More

    ಸಾರ್ವತ್ರಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿ, ಸರ್ಕಾರಕ್ಕೆ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಒತ್ತಾಯ

    ವಿಜಯಪುರ: ಕರೊನಾ ಹಿನ್ನೆಲೆ ಸಾರ್ವತ್ರಿಕ ಗಣೇಶೋತ್ಸವಕ್ಕೆ ಕಠಿಣ ನಿರ್ಬಂಧ ವಿಧಿಸಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಗಜಾನನ ಉತ್ಸವ ಮಹಾಮಂಡಳ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

    ಕಳೆದ ಎರಡು ವರ್ಷಗಳಿಂದ ಕರೊನಾ ಹಿನ್ನೆಲೆ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಲಾಗಿದೆ‌. ಈ ಬಾರಿಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾರ್ಗಸೂಚಿ ಹೊರಡಿಸಲಾಗಿದೆ. ಅದರಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸಾಕಷ್ಟು ನಿರ್ಬಂಧ ವಿಧಿಸಲಾಗಿದೆ. ಕೂಡಲೇ ಈ ಮಾರ್ಗಸೂಚಿ ಹಿಂಪಡೆಯಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ದೇವಸ್ಥಾನಗಳಲ್ಲಿ ಗಣೇಶ ಪ್ರತಿಷ್ಟಾಪನೆ ಗೆ ಸರ್ಕಾರ ಸಲಹೆ ನೀಡಿದೆ. ಆದರೆ, ಸಾಕಷ್ಟು ಪ್ರಮಾಣದಲ್ಲಿ ದೇವಸ್ಥಾನದಲ್ಲಿ ಅವಕಾಶ ಸಿಗಲ್ಲ. ಹೀಗಾಗಿ ಸಾರ್ವತ್ರಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದರು.
    ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಲಾಗಿದೆ. ಈ ಹಬ್ಬ ಒಂದು ಬಾರಿ ನಿಂತರೆ ಮುಂದೆ ಆಚರಣೆ ಸಂಪೂರ್ಣ ನಿಂತು ಹೋಗುವ ಸಾದ್ಯತೆ ಇದೆ‌. ಹೀಗಾಗಿ ಕರೊನಾ ಮಾರ್ಗಸೂಚಿ ಅನುಸರಿಸಿ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದರು.
    ಗಣೇಶ ಚತುರ್ಥಿ ಹಬ್ಬದ ಮೇಲೆ ಸಾಕಷ್ಟು ಜನರ ಜೀವನ ಅವಲಂಬಿಸಿದೆ. ಹೂ, ಹಣ್ಣು ಮಾರಾಟಗಾರರು, ಮಂಟಪ ದವರು, ಕಲಾವಿದರು, ರೈತರು ಹೀಗೆ ಹಲವಾರು ಜನರ ಬದುಕು ಈ ಹಬ್ಬವನ್ನು ಅವಲಂಬಿಸಿದೆ. ನಿಷೇಧ ವಿಧಿಸಿದರೆ ಇವರೆಲ್ಲರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂದರು.
    ಈಗಾಗಲೇ‌ ಮುಖ್ಯ ಮಂತ್ರಿಗಳು ಗಾರ್ಡ್ ಆಫ್ ಆನರ್ ಬೇಡೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂ ಹಣ್ಣು ತರಕಾರಿ ಬೇಡ ಎಂಬ ಉತ್ತಮ ನಿರ್ಧಾರ ಕೈಗೊಂಡಿದ್ದೀರಿ, ಅದೇ ರೀತಿ ಕರೊನಾ ಮುಂಜಾಗ್ರತೆಯೊಂದಿಗೆ ಗಣೇಶೋತ್ಸವ ಆಚರಿಸಲು ಅವಕಾಶ ಕಲ್ಪಿಸಬೇಕೆಂದರು.
    ಕಳೆದ ಬಾರಿ ನೆರೆಯ ಮಹಾರಾಷ್ಟ್ರ ದಲ್ಲಿ ಸಾಮಾಜಿಕ ಅಂತರದೊಂದಿಗೆ ಗಣೇಶೋತ್ಸವ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದರು. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಅವಕಾಶ ಕಲ್ಪಿಸಬೇಕೆಂದರು.
    ಶಿವಾನಂದ ಮಾನಕರ, ವಿಜಯಕುಮಾರ ಕುವಳ್ಳಿ, ಪ್ರಭಾಕರ್ ಬೋಸಲೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts