕೆ.ಹುಂಡಿ ಕೆಂಪಣ್ಣ, ಮೋಹನ್‌ಶಂಕರ್, ಎನ್.ಎಂ.ಗುರುಸ್ವಾಮಿ, ಬ್ಯಾಂಕ್ ಸಿಬ್ಬಂದಿ ಹಿರಿಯ ಕ್ಷೇತ್ರಾಧಿಕಾರಿ ಎಂ.ಎಸ್.ಜಗದೀಶ್‌ಮೂರ್ತಿ, ಸುನೀಲ್, ಈಶ್ವರ್, ಗುರುಪ್ರಸಾದ್ ಹಾಗೂ ನೂರಾರು ಸಹಕಾರಿಗಳು ಹಾಜರಿದ್ದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts