More

    ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ

    ಮೈಸೂರು: ಕನ್ನಡಿಗರಿಗೆ ಉದ್ಯೋಗ ಅವಕಾಶ ಹೆಚ್ಚಿಸುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಈ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ ಕಾಯ್ದೆಯಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಕದಂಬ ಕನ್ನಡ ಸೈನ್ಯದಿಂದ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ವರದಿ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

    ಮೂರು ದಶಕಗಳಿಂದ ಕಡತದಲ್ಲಿ ಉಳಿದಿದ್ದ ಡಾ.ಸರೋಜಿನಿ ಮಹಿಷಿ ವರದಿಗೆ ಮರುಜೀವ ಬಂದಿದ್ದು, ಪರಿಷ್ಕೃತ ವರದಿಯನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ 2017ರ ಫೆ.3ರಂದು ಸಲ್ಲಿಸಲಾಗಿತ್ತು. ಆದರೆ, ಕಾಯ್ದೆಯಾಗಿ ಜಾರಿಗೆ ತರಲಿಲ್ಲ. ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಕಾಯ್ದೆ ಮಾಡಿದರೆ ಕಾನೂನಿಗೆ ಬಲ ಬರಲಿದೆ. ಆದ್ದರಿಂದ ಫೆ.17ರಂದು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

    ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಮೈಸೂರು ಜಿಲ್ಲಾಧ್ಯಕ್ಷ ಎ.ನಾಗೇಂದ್ರ, ವಿಭಾಗ ಸಂಚಾಲಕ ಎನ್.ವೆಂಕಟೇಶ್, ಮಂಡ್ಯ ಜಿಲ್ಲಾ ಸಂಚಾಲಕ ಭಗವಾನ್, ರಾಜ್ಯ ಸಮಿತಿ ಸದಸ್ಯ ಉಮ್ಮಡಹಳ್ಳಿ ನಾಗೇಶ್, ತಿ.ನರಸೀಪುರ ತಾಲೂಕು ಅಧ್ಯಕ್ಷ ಎಸ್.ಮಹದೇವನಾಯಕ, ಮುಖಂಡರಾದ ದಾಮೋಜಿರಾವ್, ಚಂದ್ರಶೇಖರ್, ಉಮ್ಮಡಹಳ್ಳಿ ಬಾಬು, ಎಂ.ಸಿ. ಕಾಂತರಾಜು, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ರಮೇಶ್ ರಾಂಪುರ, ನಿತ್ಯಾನಂದ ಸುನಿಲ್‌ಕುಮಾರ್, ಜೀವನ್ ನೀಲನಕೊಪ್ಪಲು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts