More

    ಸಾಮೂಹಿಕ ವಿವಾಹದಲ್ಲಿ ಆಯನೂರು ಪುತ್ರಿ ಮದುವೆ

    ಶಿವಮೊಗ್ಗ: ಆಯನೂರು ಧರ್ಮಶ್ರೀ ಟ್ರಸ್ಟ್​ನಿಂದ ನಗರ ಹೊರವಲಯದ ಪೆಸಿಟ್ ಕಾಲೇಜಿನ ಪ್ರೇರಣಾ ಹಾಲ್​ನಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ಎಂಎಲ್​ಸಿ ಆಯನೂರು ಮಂಜುನಾಥ್-ಮಂಜುಳಾ ದಂಪತಿ ಪುತ್ರಿ ಸೇರಿ 51 ಜೋಡಿಗಳು ಗುರುವಾರ ನವದಾಂಪತ್ಯಕ್ಕೆ ಕಾಲಿಟ್ಟವು.

    ಆಯನೂರು ಮಂಜುನಾಥ್ ಪುತ್ರಿ ಶಮಾತ್ಮಿಕಾ ಹಾಗೂ ಮಹೇಂದ್ರ ಅವರ ವಿವಾಹದ ನಿಮಿತ್ತ ಸಾಮೂಹಿಕ ವಿವಾಹ ಏರ್ಪಡಿಸಿದ್ದು ಉಳಿದ 50 ಜೋಡಿ ವಧು-ವರರು, ಅವರ ತಂದೆ ತಾಯಿಗಳಿಗೆ ಬಟ್ಟೆ, ವಧುವಿಗೆ ತಾಳಿ, ಕಾಲುಂಗುರ ನೀಡಲಾಯಿತು. ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಮಂತ್ರಾಕ್ಷತೆ ಬೋಧಿಸಿದರು.

    ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಸೇರಿ ಹಲವು ಮಠಾಧೀಶರು ನವದಂಪತಿಗೆ ಆಶೀರ್ವದಿಸಿದರು. ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಎಸ್.ಸುರೇಶ್​ಕುಮಾರ್, ಸಿ.ಟಿ.ರವಿ, ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಅಶೋಕ ನಾಯ್್ಕ ಎಂಎಲ್​ಸಿ ದೇವೇಗೌಡ, ಮುಖಂಡರಾದ ಕಿಮ್ಮನೆ ರತ್ನಾಕರ್, ಸೂಗೂರು ಶಿವಣ್ಣ, ಗಣೇಶ್ ಕಾರ್ಣಿಕ್, ಎ.ನಾರಾಯಣಸ್ವಾಮಿ, ಬೆಳ್ಳಿ ಪ್ರಕಾಶ್ ಸೇರಿ ಹಲವರು ಬುಧವಾರ ರಾತ್ರಿ ಆರತಕ್ಷತೆಯಲ್ಲಿ ಪಾಲ್ಗೊಂಡು ವಧು-ವರರಿಗೆ ಆಶೀರ್ವದಿಸಿದರು.

    ದಾವಣಗೆರೆ, ತುಮಕೂರು, ಕುಂದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಿಂದ ವಧುವರರ ಪರವಾಗಿ 10 ಸಾವಿರ ಜನ ಸೇರಿದ್ದರು. ಗುರುವಾರ ಬೆಳಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ, ಎಂಎಲ್​ಸಿಗಳಾದ ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಶಾಸಕರಾದ ಎಂ.ಜೆ.ಅಪ್ಪಾಜಿಗೌಡ, ಕೆ.ಬಿ.ಪ್ರಸನ್ನಕುಮಾರ್, ರೈತ ಸಂಘದ ಮುಖಂಡ ಎಚ್.ಆರ್.ಬಸವರಾಜಪ್ಪ ನವದಂಪತಿಗೆ ಶುಭ ಹಾರೈಸಿದರು.

    30ಕ್ಕೂ ಅಧಿಕ ಜೋಡಿ ಪರಿಶಿಷ್ಟ ಪಂಗಡದವರಿದ್ದು ಅದರಲ್ಲಿ 6 ಅಂತರ್ಜಾತಿ ವಿವಾಹ ನೆರವೇರಿತು. ಒಬ್ಬ ವಿಧವೆ ಮತ್ತು ಮತ್ತೊಬ್ಬ ಅಂಧೆಗೂ ಕಂಕಣ ಭಾಗ್ಯ ಕೂಡಿಬಂತು. ಉಳಿದಂತೆ ಕುರುಬ, ದೇವಾಂಗ, ಮಡಿವಾಳ, ವೀರಶೈವ, ಮರಾಠ, ಭೋವಿ, ಬಂಜಾರ ಸಮುದಾಯದ ವಧು-ವರರು ಸಾಮೂಹಿಕ ವಿವಾಹದ ಕೇಂದ್ರ ಬಿಂದುಗಳಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts