More

    ಸಾಧನೆಗೆ ಧೈರ್ಯವೇ ಪ್ರೇರಣೆ

    ಗದಗ: ಮಹಿಳೆಯರು ಧೈರ್ಯ ಮತ್ತು ಗುರಿ ಇದ್ದರೆ ಮಾತ್ರ ಉದ್ಯಮವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಈ ಹಿಂದೆ ಮಹಿಳೆಯರು ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆದರೆ, ಈಗ ಸಾಕಷ್ಟು ಬದಲಾವಣೆಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಪುರುಷರಷ್ಟೇ ಸಾಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬೆಂಗಳೂರು ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ರೂಪಾರಾಣಿ ಹೇಳಿದರು.

    ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಿಳಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಹಲವಾರು ಮಹಿಳೆಯರು ಸಣ್ಣ ಪ್ರಮಾಣದ ಬಂಡವಾಳದಿಂದ ಉದ್ಯಮ ಆರಂಭಿಸಿ ಇಂದು ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಸರ್ಕಾರವು ಮಹಿಳೆಯರಿಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು, ಹೀಗಾಗಿ ಮಹಿಳೆಯರು ಉದ್ಯಮಗಳನ್ನು ಆರಂಭಿಸಲು ಮುಂದೆ ಬರಬೇಕಾಗಿದೆ ಎಂದರು.

    ಸರ್ಕಾರ ತರಬೇತಿ ಮತ್ತು ಕಾರ್ಯಾಗಾರದ ಮೂಲಕ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ. ಮಹಿಳೆಯರಿಗೆ ಕನಿಷ್ಠ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಅದನ್ನು ಆಸಕ್ತ ಮಹಿಳೆಯರು ಸದುಪಯೋಗ ಪಡಿಸಿಕೊಂಡು ಉದ್ಯಮ ಸ್ಥಾಪಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆನಂದ ಪೋತ್ನಿಸ್ ಮಾತನಾಡಿ, ರಾಜ್ಯದಲ್ಲಿ ಪ್ರಪ್ರಥಮವಾಗಿ ಮಹಿಳಾ ಘಟಕವನ್ನು ಗದಗದಲ್ಲಿ ಆರಂಭಿಸಲಾಗಿದೆ. ಉದ್ಯಮದಲ್ಲಿ ಆಗುತ್ತಿರುವಂತಹ ಸಮಸ್ಯೆಗಳನ್ನು ಮುಕ್ತವಾಗಿ ರ್ಚಚಿಸಿ ಪರಿಹಾರ ಕಂಡುಕೊಳ್ಳಲು ಮಹಿಳೆಯರಿಗೆ ಈ ಘಟಕ ಅನುಕೂಲವಾಗುತ್ತದೆ ಎಂದರು.

    ಮಹಿಳೆಯರು ಸ್ವಯಂ ಉದ್ಯೋಗದ ಕಡೆಗೆ ಹೆಚ್ಚು ಗಮನ ನೀಡುವುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದು ಎಂದು ಹೇಳಿದರು. ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜಯಶ್ರೀ ಉಮೇಶ ಹುಬ್ಬಳ್ಳಿ, ಉಪಾಧ್ಯಕ್ಷೆಯಾಗಿ ಪಾರ್ವತಿ ಬಾಬಣ್ಣ ಶಾಬಾದಿಮಠ, ಮಂಗಳಾ ಶಂಕ್ರಣ್ಣ ಯಳಮಲಿ, ಶೋಭಾ ಸಿದ್ದರಾಮಯ್ಯ ಸಂಶಿಮಠ, ಗೌರವ ಕಾರ್ಯದರ್ಶಿಯಾಗಿ ವೀಣಾ ಆನಂದ ಪೋತ್ನಿಸ್, ಸಹ ಗೌರವ ಕಾರ್ಯದರ್ಶಿಗಳಾಗಿ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ, ಸುವರ್ಣಾ ಸದಾಶಿವಯ್ಯ ಮದರಿಮಠ, ಕೋಶಾಧ್ಯಕ್ಷರಾಗಿ ಅಪರ್ಣಾ ಲಿಂಗರಾಜ ತೋಟದ ಅಧಿಕಾರ ವಹಿಸಿಕೊಂಡರು. ಶಿವಲೀಲಾ ಹಿರೇಮಠ, ಭಾರತಿ ಕೋಟಿ, ವೀರೇಶ ಕೂಗು, ಸುವರ್ಣಾ ಮದರಿಮಠ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts