More

    ಸಾರ್ವಜನಿಕ ಆಸ್ತಿ ಹಾನಿಗೆ ವಿಶೇಷ ನೆರವು ನೀಡಿ

    ಕಾರವಾರ: ಕಳೆದ ವರ್ಷ ನೆರೆಯಿಂದ ಕೊಚ್ಚಿ ಹೋದ ರಸ್ತೆಗಳನ್ನು ಮರು ನಿರ್ಮಾಣ ಮಾಡಲು ಶಾಸಕಿ ರೂಪಾಲಿ ನಾಯ್ಕ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

    ಕಳೆದ ಬಾರಿ ನೆರೆಯಿಂದ ಉಂಟಾದ ಸಾರ್ವಜನಿಕ ಆಸ್ತಿ ಹಾನಿಗೆ ವಿಶೇಷ ನೆರವು ನೀಡುವಂತೆ ಶಾಸಕಿ ರೂಪಾಲಿ ನಾಯ್ಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಅನುದಾನ ಮಂಜೂರಾಗಿದ್ದು, ಶಿರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 45 ಲಕ್ಷ ರೂ. ವೆಚ್ಚದ ಸಕಲಮಖೇರಿ ರಸ್ತೆ, 20 ಲಕ್ಷ ರೂ. ವೆಚ್ಚದಲ್ಲಿ ಸಾಸನವಾಡ ರಸ್ತೆ ಹಾಗೂ ಕಿನ್ನರ ಗ್ರಾಪಂ ವ್ಯಾಪ್ತಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಗುಣಸಭಾ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರಕಿದೆ. ಶಾಸಕರು ಭೂಮಿ ಪೂಜೆ ನೆರವೇರಿಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು. ಓಡಾಡಲು ದುಸ್ತರವಾಗಿದ್ದ ರಸ್ತೆಗಳ ಪುನರ್ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ವಿಠಲ ನಾಯ್ಕ, ರಾಜೇಶ ನಾಯ್ಕ ಸಿದ್ಧರ, ಜಗನ್ನಾಥ ಗಾಂವಕಾರ, ವಿನಾಯಕ ಗಾಂವಕಾರ, ಪರೇಶ ನಾಯ್ಕ, ನಂದನ ಮಾಂಜ್ರೇಕರ, ನಿತ್ಯಾನಂದ ಗಾಂವಕರ, ಪುಂಡಲೀಕ ಗಾಂವಕರ, ಮನೋಜ ಭಟ್, ಉದಯ ಬಶೆಟ್ಟಿ, ಗಿರೀಶ ನಾಯ್ಕ, ಹರಿಶ ನಾಗೇಕರ, ಹರಿಶ್ಚಂದ್ರ ಕೊಠಾರಕರ, ಸುಜಾತಾ ಬಾಂದೇಕರ್, ಜಿಪಂ ಎಇಇ ರವಿಕುಮಾರ್, ಇಂಜಿನಿಯರ್ ಪ್ರಹ್ಲಾದ ರಾಣೆ ಇದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts