More

    ಸರ್ಕಾರಿ ಕಚೇರಿಗಳಿಂದಲೇ ಹೆಸ್ಕಾಮ್ ಗೆ ಶಾಕ್!

    ಸುಭಾಸ ಧೂಪದಹೊಂಡ ಕಾರವಾರ

    ಮನೆಯ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ ಎಂದರೆ ಹೆಸ್ಕಾಂ ಎರಡು ತಿಂಗಳೊಳಗೆ ಸಂಪರ್ಕ ಕಡಿತ ಮಾಡುತ್ತದೆ. ಆದರೆ, ಸರ್ಕಾರಿ ಇಲಾಖೆಗಳೇ ಹೆಸ್ಕಾಮ್ೆ ಕೋಟ್ಯಂತರ ರೂಪಾಯಿಯ ಬಾಕಿ ನೀಡಬೇಕಿದೆ. ಇದು ಹೆಸ್ಕಾಂ ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ. ಬಾಕಿ ಹಣ ವಸೂಲಿಗಾಗಿ ಕಚೇರಿಗಳಿಗೇ ತೆರಳುತ್ತಿದ್ದಾರೆ.

    ಶಿರಸಿ, ದಾಂಡೇಲಿ, ಕಾರವಾರ, ಹೊನ್ನಾವರ ಹೀಗೆ ನಾಲ್ಕು ವಿಭಾಗಗಳನ್ನು ಹೊಂದಿದ ಶಿರಸಿ ಹೆಸ್ಕಾಂ ವೃತ್ತಕ್ಕೆ ಜಿಲ್ಲೆಯ ವಿವಿಧ ಇಲಾಖೆಗಳಿಂದ ಒಟ್ಟು 24.10 ಕೋಟಿ ರೂ. ಹಣ ಬರುವುದು ಬಾಕಿ ಇದೆ. ಇಷ್ಟು ದೊಡ್ಡ ಪ್ರಮಾಣದ ಬಾಕಿ ಹೆಸ್ಕಾಂ ಕಾರ್ಯನಿರ್ವಹಣೆಗೆ ಅಡಚಣೆ ಉಂಟಾಗುತ್ತಿದೆ. ಇದನ್ನು ಪರಿಹರಿಸಿಕೊಳ್ಳಲು ಅಧಿಕಾರಿಗಳು ಪತ್ರ ವ್ಯವಹಾರ ಮಾಡುವ ಜತೆಗೆ ಸಂಬಂಧಪಟ್ಟ ಇಲಾಖೆ ಕಚೇರಿಗೇ ಹೋಗಿ ಮಾತುಕತೆ ನಡೆಸಿ ಶೀಘ್ರ ಬಾಕಿ ಪಾವತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಕುಡಿಯುವ ನೀರಿನ ಯೋಜನೆಯದ್ದು ಹೆಚ್ಚು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅತಿ ಹೆಚ್ಚು ಅಂದರೆ 21.55 ಕೋಟಿ ರೂ. ಹಣ ಬರುವುದು ಬಾಕಿ ಇದೆ. ವಿದ್ಯುತ್ ಉರಿಸಿದ ಬಿಲ್​ಗಳ ಜತೆಗೆ, ಹೊಸ ಸ್ಥಾವರ ನಿರ್ವಣ, ಕಂಬಗಳನ್ನು ಹಾಕಿರುವುದು ಹೀಗೆ ವಿವಿಧ ಕಾರ್ಯಗಳಿಗಾಗಿ ಮಾಡಿದ ಖರ್ಚುಗಳನ್ನು ಇನ್ನೂ ನೀಡಿಲ್ಲ. ಇದರಿಂದ ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಮ್ಮಪ್ಪ ಶೆಟ್ಟಿ ಸೋಮವಾರ ಕಾರವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ತೆರಳಿ ಲೆಕ್ಕಪತ್ರ ತಾಳೆ ನೋಡಿದರು.

    ಬಾಕಿ ಉಳಿಸಿಕೊಂಡ ಇತರ ಇಲಾಖೆಗಳು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆಗಳು ಮತ್ತು ಕಚೇರಿಗಳು ಸೇರಿ 23.34 ಲಕ್ಷ ರೂ., ಸಣ್ಣ ನೀರಾವರಿ ಇಲಾಖೆ 20.66 ಲಕ್ಷ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ 18.04 ಲಕ್ಷ, ಪೊಲೀಸ್ ಇಲಾಖೆ 12.42 ಲಕ್ಷ ರೂ. ನೀಡಬೇಕಿದೆ. ಕಂದಾಯ ಇಲಾಖೆ 7.45 ಲಕ್ಷ, ಕಾನೂನು ಇಲಾಖೆ 5.15 ಲಕ್ಷ ರೂ.ಗಳನ್ನು ಬಾಕಿ ಇರಿಸಿಕೊಂಡಿವೆ. ಇನ್ನು ಕೇಂದ್ರ ಸರ್ಕಾರದ ಅಡಿ ಇರುವ ಬಿಎಸ್​ಎನ್​ಎಲ್ ಹೆಸ್ಕಾಂಗೆ 1.43 ಕೋಟಿ ರೂ. ನೀಡಬೇಕು. ಇವು ದೊಡ್ಡ ಮೊತ್ತದ ಹಣ ಬಾಕಿ ಇರುವ ಇಲಾಖೆಗಳಾಗಿದ್ದು, ಇನ್ನೂ ಹಲವು ಇಲಾಖೆಗಳಿಂದ ಸಣ್ಣ ಪ್ರಮಾಣದ ಬಾಕಿ ಇದ್ದೇ ಇದೆ.

    ವಿದ್ಯುತ್ ಬಳಕೆ ಮಾಡಿದ ಬಿಲ್ ಮಾತ್ರವಲ್ಲ. ಕಂಬಗಳು,ಹೊಸ ಸ್ಥಾವರಗಳ ಡಿಪಾಸಿಟ್ ಹೀಗೆ ವಿವಿಧ ಸ್ವರೂಪದ ಹಣ ಬಾಕಿ ಇದೆ. ಸರ್ಕಾರದಿಂದ ಬರುವ ಹಣ ನಮಗೆ ಬಂದೇ ಬರುತ್ತದೆ. ಆದರೆ, ಲೆಕ್ಕ ಪತ್ರ ತಾಳೆ ನೋಡಿ ಅಧಿಕಾರಿಗಳ ಜತೆ ರ್ಚಚಿಸಿ ಶೀಘ್ರ ಪಡೆಯಲು ಪ್ರಯತ್ನಿಸುತ್ತೇವೆ.

    | ತಿಮ್ಮಪ್ಪ ಶೆಟ್ಟಿ ಹೆಸ್ಕಾಂ ಎಸ್​ಇ, ಶಿರಸಿ ವೃತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts