More

    ಸರ್ಕಾರ ನೇಕಾರರ ಕೈಬಿಡಲ್ಲ

    ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ

    ಉಳ್ಳಾಗಡ್ಡಿ-ಖಾನಾಪುರ: ನೇಕಾರರ ಪ್ರತಿಯೊಂದು ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
    ಇಲ್ಲಿನ ಶ್ರೀ ಬನಶಂಕರಿ ವಿದ್ಯುತ್ ಚಾಲಿತ ಮಗ್ಗಗಳ ಔದ್ಯೋಗಿಕ ಸಹಕಾರಿ ಸಂಘ ನಿ. ಯಮಕನಮರಡಿ ಆನಂದ-ಹತ್ತರಗಿ ವತಿಯಿಂದ ನಿರ್ಮಿಸುತ್ತಿರುವ ಸತೀಶ ನೇಕಾರ ಕಾಲನಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ ನೇಕಾರರ ಕಾಲನಿಗೆ ಮೂಲ ಸೌಕರ್ಯ ಸೇರಿ, ಆನಂದಪುರ ಗ್ರಾಮದಲ್ಲಿ ರಸ್ತೆ, ನೀರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

    ಮೂಲ ಕಸಬುದಾರರಾಗಿ ಉಪಜೀವನ ಸಾಗಿಸುವ ಬಡ ನೇಕಾರರಿಗೆ ಸರ್ಕಾರ ಅನುಕೂಲ ಮಾಡಲಿದೆ. ಸರ್ಕಾರ ನೇಕಾರರನ್ನು ಎಂದೂ ಕೈ ಬಿಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಜತೆಗೆ ಮಾತನಾಡಿ, ವಿದ್ಯುತ್ ಬಿಲ್ ಮತ್ತು ಇತರ ಅನುಕೂಲತೆಗಳನ್ನು ಮಾಡಿಕೊಡಲಾಗುವುದು. ಮುಂದಿನ ದಿನಗಳಲ್ಲಿ ನೂತನ ಜವಳಿ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ ವೀರಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಈರಣ್ಣ ಬಿಸಿರೊಟ್ಟಿ, ರವಿಂದ್ರ ಜಿಂಡ್ರಾಳಿ, ಸುನೀಲ ಹಣಮನ್ನವರ, ಮಹಾದೇವ ಪಟೋಳಿ, ಸಂತೋಷ ಅತ್ತಿಮರದ, ಸಂತೋಷ ನಾಯಿಕ, ಸಿದ್ದು ಕುಡಚಿ, ಮಾಹಾರುದ್ರ ತೇರಣಿ, ಆನಂದ ಮಗದುಮ್ಮ, ಮಹಾಂತೇಶ ಮಗದುಮ, ರಾಜು ಮಾರ‌್ಯಾಳಿ, ಶಶಿಕಾಂತ ಹಟ್ಟಿ ಇತರರಿದ್ದರು.

    ಉಳ್ಳಾಗಡ್ಡಿ-ಖಾನಾಪುರದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ನೇಕಾರ ಕಾಲನಿ ಶಂಕುಸ್ಥಾಪನೆ ನೆರವೇರಿಸಿದರು. ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಈರಣ್ಣ ಬಿಸಿರೊಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts