More

    ಸವಣೂರಲ್ಲಿ ಮತ್ತೊಂದು ಕರೊನಾ ಪಾಸಿಟಿವ್

    ಹಾವೇರಿ: ಜಿಲ್ಲೆಯಲ್ಲಿ 24 ತಾಸು ಅಂತರದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಭಾನುವಾರ ಪತ್ತೆಯಾದ ರೋಗಿ (ಪಿ 639)ಯ ಅಣ್ಣನಲ್ಲಿ (ಪಿ 672) ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರೂ ಏ. 28ರಂದು ಮುಂಬೈನಿಂದ ಮೆಣಸಿನಕಾಯಿ ಲಾರಿ ಮೂಲಕ ಸವಣೂರಿಗೆ ಆಗಮಿಸಿದ್ದರು. ಇವರೊಂದಿಗೆ ರೋಗಿ ನಂಬರ್ 672ರ 19ವರ್ಷದ ಮಗನೂ ಬಂದಿದ್ದು, ಆತನಲ್ಲಿ ಸೋಂಕು ಪತ್ತೆಯಾಗಿಲ್ಲ. ಈ ಮೂವರು 14 ಜನರಿದ್ದ ಮನೆಯಲ್ಲಿ ಒಂದು ದಿನ ವಾಸವಿದ್ದರು. ಏ. 29ರಂದು ಮೂವರನ್ನು ಹಾವೇರಿಗೆ ಕರೆತಂದು ತಪಾಸಣೆ ನಡೆಸಿ ಜಿಲ್ಲಾಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. ಮೊದಲ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಅವರ ಮನೆಯಲ್ಲಿದ್ದ 14 ಜನ ಸೇರಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 23 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

    ರೋಗಿ ನಂಬರ್ 672ರಲ್ಲಿ ಸೋಮವಾರವೇ ಸೋಂಕು ಪತ್ತೆಯಾಗಿತ್ತು. ಆದರೆ, ಮತ್ತೊಂದು ಪರೀಕ್ಷೆಗೆ ಗಂಟಲ ದ್ರವ ಕಳಿಸಲಾಗಿತ್ತು. ಅದು ಮಂಗಳವಾರ ಖಚಿತವಾಗಿದೆ.

    ಲಾರಿಯಲ್ಲಿ ಬಂತು ಕರೊನಾ…: ಕರೊನಾ ಹರಡದಂತೆ ತಡೆಯಲು ಜಿಲ್ಲೆಯ ಗಡಿಯಲ್ಲಿ ಚೆಕ್​ಪೋಸ್ಟ್ ನಿರ್ವಿುಸಿದ್ದರೂ ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಜಿಲ್ಲೆಯಲ್ಲಿ ಸಂಶಯ ಮೂಡತೊಡಗಿದೆ. ಲಾರಿಯಲ್ಲಿ ಚಾಲಕ ಸೇರಿ ಮೂವರಿಗೆ ಮಾತ್ರ ಸಂಚರಿಸಲು ಅವಕಾಶವಿದೆ. ಆದರೆ, ಇಲ್ಲಿ ನಾಲ್ವರು ಪ್ರಯಾಣಿಸಿದ್ದಾರೆ. ಅದು ಲಾರಿಗೆ ಸಂಬಂಧಪಡದವರು ಬಂದಿದ್ದು, ಚೆಕ್​ಪೋಸ್ಟ್​ನಲ್ಲಿ ಸಮರ್ಪಕವಾಗಿ ತಪಾಸಣೆ ನಡೆಸದೇ ಇರುವುದರಿಂದ ಜಿಲ್ಲೆಗೆ ಕರೊನಾ ಎಂಟ್ರಿ ಕೊಟ್ಟಂತಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts