More

    ಸವಲತ್ತು ಲಪಟಾಯಿಸುವರ ಬಗ್ಗೆ ಎಚ್ಚರ; ದಲಿತೋದ್ಧಾರಕರ ಮುಖವಾಡ ಧರಿಸಿ ವಂಚನೆ: ಆರಗ ಜ್ಞಾನೇಂದ್ರ ಬೇಸರ

    ತೀರ್ಥಹಳ್ಳಿ: ಸಮಾಜದ ಕಟ್ಟಕಡೆಯ ವರ್ಗಕ್ಕೆ ಸರ್ಕಾರದಿಂದ ಸಲ್ಲುವ ಸವಲತ್ತುಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ದಲಿತ ಸಮುದಾಯದ ಉದ್ಧಾರಕರ ಮುಖವಾಡ ಧರಿಸಿ ಜನಾಂಗದ ಹೆಸರಿನಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಲಪಟಾಯಿಸುವ ಅವಕಾಶವಾದಿಗಳನ್ನು ಬಹಿಷ್ಕರಿಸುವ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಕಂದಾಯ ಇಲಾಖೆ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 500 ಮಂದಿಗೆ ಜಾತಿ ಪ್ರಮಾಣಪತ್ರ ವಿತರಣೆ ಮಾಡಿ ಮಾತನಾಡಿ,, ಕಂದಾಯ ಇಲಾಖೆ ಅಧಿಕಾರಿಗಳು ಆಂದೋಲನದ ರೀತಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮನೆಗಳಿಗೆ ತೆರಳಿ ದಾಖಲೆ ಸಂಗ್ರಹಿಸುವ ಮೂಲಕ ಜಾತಿ ದೃಢೀಕರಣ ಪತ್ರ ಕೊಡುತ್ತಿರುವುದು ದಾಖಲೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
    ಹಲವು ಪ್ರಭಾವಿ ಸಮುದಾಯಗಳು ಕೂಡ ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ ಎಂದು ಮಾರ್ಮಿಕವಾಗಿ ನುಡಿದ ಸಚಿವ ಜ್ಞಾನೇಂದ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ದಲಿತ ಸಮುದಾಯಗಳ ಹಿತವನ್ನು ಬಯಸಿದೆ. ಇದರಿಂದ ಈ ಸಮುದಾಯಗಳಿಗೆ ಶಿಕ್ಷಣ ನೌಕರಿ ಮತ್ತು ಪದೋನ್ನತಿ ಕೂಡ ಲಭ್ಯವಿದೆ. ಆದರೆ ಜನಾಂಗದ ಹೆಸರಿನಲ್ಲಿ ಎಲ್ಲ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುವ ವಂಚಕರ ಬಗ್ಗೆ ಎಚ್ಚರ ಇರಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts