More

    ಆರೋಗ್ಯ ತಪಾಸಣೆ ಶಿಬಿರದ ಸದ್ಬಳಕೆಯಾಗಲಿ

    ಸಂಕೇಶ್ವರ: ಸಮೀಪದ ಕಮತನೂರು ಗೇಟ್ ಗ್ರಾಮದಲ್ಲಿರುವ ಕೆಎಲ್‌ಇ ಸಿಬಿಎಸ್‌ಸಿ ಶಾಲೆಯಲ್ಲಿ ಫೆ.21ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಅಲ್ಲಮಪ್ರಭು ಕುಡಚಿ ಹೇಳಿದರು.

    ಸಮೀಪದ ಕೆಎಲ್‌ಇ ಸಿಬಿಎಸ್‌ಸಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಿಬಿರದಲ್ಲಿ ಕೆಎಲ್‌ಇ ಆಸ್ಪತ್ರೆಯಿಂದ ಹೃದಯರೋಗ, ಮೂತ್ರಕೋಶ, ನೇತ್ರ, ಶಸ್ತಚಿಕಿತ್ಸೆ, ಶ್ವಾಸಕೋಶ, ಎಲುಬು-ಕೀಲು, ಕಿವಿ ಮೂಗು, ಕ್ಯಾನ್ಸರ್, ಚಿಕ್ಕ ಮಕ್ಕಳು, ಚರ್ಮರೋಗ, ದಂತರೋಗ, ಭೌತಿಕ, ಆಯುರ್ವೇದ, ಹೋಮಿಯೋಪಥಿ ಸೇರಿ ಇತರ ಚಿಕಿತ್ಸೆಗಳ 130ಕ್ಕೂ ಅಧಿಕ ತಜ್ಞ ವೈದ್ಯರು ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಶುಗರ್ ಮತ್ತು ಹಿಮೋಗ್ಲೋಬಿನ್, ಬಿಪಿ ಇಸಿಜಿ, ಇಕೋ ತಪಾಸಣೆ ನಡೆಯಲಿದ್ದು ಉಚಿತ ಔಷಧ ನೀಡಲಾಗುವುದು. ತುರ್ತು ಚಿಕಿತ್ಸೆ ಅವಶ್ಯವಿರುವ ರೋಗಿಗಳಿಗೆ ಶಿಬಿರಲ್ಲಿ ಆಯುಷ್ಮಾನ್ ಕಾರ್ಡ್ ಮಾಡಿಕೊಡಲಾಗುವುದು. ಬರುವಾಗ ಆಧಾರ ಕಾರ್ಡ್, ರೇಷನ್ ಕಾರ್ಡ್, ಮೊಬೈಲ್ ತೆಗೆದುಕೊಂಡು ಬರಬೇಕು ಎಂದರು.

    ಹಿರಾಶುಗರ್ಸ್‌ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ ಮಾತನಾಡಿ, ಉಚಿತ ಆರೋಗ್ಯ ಶಿಬಿರದ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. ಪುರಸಭೆ ಸದಸ್ಯರಾದ ಸುನೀಲ ಪರ್ವತರಾವ, ಸಂಜಯ ಶಿರಕೋಳಿ, ಮುಖಂಡರಾದ ರೋಹನ ನೇಸರಿ, ಆನಂದ ಸಂಸುದ್ದಿ, ಮೊಯಿನಲಿ ನದಾಫ್, ಶಶಿಕಾಂತ ಗಡಕರಿ, ಪ್ರವೀಣ ಮಿಶ್ರಕೋಟಿ, ಬಸವರಾಜ ಪಾಟೀಲ, ಗಣೇಶ ನಡದಗಲ್ಲಿ, ಚೇತನ ಸಂಕೇಶ್ವರಿ, ಪ್ರಾಚಾರ್ಯ ಬಸವರಾಜ ಕಡೇಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts