More

    ಸಾಮಾಜಿಕ ಕಾಯಿಲೆ ನಿವಾರಣೆಗೆ ಶ್ರಮಿಸಿ


    ಯಾದಗಿರಿ: ವಕೀಲರ ಸಮುದಾಯ ಉತ್ಕೃಷ್ಟವಾಗಿದ್ದು, ದೇಶ, ರಾಷ್ಟ್ರ ಕಟ್ಟಲು ತನು, ಮನ, ಧನ ತ್ಯಾಗ ಮಾಡಿದ ಸಮುದಾಯ ಇದು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅಭಿಪ್ರಾಯಪಟ್ಟರು.

    ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಬಾರ್ ಅಸೋಸಿಯೇಷನ್‌ನಿಂದ ಹಮ್ಮಿಕೊಳ್ಳಲಾಗಿದ್ದ, ಸಾರ್ವಜನಿಕ ಮತ್ತು ಉತ್ತಮ ಆಡಳಿತ ದಲ್ಲಿ ನ್ಯಾಯವಾದಿಗಳ ಪಾತ್ರ ವಿಷಯದ ಬಗ್ಗೆ ವಿಶೇಷ ಸಮಾಲೋಚನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಮಹಾತ್ಮ ಗಾಂಧೀಜಿ, ಜವಾಹರಲಾಲï ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲï, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬï ಅಂಬೇಡ್ಕರ್ ಸಹ ವಕೀಲರಾಗಿ, ರಾಜಕೀಯ ಮುತ್ಸದ್ಧಿಗಳಾಗಿ, ಹೋರಾಟಗಾರ ನಾಯಕರಾಗಿ ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟಿದ್ದಾರೆ ‌ ಅದರಂತೆ ಶ್ರೇಷ್ಠ ಸಂವಿಧಾನ ರಚಿಸಿ ಜನರಿಗೆ ಅಡಿಪಾಯ ಹಾಕಿಕೊಟ್ಟಿದ್ದು, ಅಂಥ ಸಮುದಾಯಕ್ಕೆ ಸೇರಿದ ನೀವುಗಳು ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಸಲಹೆ ನೀಡಿದರು.

    ವಕೀಲರು ದುರ್ಬಲರ ಮತ್ತು ಜನರ ಒಳ್ಳೆಯ ಜೀವನಕ್ಕೆ ವಿವಿಧ ಕಾನೂನು ನಿಯಮಾವಳಿಗಳ ಅನ್ವಯ ಸಿಗುವ ಸವಲತ್ತುಗಳು ಸರಿಯಾಗಿ ದೊರಕಿಸಲು ಪ್ರಯತ್ನಿಸಬೇಕು. ಒಳ್ಳೆಯ ಆಡಳಿತ ನಿರ್ವಹಣೆಯಲ್ಲಿ ಲೋಪ ಕಂಡು ಬಂದಾಗ ತಿದ್ದುವ ಕಾರ್ಯವನ್ನು ಮಾಡಬೇಕು. ಅದೇ ರೀತಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯು ಲೋಕಾಯುಕ್ತ ಸಂಸ್ಥೆಯೊAದಿಗೆ ಸಮನ್ವಯ ಸಾಧಿಸಿ ಉತ್ತಮ ಆಡಳಿತ ವೈವಸ್ಥೆಗೆ ಕೊಡುಗೆ ನೀಡಲು ಸಹ ಸಾಧ್ಯವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts