More

    ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಿ : ರೈತರಿಗೆ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಡಿ.ಸಹನಾ ಸಲಹೆ



    ಚಾಮರಾಜನಗರ : ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸವಲತ್ತುಗಳ ಸದ್ಬಳಕೆಗೆ ರೈತರು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಡಿ.ಸಹನಾ ಹೇಳಿದರು.


    ತಾಲೂಕಿನ ಕಾಗಲವಾಡಿ ಗ್ರಾಮದ ಹಿಂದುಳಿದ ವರ್ಗಗಳ ಸಮುದಾಯ ಭವನದಲ್ಲಿ ಕಾವೇರಿ ಮೈರಾಡ ಸಂಸ್ಥೆ, ರೈತಧ್ವನಿ, ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದರು.


    ಕೃಷಿಯಲ್ಲಿ ಈಗಾಗಲೇ ಹೊಸಹೊಸ ತಂತ್ರಜ್ಞಾನಗಳ ಅಳವಡಿಕೆಯಾಗಿದ್ದು, ಪ್ರಧಾನಮಂತ್ರಿ ಕೃಷಿ ಸಂಚಯ್ ಯೋಜನೆಯಡಿ ಸಹಾಯಧನ, ಹೈಬ್ರಿಡ್ ತರಕಾರಿ ಬೆಳೆಯುವುದು, ಬೆಳೆಗಳಿಗೆ ಪ್ಲಾಸ್ಟಿಕ್ ಹೊದಿಕೆ, ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ. ರೈತರು ತಮ್ಮ ಒಗ್ಗಟ್ಟು ಪ್ರದರ್ಶಿಸಿ ಇಲಾಖೆಯ ಸವಲತ್ತುಗಳನ್ನು ಪಡೆಯಬೇಕು ಎಂದರು.


    ಮಂಡ್ಯ ವಿ.ಸಿ. ಾರಂ ನಿವೃತ್ತ ಕೃಷಿ ವಿಜ್ಞಾನಿ ಮಹದೇವಯ್ಯ ಮಾತನಾಡಿ, ಹಿಂದೆ ರೈತರು ತಮ್ಮ ಮನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದನ-ಕರುಗಳ ಸಾಕಣೆ ಮಾಡುವ ಮೂಲಕ ಕೊಟ್ಟಿಗೆ ಗೊಬ್ಬರವನ್ನು ಜಮೀನಿಗೆ ಹಾಕುತ್ತಿದ್ದರು. ಇಂದು ಅಂತಹ ವಾತಾವರಣ ಕಾಣುವುದೇ ಕಷ್ಟವಾಗಿದೆ. ಇತ್ತ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಪರದಾಡುವ ಸ್ಥಿತಿ ಎದುರಾಗಿದೆ ಎಂದರು.


    ಮೈರಾಡ ಸಂಸ್ಥೆಯ ಅಧಿಕಾರಿ ಅಬ್ಜಲ್ ಪಾಷಾ ಮಾತನಾಡಿ, ರೈತ ಉತ್ಪಾದಕ ಕಂಪನಿಗಳನ್ನು ಪ್ರಾರಂಭ ಮಾಡುವುದರಿಂದ ರೈತರೇ ಸ್ವಯಂ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು. ರೈತ ಉತ್ಪಾದಕ ಕಂಪನಿಗಳಲ್ಲಿ ಷೇರುದಾರರಾಗಬೇಕಾದವರು 1100 ರೂ. ಶುಲ್ಕ ಕಟ್ಟಬೇಕು. ಒಂದು ಸಾವಿರ ಸದಸ್ಯತ್ವ ಪಡೆದಲ್ಲಿ ರಾಜ್ಯ ಸರ್ಕಾರ 10 ಲಕ್ಷ ರೂ., ಕೇಂದ್ರ ಸರ್ಕಾರ 15 ಲಕ್ಷ ರೂ. ನೆರವು ನೀಡಲಿದೆ ಎಂದರು.


    ರೈತ ಉತ್ಪಾದಕ ಕಂಪನಿ ನಿರ್ದೇಶಕರಾದ ಕಾಗಲವಾಡಿ ಶಿವಸ್ವಾಮಿ, ವಿಜಯೇಂದ್ರ, ಆರ್.ಮಹದೇವ, ಗ್ರಾಪಂ ಸದಸ್ಯರಾದ ಶ್ರೀಪಾದ, ಬಸವರಾಜು, ರವಿ, ಮಧು, ಜ್ಯೋತಿ, ಎಪಿಎಂಸಿ ಮಾಜಿ ಸದಸ್ಯ ಮಹದೇವಸ್ವಾಮಿ, ಗ್ರಾಪಂ ಮಾಜಿ ಸದಸ್ಯರಾದ ಗಣೇಶ್, ಶ್ರೀದೇವಿ, ಮರಿಸ್ವಾಮಿ, ಕೃಷಿ ಸಂಪನ್ಮೂಲ ವ್ಯಕ್ತಿ ಪುಷ್ಪಲತಾ, ಮೈರಾಡ ಸಂಸ್ಥೆಯ ಸೋಮೇಶ್ವರ್, ಗುಣಶೇಖರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts