More

    ಸಹಕಾರಿ ಸಂಸ್ಥೆಗಳ ಪಾತ್ರ ಅತ್ಯಮೂಲ್ಯ

    ಚನ್ನಮ್ಮನ ಕಿತ್ತೂರು, ಬೆಳಗಾವಿ: ಸಮಾಜದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಅತ್ಯಮೂಲ್ಯವಾಗಿದ್ದು, ಜನರ ಅಭ್ಯುದಯಕ್ಕಾಗಿ ಜನೋಪಯೋಗಿ ಸೇವೆಗಳ ಮೂಲಕ ನಮ್ಮ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಂಕಲಿಯ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಚನ್ನಮ್ಮನ ಕಿತ್ತೂರಿನ ಶಾಖಾಧ್ಯಕ್ಷ ರವೀಂದ್ರ ಇನಾಮದಾರ ಹೇಳಿದರು.

    ಪಟ್ಟಣದ ಚನ್ನಮ್ಮ ವೃತ್ತದ ಬಳಿ ಇರುವ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಶಾಖಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವಾರ್ಷಿಕೋತ್ಸವ ಹಾಗೂ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನೆರವೇರಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಮಾರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಗ್ರಾಹಕರಿಗೆ ಈ ಸಹಕಾರಿಯು ವಿದಾಯಕ ಯೋಜನೆಯ ಸೇವೆಗಳ ಮೂಲಕ ಉತ್ತಮವಾಗಿ ಸ್ಪಂದಿಸಿ ಜನರ ಏಳ್ಗೆಗೆ ಶ್ರಮಿಸುತ್ತಿದೆ ಎಂದರು.
    ಶಾಖಾ ವ್ಯವಸ್ಥಾಪಕ ನಿತಿನ ವಾರಿಮನಿ ಮಾತನಾಡಿ, ಶಾಖೆ ಅಡಿಯಲ್ಲಿ ಪ್ರಥಮ ವರ್ಷದಲ್ಲೇ 3 ಕೋಟಿ 65 ಲಕ್ಷ ರೂ. ಠೇವಣಿ ಸಂಗ್ರಹಿಸಿ, 1 ಕೋಟಿ 3 ಲಕ್ಷ ರೂ. ಸಾಲ ವಿತರಣೆ ಮಾಡಿ, 2.52 ಲಕ್ಷ ರೂ. ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

    ಶಾಖಾ ಉಪಾಧ್ಯಕ್ಷ ಡಾ.ಬಸವರಾಜ ಪರವಣ್ಣವರ, ನಿರ್ದೇಶಕರಾದ ಉಳವಪ್ಪ ಉಳ್ಳೇಗಡ್ಡಿ, ಬಸವರಾಜ ಪಾಟೀಲ, ಮೋದಿನಸಾಬ್ ಹವಾಲ್ದಾರ, ಸಂದೀಪ ದೇಶಪಾಂಡೆ, ಕಿರಣ ಪಾಟೀಲ, ಸಂದೀಪ ಕಲಘಟಗಿ, ಕಿರಣ ವಾಳದ, ಕಚೇರಿ ಸಹಾಯಕ ವಿಜಯ ಅವರನಾಳೆ, ಮುಕ್ಕಣ್ಣ ಲಿಂಗಮೇತ್ರಿ, ಫಕ್ಕೀರಪ್ಪ ಹಂಚಿನಮನಿ, ಪ್ರವೀಣ ಗೊದಳಿ, ವೇ.ಮೂ. ವೀರಯ್ಯ ಬೆಟಗೇರಿಮಠ, ಗ್ರಾಹಕರಾದ ಉಳವಪ್ಪ ಅವರಾದಿ, ಶೀತಲ ಶಿರಗಾಪುರ, ಮಹಾಂತೇಶ ನಾಗಲಾಪುರ, ವೀರಯ್ಯ ಲದ್ದಿಮಠ, ಅಶೋಕ ಬಾಗೇವಾಡಿ, ಬಸವಣೆಪ್ಪ ನಂದಗಡ, ಚಿನ್ನಪ್ಪ ಇಂಗಳಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts