More

    ಸಾರ್ವಜನಿಕರಿಗೆ ಸಕಲ ವ್ಯವಸ್ಥೆ

    ಬೆಳಗಾವಿ: ಎಂಟು ಕೋಟಿ ರೂ.ಅನುದಾನದಲ್ಲಿ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರ ಕಚೇರಿ ಮತ್ತು ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭೂಮಿಪೂಜೆ ನೆರವೇರಿಸಿದರು.
    ಸಾರಿಗೆ ಇಲಾಖೆ ಸರ್ಕಾರದ ಮಹತ್ವ ಇಲಾಖೆಯಾಗಿದ್ದು, ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡುತ್ತಿದೆ. ಸಾರ್ವಜನಿಕರು ದಿನನಿತ್ಯ ಇಲ್ಲಿಗೆ ಬರುತ್ತಾರೆ. ಹೀಗಾಗಿ ಇಲ್ಲಿ ಸುವ್ಯವಸ್ಥೆ ಮಾಡಬೇಕಿದೆ ಎಂದು ಕಾರಜೋಳ ಹೇಳಿದರು.

    ಸಾರಿಗೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ, ಶೌಚಗೃಹ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು. ಉತ್ತಮ ಗುಣಮಟ್ಟದೊಂದಿಗೆ ಸುಂದರ ಕಟ್ಟಡ ನಿರ್ಮಾಣ ಮಾಡಬೇಕು. ಕಟ್ಟಡ ನಿರ್ಮಾಣಕ್ಕೆ 12 ತಿಂಗಳ ಕಾಲಾವಧಿ ಇದ್ದು, 11 ತಿಂಗಳೊಳಗೆ ಪೂರ್ಣಗೊಳಿಸಬೇಕು. 2024ರ ಜ.26ಕ್ಕೆ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

    ಶಾಸಕ ಅನಿಲ ಬೆನಕೆ ಅಧ್ಯಕ್ಷತೆ ವಹಿಸಿದ್ದರು. ಸಂಸದೆ ಮಂಗಲ ಅಂಗಡಿ, ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಜಂಟಿ ಸಾರಿಗೆ ಆಯುಕ್ತ ಎಂ.ಶೋಭ, ಮುಖ್ಯ ಕಾಮಗಾರಿ ಅಭಿಯಂತ ಪ್ರಕಾಶ ಕಬಾಡಿ, ಗುತ್ತಿಗೆದಾರ ಉದಯ ಶೆಟ್ಟಿ, ವಾಹನ ನಿರೀಕ್ಷಕ ರವಿರಾಜ ಪವಾರ, ನೂರುಲ್ಲಾ ಎಚ್.ಎಸ್., ಜೆ.ಬಿ.ನರಸನ್ನವರ, ಆನಂದ ಗಾಮನಗಟ್ಟಿ, ಸಾರಿಗೆ ಅಧಿಕಾರಿಗಳಾದ ಸುಜಯ ಕುಲಕರ್ಣಿ, ಸುಮಿತಕುಮಾರ ಉಮರಾಣಿ ಇತರರು ಇದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಸ್ವಾಗತಿಸಿದರು. ಶೀಥಲ್ ಕುಲಕರ್ಣಿ ನಿರೂಪಿಸಿದರು. ಸಾರಿಗೆ ಅಧೀಕ್ಷಕ ಶರಣಪ್ಪ ಹುಗ್ಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts