More

    ಸಹಕಾರಿ ಸಂಘದಲ್ಲೇ ಬೀಜ ವಿತರಿಸಿ

    ಸಿದ್ದಾಪುರ: ಕರೊನಾ ಲಾಕ್​ಡೌನ್​ನಿಂದಾಗಿ ರೈತರು ಪಟ್ಟಣಕ್ಕೆ ಬಂದು ಹೋಗುವುದು ತೊಂದರೆಯಾಗುತ್ತಿದ್ದು, ಕೃಷಿ ಇಲಾಖೆಯು ರೈತರಿಗೆ ಬೇಕಾಗುವ ಭತ್ತದ ಬೀಜ ಹಾಗೂ ರಸಗೊಬ್ಬರಗಳನ್ನು ಸ್ಥಳೀಯ ಸೇವಾ ಸಹಕಾರಿ ಸಂಘದಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡಬೇಕು ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಒತ್ತಾಯಿಸಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್, ‘ಹೋಬಳಿ ಕಚೇರಿಯಲ್ಲಿ ದಾಸ್ತಾನು ಮಾಡಬಹುದು ಆದರೆ, ಎಲ್ಲ ಸೇವಾ ಸಹಕಾರಿ ಸಂಘಗಳಲ್ಲಿ ಇಡುವುದು ಕಷ್ಟ ಎಂದರು. ಆಗ ಮಧ್ಯಪ್ರವೇಶಿಸಿದ ತಾಪಂ ಅಧ್ಯಕ್ಷ ಸುಧೀರ ಬಿ.ಗೌಡರ್, ‘ರೈತರ ಬೇಡಿಕೆ ಪಡೆದು ಸೇವಾ ಸಹಕಾರಿ ಸಂಘದಲ್ಲಿ ದಾಸ್ತಾನು ಮಾಡಿ’ ಎಂದು ಸೂಚಿಸಿದರು.

    ವಾಡಿಕೆ ಮಳೆ ಕಡಿಮೆ: ತಾಲೂಕಿನಲ್ಲಿ 1329 ಮಿ.ಮೀ. ವಾಡಿಕೆ ಮಳೆ ಆಗಬೇಕಾಗಿತ್ತು. ಆದರೆ, ಇಂದಿನವರೆಗೆ 1080 ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ.11ರಷ್ಟು ಮಳೆ ಕಡಿಮೆಯಾಗಿದೆ. ಈಗಾಗಲೇ 1010 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯಮುಗಿದಿದೆ ಎಂದು ಪ್ರಶಾಂತ ಜಿ.ಎಸ್. ಹೇಳಿದರು.

    ಕರೊನಾತಂಕ ಬೇಡ: ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಮಂಜುಳಾ ಎಸ್.ಭಜಂತ್ರಿ, ‘ಕರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸುತ್ತಿದ್ದಾರೆ. ತಾಲೂಕಿನಲ್ಲಿ 50 ಬೆಡ್​ಗಳನ್ನು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉತ್ತಮ ವೈದ್ಯಕೀಯ ಸೇವೆ ಸಲ್ಲಿಸಲು ತಾಲೂಕು ಅಡಳಿತ ವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಡ್ ಬೇಕಾಗುವ ಸಾಧ್ಯತೆ ಇದೆ. ಯಾರೂ ಆತಂಕ ಪಡಬೇಕಾಗಿಲ್ಲ. ಹೊರಜಿಲ್ಲೆಯಿಂದ ಬಂದವರ ಕುರಿತು ಸಮರ್ಪಕ ಮಾಹಿತಿ ನೀಡಿ ಎಂದು ಹೇಳಿದರು. ಕರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಅಧ್ಯಕ್ಷ ಸುಧೀರ ಬಿ. ಗೌಡರ್ ಹೇಳಿದರು.

    ತೋಟಗಾರಿಕೆ ಅಧಿಕಾರಿ ಅರುಣ ಎಚ್.ಜಿ., ಬಿಇಒ ಸದಾನಂದ ಸ್ವಾಮಿ ಇಲಾಖೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ದಾಕ್ಷಾಯಣಿ ಗೌಡ, ಸದಸ್ಯರಾದ ವಿವೇಕ ಭಟ್ಟ, ರಘುಪತಿ ಹೆಗಡೆ, ನಾಸೀರ್ ಖಾನ್, ಗಿರಿಜಾ ಗೌಡ, ಪದ್ಮಾವತಿ ಮಡಿವಾಳ, ಕುಸುಮಾ ಚನ್ನಯ್ಯ, ತಾಪಂ ಇಒ ಪ್ರಶಾಂತರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts