More

    ಸಸ್ಯ ಸಂಪತ್ತು ಉಳಿದರೆ ಜೀವನ ಉತ್ತಮ

    ಕೋಲಾರ: ಸಸ್ಯ ಸಂಪತ್ತು ಉಳಿದರೆ ಮಾನವನ ಜೀವನ ಉತ್ತಮ, ಎಲ್ಲರೂ ಸಸ್ಯಗಳನ್ನು ಸ್ವಂತ ಮಕ್ಕಳಂತೆ ಬೆಳೆಸಿ ಪೋಷಿಸಬೇಕು ಎಂದು ರೋಟರಿ ಕೆಜಿಎಫ್ ಪ್ರೈಮ್ ಕ್ಲಬ್ ಅಧ್ಯಕ್ಷ ರಘು ಅಭಿಪ್ರಾಯಪಟ್ಟರು.

    ನಗರದ ಅಂತರಗಂಗೆ ಬೆಟ್ಟದಲ್ಲಿ ರೋಟರಿ ಕೆಜಿಎಫ್ ಪ್ರೈಮ್, ರೋಟರಿ ಗ್ರೇಟರ್ ಜಯನಗರ, ರೋಟರಿ ಕೋಲಾರ ನಂದಿನಿ ಮತ್ತು ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಹಬಾಳ್ವೆ ಸಹಭಾಗಿತ್ವ ಮತ್ತು ಕೋಟಿನಾಟಿ ಯೋಜನೆಯಡಿ ಹಣ್ಣಿನ ಗಿಡ ವಿತರಿಸಿ ಮಾತನಾಡಿದರು.

    ಮನುಷ್ಯನ ಮುಂದಿನ ಭವಿಷ್ಯ ಉತ್ತಮವಾಗಿರಲು ಎಲ್ಲರೂ ಸಾಕಷ್ಟು ಗಿಡ ನಾಟಿ ಮಾಡಿ ಅವುಗಳನ್ನು ಮಕ್ಕಳಂತೆ ಪೋಷಿಸಬೇಕು. ರೋಟರಿ ಮತ್ತು ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಪರಿಸರ ಅಭಿವೃದ್ಧಿಗೆ ಪೂರಕವಾದ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮುದಾಯ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ರೋಟರಿ ಕೆಜಿಎಫ್ ಪ್ರೈಮ್ ಕಾರ್ಯದರ್ಶಿ ಡಾ. ರಾಜೇಂದ್ರ ಮೌನಿ ಮಾತನಾಡಿ, ಯುವ ಜನತೆ ಇಂತಹ ಸೇವಾ ಸಂಸ್ಥೆಯಲ್ಲಿ ಪಾಲ್ಗೊಂಡು ಸಮಾಜಕ್ಕೆ ಕೈಲಾದಷ್ಟು ಸೇವೆ ಮಾಡಬೇಕು. ಇಂತಹ ಕಾರ್ಯಕ್ರಮಗಳಿಂದ ಸಂಸ್ಥೆ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಲಿದೆ ಎಂದರು.
    ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಯುವಜನತೆ ಪರಿಸರ ಅಭಿವೃದ್ಧಿಗೆ ಪೂರಕವಾದ ಸಮುದಾಯ ಮೆಚ್ಚುವ ಕಾರ್ಯಕ್ರಮಗಳಲ್ಲಿ ಯುವಜನತೆ ತೊಡಗಿಸಿಕೊಳ್ಳಬೇಕು ಎಂದರು.

    ರೋಟರಿ ಪದಾಧಿಕಾರಿಗಳಾದ ಹರಣಿ, ಅನುರಾಧಾ, ಮಮತಾ, ರವೀಂದ್ರ, ಗೋಪಾಲರೆಡ್ಡಿ, ಶ್ರೀನಾಥ್, ಬಾಬು.ವಿ. ಬಸವರಾಜ್, ನಿಖಿಲ್ ರವೀಂದ್ರನಾಥ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts