More

    ಸಾಧನೆಗೆ ಪ್ರೋತ್ಸಾಹ ಸಹಕಾರಿ

    ಗೋಕಾಕ: ಪ್ರತಿಯೊಬ್ಬರಲ್ಲಿ ಒಂದೊಳ್ಳೆ ಅದ್ಬುತ ಕಲೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ಉತ್ತಮ ಸಾಧಕರಾಗಲು ಸಾಧ್ಯ ಎಂದು ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.

    ನಗರದ ಕೆಎಲ್‌ಇ ಶಾಲೆಯ ಆವರಣದಲ್ಲಿ ಪ್ರತೀಕ್ಷಾ ಪ್ರಕಾಶ ಹಾಗೂ ಕೆಎಲ್‌ಇ ಸಂಸ್ಕೃತಿ ಸಂಸ್ಥೆ ಗೋಕಾಕ ಅವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ಪ್ರತಿಕ್ಷಾ ಕೊಕ್ಕರಿ ರಚಿಸಿದ ವಿರಚಿತ ‘ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ’ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರನ್ನು ಪ್ರೋತ್ಸಾಹಿಸಬೇಕು. ಸದ್ಯ ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಿದ್ದು ಅವುಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.

    ಪ್ರೊಜಿ.ವಿ.ಮಳಗಿ ಮಾತನಾಡಿ, ಪ್ರತೀಕ್ಷಾ ಯುವ ಪೀಳಿಗೆಗೆ ಮಾದರಿಯಾದ್ದಾರೆ ಎಂದು ಹೇಳಿದರು. ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಜಿ.ಬಿ. ಬಳಗಾರ, ಮಹಾಂತೇಶ ತಾವಂಶಿ, ಸುಸ್ಮಿತಾ ಭಟ್, ರಾಜೇಶ್ವರಿ ಒಡೆಯರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts