More

    ಸಾರ್ವಜನಿಕರ ಕರೆ ಆಧರಿಸಿ ನೆರವು

    ಹಳಿಯಾಳ: ಹೆಣ್ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ದಾಂಡೇಲಿ ಸಬ್ ಡಿವಿಜನ್ ಮಟ್ಟದಲ್ಲಿನ ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ತಾಲೂಕಗಳನ್ನೊಳಗೊಂಡು ಶರಾವತಿ ಓಬವ್ವ ಪಡೆ ಆರಂಭಿಸಲಾಗಿದೆ ಎಂದು ದಾಂಡೇಲಿ ಡಿವೈಎಸ್​ಪಿ ಪಿ. ಮೋಹನಪ್ರಸಾದ ಹೇಳಿದರು.

    ಶುಕ್ರವಾರ ಹಳಿಯಾಳದ ಸಿಪಿಐ ಕಚೇರಿಯಲ್ಲಿ ಶರಾವತಿ ಪಡೆಗೆ ಚಾಲನೆ ನೀಡಿದ ನಂತರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಶರಾವತಿ ಓಬವ್ವ ಪಡೆಯಲ್ಲಿ ಒಬ್ಬ ಮಹಿಳಾ ಪಿಎಸ್​ಐ ಹಾಗೂ ಹದಿನೈದು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಈ ಪಡೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ನೀಡಲಾಗಿದೆ. ಈ ಪಡೆಯು ಆಯಾ ಠಾಣೆಯಲ್ಲಿ ಬರುವ ದೂರುಗಳು ಹಾಗೂ ಸಾರ್ವಜನಿಕರ ಕರೆ ಆಧರಿಸಿ ನೆರವಿಗೆ ಧಾವಿಸಲಿದೆ.

    ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ರ್ಯಾಗಿಂಗ್ ಇತ್ಯಾದಿ ತಡೆಯುವ ಬಗ್ಗೆ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜಾಗ್ರತಿ ಮೂಡಿಸಲಿವೆ. ಆಯಾ ಕಾಲೇಜುಗಳ ಪ್ರಾಚಾರ್ಯರ ನೆರವಿನಿಂದ ಮಹಿಳಾ ಜಾಗ್ರತಿ ಕಾರ್ಯಾಗಾರಗಳನ್ನು ಆಯೋಜಿಸಲಿದೆ ಎಂದರು.

    ಹಳಿಯಾಳ ಸಿಪಿಐ ಬಿ.ಎಸ್.ಲೋಕಾಪುರ, ದಾಂಡೇಲಿ ಸಿಪಿಐ ಪ್ರಭು ನಿಂಗನಳ್ಳಿ, ಹಳಿಯಾಳ ಪಿಎಸ್​ಐ ಯಲ್ಲಾಲಿಂಗ ಕೊಣ್ಣೂರ, ಕ್ರೈಂ ಪಿಎಸ್​ಐ ರಾಜಕುಮಾರ, ಶರಾವತಿ ಓಬವ್ವ ಪಡೆಯ ಪಿಎಸ್ ಮಹಾದೇವಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts