More

    ಸಾಮಾಜಿಕ ಕಾರ್ಯಗಳಿಂದ ನೆಮ್ಮದಿ ಸಾಧ್ಯ

    ಹುಬ್ಬಳ್ಳಿ: ಮನುಷ್ಯ ತನ್ನ ಜೀವನದ ಹೋರಾಟದಲ್ಲಿ ನೆಮ್ಮದಿ ಕಾಣುವಲ್ಲಿ ವಿಫಲನಾಗುತ್ತಿದ್ದಾನೆ. ಧಾರ್ವಿುಕ, ಸಾಮಾಜಿಕ ಸೇವೆ, ನಾಡು-ನುಡಿಗಾಗಿ ಕೈ ಜೋಡಿಸಿದಾಗ ನೆಮ್ಮದಿ ಸಿಗಲು ಸಾಧ್ಯ ಎಂದು ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಹೇಳಿದರು.

    ನಗರದ ಮೂರುಸಾವಿರಮಠದ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸ್ವಯಂ ಸೇವಕರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವಕರು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು. ಸಸಸ

    ಅತಿಥಿಯಾಗಿದ್ದ ವೈದ್ಯ ಡಾ. ರಮೇಶಬಾಬು ಹಾಗೂ ಡಾ. ವಿ.ಬಿ. ನಿಟಾಲಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು. ಫೌಂಡೇಷನ್​ನ ಅಮರೇಶ ಹಿಪ್ಪರಗಿ ಹಾಗೂ ಇತರರಿದ್ದರು. ಚನ್ನಬಸಪ್ಪ ಧಾರವಾಡಶೆಟ್ಟರ ಸ್ವಾಗತಿಸಿದರು. ಶಿಲ್ಪಾ ನ್ಯಾಮತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts