More

    ಸಹಕಾರದಿಂದ ಕೋವಿಡ್ ಸೋಂಕು ನಿಯಂತ್ರಣ

    ಹುಕ್ಕೇರಿ: ವಕೀಲರು, ಖಾಸಗಿ ಆರ್ಥಿಕ ಸಂಸ್ಥೆಗಳು ಹಾಗೂ ಪಿಕೆಪಿಎಸ್ ಸೇರಿದಂತೆ ಜನ ಸಂಪರ್ಕಕ್ಕೆ ಬರುವವರಿಗೆ ಕರೊನಾ ಲಸಿಕೆ ವಿತರಣೆಯಲ್ಲಿ ಮೊದಲ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಕ್ರವಾರ ಬೆಳಗಾವಿಯಲ್ಲಿ ಒತ್ತಾಯಿಸಲಾಗುವುದು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.


    ಪಟ್ಟಣದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

    ಸಚಿವ ಉಮೇಶ ಕತ್ತಿ ವಿಶೇಷ ಮುತುವರ್ಜಿಯಿಂದ ಹುಕ್ಕೇರಿ ತಾಲೂಕಿನಲ್ಲಿ ಕರೊನಾ ಸೋಂಕಿನ ಪ್ರಮಾಣ ನಿಯಂತ್ರಣದಲ್ಲಿದೆ. ಜನರು ಮಾರ್ಗಸೂಚಿ ಪಾಲಿಸುತ್ತಿದ್ದಾರೆ. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಹುಕ್ಕೇರಿ ತಾಲೂಕಾಡಳಿತ ಕೈಗೊಂಡ ಕ್ರಮ ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.

    ಮುಖಂಡ ಪರಗೌಡ ಪಾಟೀಲ, ತಾಪಂ ಇಒ ಬಿ.ಕೆ.ಲಾಳಿ, ಸಿಪಿಐ ರಮೇಶ ಛಾಯಾಗೋಳ, ಟಿಎಚ್‌ಒ ಉದಯ ಕುಡಚಿ, ಸಿಡಿಪಿಒ ಮಂಜುನಾಥ ಪರಸಣ್ಣವರ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಜಗದೀಶ ಈಟಿ, ಕಂದಾಯ ಇಲಾಖೆ ಅಧಿಕಾರಿ ಪ್ರವೀಣ ಮಾಳಾಜ, ಶ್ರೀಶೈಲ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts