More

    ಸಾರಿಗೆ ನಿಯಂತ್ರಕರ ಕಚೇರಿಗೆ ಬೀಗ

    ಯರಗಟ್ಟಿ, ಬೆಳಗಾವಿ
    ಒಂದು ತಿಂಗಳಿನಿಂದ ಶಾಲಾ-ಕಾಲೇಜ್‌ಗೆ ತೆರಳಲು ಸಮರ್ಪಕವಾಗಿ ಬಸ್ ಸೇವೆ ಒದಗಿಸದೆ ಇರುವುದನ್ನು ಖಂಡಿಸಿ ತಾಲೂಕಿನ ಕುರುಬಗಟ್ಟಿ, ಆಲದಕಟ್ಟಿ ಕೆ.ಎಂ. ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಯರಗಟ್ಟಿ ಸಾರಿಗೆ ನಿಯಂತ್ರಕ ಕಚೇರಿಗೆ ಬುಧವಾರ ಬೀಗ ಹಾಕಿ, ಬಸ್ ತಡೆದು ಪ್ರತಿಭಟಿಸಿದರು.

    ಕುರುಬಗಟ್ಟಿ, ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಿದ್ದರು. ಆದರೆ, 4 ಗಂಟೆ ಕಾಲ ಕಾಯ್ದರೂ ಬಸ್ ಬಾರದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದು ಯರಗಟ್ಟಿಗೆ ಆಗಮಿಸಿ ಪ್ರತಿಭಟಿಸಿದರು. ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಬರುತ್ತಿಲ್ಲ. ಮಳೆ, ಗಾಳಿ ಎನ್ನದೇ ದಿನನಿತ್ಯ 9 ಕಿ.ಮೀ. ನಡೆದುಕೊಂಡೇ ಹೋಗಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ವಾರದ ಒಂದು ದಿನ ಮಾತ್ರ ನಮಗೆ ಸರಿಯಾದ ಸಮಯಕ್ಕೆ ಬಸ್ ಸಿಗುತ್ತದೆ. ಬುಧವಾರ ಪರೀಕ್ಷೆ ಇದ್ದು ಬೇಗ ಹೊರಡಬೇಕಿತ್ತು. ಆದರೆ, ಮಧ್ಯಾಹ್ನ 12 ಗಂಟೆಯಾದರೂ ಬಸ್ ಬಾರದ ಹಿನ್ನೆಲೆಯಲ್ಲಿ ಪ್ರತಿಭಟನೆಗಿಳಿದಿದ್ದೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಬಸ್ ಅವ್ಯವಸ್ಥೆಯಿಂದ ತರಗತಿಯ ಪಾಠದಿಂದ ವಂಚಿತರಾಗುವ ಜತೆಗೆ ಹಾಜರಾತಿ ಸಮಸ್ಯೆ ಎದುರಿಸುತ್ತಿದ್ದೇವೆ.

    ಈ ಪರಿಸ್ಥಿತಿ ಕುರಿತು ಬಸ್ ಡಿಪೋಗ ಕರೆ ಮಾಡಿದಾಗಲೆಲ್ಲ ಬಸ್ ಕೆಟ್ಟಿದೆ, ಪಂಕ್ಚರ್ ಆಗಿದೆ, ಚಾಲಕರು ಬಂದಿಲ್ಲ ಎಂದು ಕುಂಟು ನೆಪ ಹೇಳುತ್ತಾರೆ ಎಂದು ಆರೋಪಿಸಿದರು. ರೈತ ಸಂಘ, ಕರವೇ, ದಲಿತ ಸಂಘಟನೆಗಳ ಮುಖಂಡರು, ಸಾರಿಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಡವರ, ರೈತರ, ಕೂಲಿ ಕಾರ್ಮಿಕ ಮಕ್ಕಳು ಎಂದರೆ ಅಧಿಕಾರಿಗಳಿಗೆ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಮಕ್ಕಳು 5 ಗಂಟೆಗೆ ಮನೆಗೆ ಬರಬೇಕು. ಆದರೆ, 7 ಗಂಟೆಗೆ ಮನೆಗೆ ಬರುತ್ತಿದ್ದಾರೆ ಎಂದು ದೂರಿದರು.

    ಪಿಎಸ್‌ಐ ಬಸನಗೌಡ ನೇರ್ಲಿ, ಲಕ್ಷ್ಮೀ ಬಿರಾದಾರ ಹಾಗೂ ಎಂ.ಬಿ.ಸಣ್ಣನಾಯ್ಕರ, ಎಸ್.ಬಿ.ದೊಡ್ಡವಾಡ ಅವರು ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಗಳ ಹಾಗೂ ವಿವಿಧ ಪರ ಸಂಘಟನೆಗಳ ಮಖಂಡರ ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು. ಮಲ್ಲವ್ವ ಗಿಡಗೌಡ್ರ, ಶಿಲ್ಪಾ ಉಳ್ಳೇಗಡ್ಡಿ, ಸವಿತಾ ನಾವಿ, ಮೇಘಾ ಗಿಡಗೌಡ್ರ, ವೈಶಾಲಿ ಪಾಟೀಲ, ಶಂಕರ ಸಕ್ರಿ, ಶಿವಾನಂದ ಸಕ್ರಿ, ಕಿರಣ ಮಾದರ, ಬಸವರಾಜ ಗಿಡಗೌಡ್ರ, ಹಣಮಂತ ಸೊಪ್ಪಡ್ಲ ಹಾಗೂ ವಿವಿಧ ಪರ ಸಂಘಟನೆಗಳ ಮುಖಂಡರಾದ ಸುರೇಶ ಮುರಗೋಡ, ಸೋಮು ರೈನಾಪೂರ, ಯಕ್ಕೆರಪ್ಪ ಮಾದರ, ಪ್ರಕಾಶ ನಾವಿ, ಬಾಬು ಚನ್ನಮೇತ್ರಿ, ಗಂಗಾಧರ ಬಡಿಗೇರಿ, ಫಕ್ಕೀರಪ್ಪ ಸಣ್ಣಗೌಡ್ರ, ಕೃಷ್ಣಾ ಸತ್ಯನಾಯ್ಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts