More

    ಸಾರ್ವಜನಿಕರು ಅರಣ್ಯ ರಕ್ಷಣೆಗೆ ಮುಂದಾಗಿ

    ರಾಮದುರ್ಗ: ಜೀವ ಸಂಕುಲದ ಉಸಿರಾಟಕ್ಕೆ ಹಾಗೂ ಸಕಾಲಕ್ಕೆ ಮಳೆಯಾಗಲು ಅರಣ್ಯ ಪ್ರದೇಶದ ಬೆಳವಣಿಗೆಯಾಗಬೇಕು. ಅರಣ್ಯ ಪ್ರದೇಶಗಳ ರಕ್ಷಣೆಗೆ ಸಾರ್ವಜನಿಕರು ಇಲಾಖೆ ಜತೆ ಸಹಕಾರಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ತಾಲೂಕಿನ ತುರನೂರ ಗ್ರಾಮದಲ್ಲಿ 44 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 4 ನೂತನ ಕೊಠಡಿ, ನರೇಗಾ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ, 15 ಲಕ್ಷ ರೂ. ವೆಚ್ಚದಲ್ಲಿ ವಲಯ ಅರಣ್ಯ ಇಲಾಖೆಯ ಗಣಕಯಂತ್ರ ಹಾಗೂ ದಾಖಲಾತಿ ಸಂಗ್ರಹಣಾ ಕೊಠಡಿ, ಕಾಂಪಾ ಯೋಜನೆಯಡಿ 12.90 ಲಕ್ಷ ರೂ. ವೆಚ್ಚದಲ್ಲಿ ಕಿಲ್ಲಾ ತೊರಗಲ್ ನೂತನ ಸಸ್ಯಪಾಲನಾ ಕಾವಲುಗಾರರ ಕೊಠಡಿ, ಸಿಒಪಿ ಹಾಗೂ ನರೇಗಾ ಯೋಜನೆಯಡಿ ಕಿಲ್ಲಾ ತೊರಗಲ್‌ನಲ್ಲಿ ನಿರ್ಮಿಸಿದ ಸಸ್ಯ ಪಾಲನಾಲಯ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಯಡಿ ಅನುದಾನ ತರಲಾಗಿದೆ. ನೀರಾವರಿ, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅಭಿವದ್ಧಿ ಕೆಲಸಗಳಿಗೆ ಜನತೆಯ ಸಹಕಾರ ಮುಖ್ಯ ಎಂದರು. ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಬಿ.ಎಂ. ತುಪ್ಪದ, ಅರಣ್ಯ ಇಲಾಖೆಯ ಸಿಸಿಎ್ ಅಧಿಕಾರಿ ಮಂಜುನಾಥ ಚವ್ಹಾಣ, ಡಿಸಿಎ್ ಆಂತೋಣಿ ಮರಿಯಪ್ಪ, ಎಸಿಎ್ ರಾಜೇಶ್ವರಿ ಈರನಟ್ಟಿ, ವಲಯ ಅರಣ್ಯಾಧಿಕಾರಿ ಎಂ.ಬಿ.ಗಣಾಚಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts