More

    ಸಾರ್ವಜನಿಕರ ಕೆಲಸಗಳನ್ನು ನಿಷ್ಠೆಯಿಂದ ಮಾಡಿ

    ಮಳವಳ್ಳಿ: ಸಾರ್ವಜನಿಕರ ಕೆಲಸವನ್ನು ನಿಷ್ಠೆಯಿಂದ ಮಾಡುವ ಮೂಲಕ ಆಡಳಿತ ವ್ಯವಸ್ಥೆಯ ಮಾನ, ಮರ್ಯಾದೆ ಉಳಿಸಲು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ರಂಗೇಗೌಡ ಎಚ್ಚರಿಸಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಗ್ರಾಮೀಣ ಅಭಿವೃದ್ಧಿಗಾಗಿ ಇಲಾಖಾವಾರು ಬಿಡುಗಡೆ ಮಾಡಿರುವ ಅನುದಾನ ಬಳಕೆಗೆ ಕೇವಲ 30 ದಿನ ಬಾಕಿ ಉಳಿದಿದೆ. ಅಲ್ಲದೆ, ಮುಂದಿನ ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದರಿಂದ ತ್ವರಿತವಾಗಿ ಅನುದಾನ ಸದ್ವಿನಿಯೋಗ ಮಾಡುವಂತೆ ಸೂಚಿಸಿದರು.

    ಕೃಷಿ ಇಲಾಖೆ ಸಹಾಯ ನಿರ್ದೇಶಕ ಜಯರಾಮು ಮಾತನಾಡಿ, ನಮ್ಮ ಇಲಾಖೆಗೆ ಬಂದಿರುವ ಅನುದಾನವನ್ನು ಶೇ.100 ರಷ್ಟು ಬಳಕೆ ಮಾಡಿಕೊಳ್ಳಲಾಗಿದೆ. ನರೇಗಾ ಯೋಜನೆ ಬಳಕೆಗೆ ಕೃಷಿ ಹೊಂಡ ನಿರ್ಮಾಣಕ್ಕೆ ಅನುಮತಿ ಸ್ಥಗಿತ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಯಿಂದ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

    ಚರ್ಮಗಂಟು ಕಾಯಿಲೆಯಿಂದ ತಾಲೂಕಿನಲ್ಲಿ 105 ಜಾನುವಾರು ಮೃತಪಟ್ಟಿವೆ. ರೋಗ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ವಹಿಸುವುದರ ಜತೆಗೆ 65 ಸಾವಿರ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕಲಾಗಿದೆ. ಈ ಕಾಯಿಲೆಗೆ ಯಾವುದೇ ಔಷಧ ಬಂದಿಲ್ಲ. ಹೀಗಾಗಿ ತಜ್ಞರ ನೀಡಿರುವ ಸಲಹೆ ಅನುಸಾರ ಚಿಕಿತ್ಸಾ ಕ್ರಮ ವಹಿಸಲಾಗಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಉದಯ್ ಶಂಕರ್ ಮಾಹಿತಿ ನೀಡಿದರು.

    ‘ನಿಯಮ ಬಾಹಿರ ಅರಣ್ಯೀಕರ’ ಎಂಬ ಶಿರ್ಷಿಕೆಯಡಿ ವಿಜಯವಾಣಿ ಫೆ. 12ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಬಗ್ಗೆ ನಿಮ್ಮ ಸ್ಪಷ್ಟನೆ ಏನೆಂದು ಸಾಮಾಜಿಕ ಉಪ ವಲಯ ಅರಣ್ಯಾಧಿಕಾರಿ ಕನ್ನಿಕಾ ಅವರನ್ನು ಇಒ ರಾಮಲಿಂಗಯ್ಯ ಪ್ರಶ್ನಿಸಿದರು. ಇದಕ್ಕೆ ತಬ್ಬಿಬ್ಬಾದ ಅಧಿಕಾರಿ, ಪಿಡಬ್ಲುೃಡಿ ಇಲಾಖೆಯಿಂದ ರಸ್ತೆ ಬದಿಯಲ್ಲಿ ಗಿಡ ನೆಡುವ ಬಗ್ಗೆ ಅನುಮತಿ ಪಡೆದಿಲ್ಲ. ಅನುಮತಿ ಪಡೆಯಬೇಕೆಂಬ ಮಾಹಿತಿ ಇಲ್ಲವೆಂದರು. ಇವರ ಉತ್ತರದಿಂದ ಅಸಮಾಧಾನಗೊಂಡ ಆಡಳಿತಾಧಿಕಾರಿ ರಂಗೇಗೌಡ, ಪಿಡಬ್ಲುೃಡಿ ಇಲಾಖೆಯಿಂದ ಅನುಪತಿ ಪಡೆಯಬೇಕೆಂಬ ನಿಯಮವೇ ನಿಮಗೆ ತಿಳಿದಿಲ್ಲ ಎನ್ನುತ್ತೀರಲ್ಲ, ನಿಮ್ಮಂಥವರು ಬೇಜವಾಬ್ದಾರಿಯಿಂದ ಕೆಲಸ ಮಾಡುವುದರಿಂದ ಸರ್ಕಾರದ ಅನುದಾನ ವ್ಯರ್ಥವಾಗುತ್ತಿದೆ. ಪಿಡಬ್ಲುೃಡಿ ಅನುಮತಿ ಪಡೆದಿಲ್ಲವೆಂದು ನೀವೇ ಒಪ್ಪಿಕೊಳ್ಳುವ ಮೂಲಕ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಕಾಣುತ್ತಿದೆ ಎಂದು ಕಿಡಿಕಾರಿದರು.
    ಸೂಕ್ತ ಮಾಹಿತಿ ಕೇಳಿ ಇವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.
    ತಾಲೂಕು ಪಂಚಾಯಿತಿ ಯೋಜನಾಧಿಕಾರಿ ದೀಪು ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts