More

    ಸವದತ್ತಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ 25 ಕೋ.ರೂ.

    ನರಗುಂದ: ನರಗುಂದ ಮತಕ್ಷೇತ್ರದ ಎಲ್ಲ ರಸ್ತೆಗಳ ಅಭಿವೃದ್ಧಿಗೆ 900 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ಅದರಂತೆ ನನಗೆ ರಾಜಕೀಯ ಜೀವನ ಕಲ್ಪಿಸಿಕೊಟ್ಟಿರುವ ಸವದತ್ತಿ ಮತಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ 25 ಕೋ.ರೂ. ಅನುದಾನ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಸಮೀಪದ ಆಚಮಟ್ಟಿ ಕ್ರಾಸ್​ನಿಂದ ಚುಳಕಿವರೆಗೆ 10 ಕೋ.ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ವಿಭಜಕ ನಿರ್ವಣ, ವಿದ್ಯುತ್ ದೀಪಗಳ ಅಳವಡಿಕೆ ಹಾಗೂ 1 ಕೋ.ರೂ. ವೆಚ್ಚದಲ್ಲಿ ಶ್ರೀ ಉಡಚಮ್ಮ ದೇವಿಯ ದೇವಸ್ಥಾನ, 25 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀ ಕಲ್ಮೇಶ್ವರ ದೇವಸ್ಥಾನದ ಜೀಣೋದ್ಧಾರ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಮಾಜಿ ಶಾಸಕ ದಿವಂಗತ ಚಂದ್ರಶೇಖರ ಮಾಮನಿ ಅವರ ಗರಡಿಯಲ್ಲಿ ನನ್ನ ರಾಜಕೀಯ ಜೀವನ ಆರಂಭಿಸಿದೆ. ನಾನು ಜಿಪಂ ಚುನಾವಣೆಗೆ ಸ್ಪರ್ಧಿಸಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಚಮಟ್ಟಿ ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾನು ಕೃಷಿ ಖಾತೆ ಬಯಸಿದ್ದೆ. ಆದರೆ, ಅದಕ್ಕಿಂತ ದೊಡ್ಡದಾದ ಲೋಕೋಪಯೋಗಿ ಇಲಾಖೆ ಖಾತೆ ನೀಡಿದ್ದಾರೆ ಎಂದರು.

    ಸವದತ್ತಿ ಕ್ಷೇತ್ರದಲ್ಲಿ ಈಗಾಗಲೇ 10 ಕೋ.ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಚುಳಕಿಯಿಂದ ಯಲ್ಲಮ್ಮನಗುಡ್ಡದ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ 8 ಕೋ.ರೂ. ನೀಡಲಾಗುವುದು. ಯರಗಟ್ಟಿಯಿಂದ ಮುನವಳ್ಳಿ, ನರಗುಂದ, ಕುಷ್ಟಗಿ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

    ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಮಾತನಾಡಿ, ರಾಜಕೀಯವಾಗಿ ಅದೆಷ್ಟೇ ವೇಗವಾಗಿ ಬೆಳೆದರೂ ನಾವು ಹುಟ್ಟಿದ, ಬೆಳೆದ ಊರು ಮತ್ತು ಕೈಹಿಡಿದು ಬೆಳೆಸಿದ ಸಮಾಜದವರನ್ನು ಎಂದಿಗೂ ಮರೆಯಬಾರದು ಎಂಬುದಕ್ಕೆ ಸಚಿವ ಸಿ.ಸಿ. ಪಾಟೀಲ ಅವರೇ ಸಾಕ್ಷಿ. ನಮ್ಮ ತಂದೆಯವರ ಜತೆಗೆ ಸಿ.ಸಿ. ಪಾಟೀಲ ಅವರು ಓಡಾಡುತ್ತಿರುವುದನ್ನು ನೋಡಿದ್ದೇನೆ. ನಾನು ಶಾಸಕನಾದ ನಂತರ ಮುಖ್ಯಮಂತ್ರಿಯವರ ವಿಶೇಷ ಅನುದಾನಡಿ 50 ಕೋ.ರೂ.ಗಳನ್ನು ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಅನುದಾನ ನೀಡಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts