More

    ಸಹಕಾರ ಆಸ್ಪತ್ರೆಗೆ ರೂ.18 ಲಕ್ಷ ಲಾಭ

    ಬೀದರ್: ಇಲ್ಲಿನ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯು 2021-22ನೇ ಸಾಲಿನಲ್ಲಿ 18.38 ಲಕ್ಷ ರೂ.ಲಾಭ ಗಳಿಸಿದೆ ಎಂದು ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

    ನಗರದಲ್ಲಿ ಆಸ್ಪತ್ರೆಯ 9ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಈ ಭಾಗರ ಜನರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆ ಕೆಲಸ ಮಾಡುತ್ತಿದೆ. ಆಯುಷ್ಮಾನ್ ಭಾರತ, ಸ್ಟಾರ್ ಹೆಲ್ತ್ ವಿಮೆ ಇತರ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದಿಂದ ಕಳೆದ ಮಾರ್ಚ್ ಅಂತ್ಯದವರೆಗೆ 15025 ಎಂಆರ್‌ಐ, 11465 ಸಿಟಿ ಸ್ಕ್ಯಾನ್, 64134 ಒಪಿಡಿ, 10940 ಐಪಿಡಿ, 3701 ಸರ್ಜರಿ ಸೇರಿ ನಾನಾ ತರಹದ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆ ಸಂಸ್ಥಾಪಕ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಆಶಯದಂತೆ ಆರೋಗ್ಯ ಸೇವೆ ಒದಗಿಸುವ ಕಾರ್ಯ ಮುಂದುವರೆಸಲಾಗಿದೆ ಎಂದು ಹೇಳಿದರು.

    ಕೋವಿಡ್ ವೇಳೆ ಕೋವಿಡ್ ಕೇರ್ ಸೆಂಟರ್ ಆರಂಭಿಸಿ, ಒಂದೇ ರೂಪಾಯಿಯಲ್ಲಿ ಊಟ, ತಿಂಡಿ, ಚಿಕಿತ್ಸೆ, ಔಷಧ ನೀಡಲಾಗಿದೆ. ಆಸ್ಪತ್ರೆ ಎಲ್ಲ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ವಿಶೇಷವಾಗಿ ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುವ ಎನ್ಐಸಿಯು ಘಟಕ ಹೊಂದಿದೆ. ಕಡಿಮೆ ತೂಕದ ಶಿಶುಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

    ಲಾಲಬಾಗ್ ಸಮೀಪ 70.18 ಎಕರೆ  ಜಮೀನು ಖರೀದಿಸಿದ್ದು, ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಎಸ್ಸಿ ನರ್ಸಿಂಗ್, ಡಿ-ಫಾರ್ಮ, ಬಿ-ಫಾರ್ಮ, ಬಿಎಎಂಎಸ್, ಬಿಎಚ್ಎಂಎಸ್ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ. ಆಡಳಿತ ಮಂಡಳಿ ನಿರ್ಣಯದಂತೆ 1.05 ಎಕರೆ ಜಮೀನು ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳು ಶಂಕರಪುರ ಬಸವನಗುಡಿ ಬೆಂಗಳೂರು ಅವರಿಗೆ ದಾನವಾಗಿ ನೀಡಲಾಗಿದೆ ಎಂದು ಹೇಳಿದರು.

    ಆಡಳಿತ ಮಂಡಳಿಗೆ ಪುನರಾಯ್ಕೆ: ಸೂರ್ಯಕಾಂತ ನಾಗಮಾರಪಳ್ಳಿ ಮುಂದಿನ ಐದು ವರ್ಷ ಅವಗೆ ಆಸ್ಪತ್ರೆ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ನಿರ್ದೇಶಕರಾದ ಡಿ.ಕೆ. ಸಿದ್ರಾಮ, ಡಾ. ರಜನೀಶ್ ವಾಲಿ, ಸಂತೋಷ ತಾಳಂಪಳ್ಳಿ, ನಿಜಪ್ಪ ಪತ್ರಿ, ವಿಜಯಕುಮಾರ ಪಾಟೀಲ್ ಗಾದಗಿ, ರಾಮದಾಸ ತುಳಸಿರಾಮ,ರಾಮರಾವ ವರವಟ್ಟಿ, ಆಕಾಶ ನಾಗಮಾರಪಳ್ಳಿ, ತರುಣ್ ನಾಗಮಾರಪಳ್ಳಿ,ಉದಯ ಹಲವಾಯಿ, ಅಶೋಕ ರೇಜಂತಲ್, ವಿಜಯಲಕ್ಷ್ಮೀ, ಸಿಇಒ ಕೃಷ್ಣಾರಡ್ಡಿ, ಆಡಳಿತಾಕಾರಿ ಡಾ. ದೀಪಕ ಚೋಕ್ಡಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts